For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಯಾರಿಗುಂಟು ಯಾರಿಗಿಲ್ಲ

  By Staff
  |

  ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ "ಯಾರಿಗುಂಟು ಯಾರಿಗಿಲ್ಲ" ಮಹಿಳೆಯರ ಮನರಂಜನಾ ಸ್ಪರ್ಧೆ, ಮತ್ತೊಮ್ಮೆ ಕಿರುತರೆಯ ಮೇಲೆ ಮೂಡಿಬರಲಿದೆ. ಖ್ಯಾತ ತಾರೆ ಹಾಗೂ ಕಿರುತೆರೆಯ ಕಾರ್ಯಕ್ರಮ ನಿರೂಪಕಿ ವರ್ಷ ಈ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

  ವಿಶೇಷವಾಗಿ ಮಹಿಳೆಯರಿಗೆ ರೂಪಿಸಿರುವ ಈ ಕಾರ್ಯಕ್ರಮವು ಜುಲೈ8 ರಿಂದ ಪ್ರತಿ ಬುಧವಾರ ಮತ್ತು ಗುರುವಾರ ರಾತ್ರಿ 9ಕ್ಕೆ ಪ್ರಸಾರವಾಗಲಿದೆ. 18 ರಿಂದ 35 ವರ್ಷದೊಳಗಿನ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಈ ಬಾರಿಯ "ಯಾರಿಗುಂಟು ಯಾರಿಗಿಲ್ಲ" ಕಾರ್ಯಕ್ರಮ ಕಂತುಗಳಲ್ಲಿ ಪ್ರಸಾರವಾಗಲಿದೆ.

  ಪ್ರತಿ ಕಂತಿನಲ್ಲಿ ನಾಲ್ಕು ಜನ ಸ್ಪರ್ಧಿಗಳಿದ್ದು ನಾಲ್ಕು ಸುತ್ತು ಹೊಂದಿರುತ್ತದೆ. ಪ್ರತಿ ಕಂತನ್ನು ಮನೋರಂಜಕವಾಗಿ ನಿರ್ಮಿಸಲಾಗಿದ್ದು ಪ್ರತಿ ಸುತ್ತಿನಲ್ಲಿ ಸದಸ್ಯರಿಗೆ ಸಾಮಾನ್ಯ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರತೀ ದಿನದಲ್ಲಿ ನಡೆಯುವ ಸನ್ನಿವೇಶ ಆಧಾರಿತ ಸುಲಭದ ಪ್ರಶ್ನೆಗಳಿಗೆ ಉತ್ತರಿಸಿ ಹಣ ಮತ್ತು ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಭಾಗವಹಿಸುವವರಿಗಿದೆ. ಸ್ಪರ್ಧಿಗಳ ಚುರುಕುತನ ಮತ್ತು ಅದೃಷ್ಟ, ಕಾರ್ಯಕ್ರಮದ ವಿಜೇತರನ್ನಾಗಿ ಮಾಡುವಲ್ಲಿ ಸಹಕರಿಸುತ್ತದೆ ಎಂದು ಜೀ ಕನ್ನಡದ ನಾನ್ ಫಿಕ್ಷನ್ ಮುಖ್ಯಸ್ಥೆ ವೈಷ್ಣವಿ ಹೇಳುತ್ತಾರೆ.

  ನಾಲ್ಕು ಸುತ್ತುಗಳಲ್ಲಿ ಸ್ಪರ್ಧಿಗಳಿಗೆ ಬೇರೆ ಬೇರೆ ಸನ್ನಿವೇಶ ಆಧಾರಿತ ಪ್ರಶ್ನೆಗಳನ್ನು ಕೇಳಲಾಗುತ್ತದೆ. 'ಸೂಪರ್ 5' ಸುತ್ತಿನಲ್ಲಿ ಸ್ಪರ್ಧಿಗಳಿಗೆ ಕೇಳಲಾದ ಪ್ರಶ್ನೆಗೆ ಉತ್ತರಗಳನ್ನು ನೀಡಬೇಕು. ಇನ್ನು ಎರಡನೇ ಸುತ್ತಿನ ಹೆಸರು "ಲಕ್ ಬೈ ಚಾನ್ಸ್" ಈ ಸುತ್ತಿನಲ್ಲಿ ಸ್ಪರ್ಧಿಗಳಿಗೆ ತಲಾ ಒಂದು ಪ್ರಶ್ನೆ ಕೇಳಲಾಗುವುದು. ಸರಿಯಾದ ಉತ್ತರ ನೀಡಿದವರಿಗೆ ಈ ರೌಂಡ್‌ನಲ್ಲಿ ಅದೃಷ್ಟ ಚಕ್ರವನ್ನು ನೀಡಲಾಗುತ್ತದೆ. "ಬಿಡ್ ಮಾಡಿ ದುಡ್ಡ್ ಮಾಡಿ" ಎಂದು. ಈ ಸುತ್ತಿನಲ್ಲಿ ಸ್ಫರ್ಧಿಗಳು ಅವರ ಇತರೆ ಸ್ಪರ್ಧಿಗಳ ಮೇಲೆ ಅವರು ಗೆದ್ದಿರುವ ಹಣದಲ್ಲಿ ಸ್ಪರ್ಧಿಗಳಿಗೆ ಇಷ್ಟವಾಗುವಷ್ಟು ದುಡ್ಡುನ್ನು ಬಿಡ್ ಮಾಡಬಹುದು. ಕೊನೆಯ ಸುತ್ತು "ಯಾರಿಗುಂಟು ಯಾರಿಗಿಲ್ಲ" ಈ ಸುತ್ತಿನಲ್ಲಿ ಉಳಿದಿರುವ ಇಬ್ಬರು ಸ್ಪರ್ಧಿಗಳ ನಡುವೆ ಯಾರು ಗೆಲ್ಲತ್ತಾರೆ ಎನ್ನುವ ನಿರ್ಣಾಯಕ ಸುತ್ತು. ಪ್ರತಿ ಕಂತಿನ ವಿಜೇತರಿಗೆ ಪ್ರಾಯೋಜಕರಿಂದ ಆಕರ್ಷಕ ಬಹುಮಾನ ಸಹ ಇದೆ.

  ಜೀ ಕನ್ನಡ ವಾಹಿನಿಯು ಜನರಿಗೆ ಇಷ್ಟವಾಗುವಂತಹ ಕಾರ್ಯಕ್ರಮಗಳನ್ನೇ ನೀಡುತ್ತಾ ಬಂದಿದೆ, ಜನರ ಅಭಿರುಚಿಯನ್ನು ಅರ್ಥ ಮಾಡಿಕೊಂಡಿರುವ ಜೀ ಕನ್ನಡ, ಮಹಿಳೆಯರಿಗಾಗಿ ಪೂರ್ತಿ ಪ್ರಮಾಣದಲ್ಲಿ ಮೀಸಲಿಟ್ಟ ಕಾರ್ಯಕ್ರಮದ ಅಗತ್ಯವನ್ನು ಗಮನಿಸಿ "ಯಾರಿಗುಂಟು ಯಾರಿಗಿಲ್ಲ" ಕಾರ್ಯಕ್ರಮವನ್ನು ಪುನಃ ಪ್ರಾರಂಭಿಸುತ್ತಿದೆ" ಎಂದು ಜೀ ಕನ್ನಡದ ಮುಖ್ಯಸ್ಥ ಶೇಖರ್ ಹೇಳುತ್ತಾರೆ.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X