ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಿಟ್ ಆ್ಯಂಡ್ ಫ್ಲಾಪ್ ಚಲನಚಿತ್ರಗಳು

  ಬಾಲ ಕಲಾವಿದರಾಗಿ ಚಿತ್ರರಂಗ ಪ್ರವೇಶಿಸಿ ತಮ್ಮ ಅಭಿನಯದಿಂದ ರಾಷ್ಟ್ರ ಪ್ರಶಸ್ತಿ ಪಡೆದ ನಟ ಪುನೀತ್ ರಾಜಕುಮಾರ್..ನಂತರ ಅಪ್ಪು ಚಿತ್ರದಿಂದ ನಾಯಕ ನಟನಾಗಿ ಸಿನಿಪಯಣ ಆರಂಭಿಸಿದ ಪುನೀತ್ ಹತ್ತಕ್ಕೂ ಹೆಚ್ಚು ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡಿದರು. ನಟನಾಗಿ ಮಾತ್ರವಲ್ಲದೆ ಗಾಯಕನಾಗಿ, ನಿರ್ಮಾಪಕನಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಹಿಟ್ ಆ್ಯಂಡ್ ಫ್ಲಾಫ್ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ. ಪುನೀತ್ ಬಾಲ ಕಲಾವಿದನಾಗಿ ಮತ್ತು ಅತಿಥಿ ಪಾತ್ರಗಳಲ್ಲಿ ನಟಿಸಿದ ಚಿತ್ರಗಳನ್ನು ಇಲ್ಲಿ ಪರಿಗಣಿಸಿಲ್ಲ.

  1. ಅಪ್ಪು (Blockbuster)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Romance

  ಬಿಡುಗಡೆ ದಿನಾಂಕ

  26 Apr 2002

  ಪುನೀತ್ ರಾಜಕುಮಾರ್ ನಾಯಕನಾಗಿ ನಟಿಸಿದ ಮೊದಲ ಚಿತ್ರ. ತೆಲುಗಿನ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ನಿರ್ದೇಶನದ ಈ ಚಿತ್ರ ಇನ್ನೂರಕ್ಕೂ ಹೆಚ್ಚು ದಿನಗಳನ್ನು ಪೂರೈಸಿ ದಾಖಲೆ ಬರೆಯಿತು. ನಂತರ ತೆಲಗು, ತಮಿಳು ಮತ್ತು ಬಂಗಾಳಿ ಭಾಷೆಗಳಿಗೆ ರಿಮೇಕ್ ಆಯಿತು. ಈ ಚಿತ್ರದಿಂದ ರಕ್ಷಿತಾ ಚಿತ್ರರಂಗ ಪ್ರವೇಶಿಸಿದರು.

  2. ಅಭಿ (Super-Hit)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Drama

  ಬಿಡುಗಡೆ ದಿನಾಂಕ

  25 Apr 2003

  ದಿನೇಶ್ ಬಾಬು ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದ ಮೂಲಕ ರಮ್ಯಾ ಕನ್ನಡ ಚಿತ್ರರಂಗ ಪ್ರವೇಶಿಸಿದರು.ಈ ಚಿತ್ರ ಕೂಡ ತೆಲಗು ಭಾಷೆಗೆ ರಿಮೇಕ್ ಆಯಿತು..ತಾಯಿ ಮಗನ ಬಾಂಧವ್ಯದ ಕಥೆ ಪ್ರೇಕ್ಷಕರ ಮನ ಮುಟ್ಟಿತು.

  3. ವೀರ ಕನ್ನಡಿಗ (Hit)

  ವಿಮರ್ಶಕರ ವಿಮರ್ಶೆ

  ಪ್ರವರ್ಗ

  Drama

  ಬಿಡುಗಡೆ ದಿನಾಂಕ

  01 Jan 2004

  ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ವಿಭಿನ್ನ ನಿರ್ದೇಶಕರು ಮತ್ತು ನಾಯಕ-ನಾಯಕಿಯರೊಂದಿಗೆ ಸಿದ್ಧವಾದ ಚಿತ್ರ ವೀರ ಕನ್ನಡಿಗ. ತೆಲಗುವಿನಲ್ಲಿ ಜ್ಯೂನಿಯರ್ ಎನ್.ಟಿ.ಆರ್ ನಟಿಸಿದ ಚಿತ್ರ ಫ್ಲಾಪ್ ಆದರೆ, ಕನ್ನಡದಲ್ಲಿ ಪುನೀತ್ ನಟಿಸಿದ್ದ ಈ ಚಿತ್ರ ಹಿಟ್ ಆಯಿತು..ಜನೇವರಿ 1, 2004 ರಂದು ಕನ್ನಡ ಸಿನಿಮಾ ಬಿಡುಗಡೆಯಾದರೆ, ಅದರ ಮರುದಿನ ಆಂಧ್ರದಲ್ಲಿ ತೆಲಗು ಚಿತ್ರ ಬಿಡುಗಡೆಯಾಯಿತು. ಚಿತ್ರದಲ್ಲಿ ವೈಲೆಂಟ್ ಕಂಟೆಂಟ್ ಹೆಚ್ಚಿದೆ ಎಂದು ಕೆಲ ವಿಮರ್ಶಕರು ದೂರಿದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X