ಪುಟ್ಟಣ್ಣ ಕಣಗಾಲ್ ಭಾರತೀಯ ಚಿತ್ರರಂಗದಲ್ಲಿಯೇ ಬೆಳ್ಳಿತೆರೆಯ ಭಾವಶಿಲ್ಪಿ ಎಂದೇ ಹೆಸರು ಮಾಡಿರುವ ದೈತ್ಯ ನಿರ್ದೇಶಕ. ಅದ್ಭುತ ಕಥಾಹಂದರ, ಸಾಮಾಜಿಕ ಸಂದೇಶವುಳ್ಳ ಚಿತ್ರಗಳ ಮೂಲಕ ಕನ್ನಡ ಸಿನಿರಂಗದ ಚಿತ್ರಬ್ರಹ್ಮ ಎನಿಸಿದ್ದಾರೆ. ಕಾದಂಬರಿ ಆಧಾರಿತ ಚಿತ್ರಗಳು, ಮಹಿಳಾ ಕೇಂದ್ರಿತ ಚಿತ್ರಗಳ ಮೂಲಕ ಅದ್ಭುತ ಚಿತ್ರಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಇವರು ಚಿತ್ರಗಳು ಕಲಾತ್ಮಕ ಚಿತ್ರಗಳು ಮತ್ತು ಕಮರ್ಷಿಯಲ್ ಚಿತ್ರಗಳಿಗೆ ಸೇತುವೆಯಂತಿದ್ದವು. ಸಾಮಾಜಿಕ ಸಂದೇಶವನ್ನು ಪಾತ್ರಗಳ ಗಟ್ಟಿಯಾದ ಅಭಿನಯ, ಪರಿಣಾಮಕಾರಿ ದೃಶ್ಯಗಳ ಮೂಲಕ ತೋರಿಸುತ್ತಿದ್ದರು.ಮೂರು ಬಾರಿ ಫಿಲಂಫೇರ್, ಹಲವು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಪುಟ್ಟಣ್ಣ, ತನ್ನ ಸಿನಿಮಾಗಳ ಮೂಲಕ ವಿಷ್ಣು, ಅಂಬಿ, ಶ್ರೀನಾಥ್ ಸೇರಿದಂತೆ ಹಲವು ಕಲಾವಿದರನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ. ಇಲ್ಲಿ ಪುಟ್ಟಣ್ಣ ಕಣಗಾಲ್ ರ ಟಾಪ್ 10 ಚಿತ್ರಗಳನ್ನು ನೀಡಲಾಗಿದೆ.
ಬೆಳ್ಳಿ ಮೋಡ ಚಿತ್ರದಲ್ಲಿ ಕಲ್ಯಾಣ್ ಕುಮಾರ್ ಮತ್ತು ಕಲ್ಪನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.ಈ ಚಿತ್ರ ಇದೇ ಹೆಸರಿನ ತ್ರೀವೇಣೀಯವರ ರವರ ಕಾದಂಬರಿ ಆಧಾರಿತವಾಗಿದೆ. ಬೆಳ್ಳಿಮೋಡ ಎಸ್ಟೇಟ್ ಯಜಮಾನನ ಪುತ್ರಿಯ ಸುತ್ತ ಕಥೆ ಸುತ್ತುತ್ತದೆ.
Landmark Movies Directed By Legendary Director Puttanna Kanagal-Belli Moda/top-listing/landmark-movies-directed-by-legendary-director-puttanna-kanagal-belli-moda-3-5997-521.html
ಉಪಾಸನೆ ಚಿತ್ರದಲ್ಲಿ ಆರತಿ, ಲೀಲಾವತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರದ್ಧಾ ಎಂಬ ಯುವತಿಯ ಸಂಗೀತ ಸಾಧನೆ ಕಥೆಯನ್ನು ಹೊಂದಿತ್ತು. ಈ ಚಿತ್ರ ಆರು ರಾಜ್ಯ ಪ್ರಶಸ್ತಿ ಮತ್ತು ಫಿಲ್ಮ್ ಪೇರ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆಯಿತು.
Landmark Movies Directed By Legendary Director Puttanna Kanagal-Upasane/top-listing/landmark-movies-directed-by-legendary-director-puttanna-kanagal-upasane-3-5998-521.html
ಎಂ.ಕೆ.ಇಂದಿರಾರವರ ಗೆಜ್ಜೆ ಪೂಜೆ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಕಲ್ಪನಾ, ಗಂಗಾಧರ್ ಮತ್ತು ಲೀಲಾವತಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ದೇವದಾಸಿ ಪದ್ಧತಿಯ ಅನಿಷ್ಟವನ್ನು ಈ ಚಿತ್ರ ಹೇಳುತ್ತದೆ.
Landmark Movies Directed By Legendary Director Puttanna Kanagal-Gejje Pooje/top-listing/landmark-movies-directed-by-legendary-director-puttanna-kanagal-gejje-pooje-3-5999-521.html