»   »  ಜೀ ಕನ್ನಡ ನೃತ್ಯ ರಸಸಂಜೆ ಸವಿಯೋಣ ಬಾರಾ!

ಜೀ ಕನ್ನಡ ನೃತ್ಯ ರಸಸಂಜೆ ಸವಿಯೋಣ ಬಾರಾ!

Subscribe to Filmibeat Kannada
Zee Kannda Kuniyonu baara
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ ಕುಣಿಯೋಣು ಬಾರಾ ಫೈನಲ್ ಸ್ಪರ್ಧೆಯು ಭಾನುವಾರ ಸಂಜೆ 4.30ಕ್ಕೆ ಪ್ರಸಾರವಾಗಲಿದೆ. ವಿಜೇತರಿಗೆ ಐದು ಲಕ್ಷದ ಶೈಕ್ಷಣಿಕ ವಿಮೆ, ರನ್ನರ್ ಅಪ್‌ಗಳಿಗೆ ಕ್ರಮವಾಗಿ ಎರಡು ಮತ್ತು ಒಂದು ಲಕ್ಷದ ಶೈಕ್ಷಣಿಕ ವಿಮೆ ನೀಡಲಾಗುವುದು. ಅಂತಿಮ ಹಂತದ ಈ ಹಣಾಹಣಿಗೆ ಪ್ರಪ್ರಥಮ ಬಾರಿಗೆ ವಿಷ್ಣುವರ್ಧನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಕರ್ನಾಟಕವನ್ನು ಪ್ರತಿನಿಧಿಸುವ ಐದುಜನ ಸ್ಪರ್ಧಿಗಳು ಅಂತಿಮ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಅಂತಿಮ ಪಟ್ಟಿಯಲ್ಲಿ ರಶ್ಮಿ ಕುಂದರ್, ರಶ್ಮಿ, ನಿರೋಷಾ ಮತ್ತು ಪ್ರತೀಕ್ ಭಾಗವಹಿಸಲಿದ್ದಾರೆ. ಮೂರು ತಾಸುಗಳವರೆಗೆ ಈ ಸ್ಪರ್ಧೆಯ ಪ್ರಸಾರವಿದ್ದು ವೀಕ್ಷಕರಿಗೆ ಉತ್ತಮ ನೃತ್ಯ ರಸಸಂಜೆಯ ಅನುಭವ ನೀಡಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತನಟ ಡಾ.ವಿಷ್ಣುವರ್ಧನ್ ಹಾಗೂ ನಟಿ ಡೈಸಿ ಬೋಪಣ್ಣ ಭಾಗವಹಿಸಲ್ಲಿದ್ದು ಪುಟಾಣಿಗಳಿಗೆ ಉತ್ತೇಜನ ನೀಡಲಿದ್ದಾರೆ.

ಕುಣಿಯೋಣು ಬಾರಾ ಅಂತಿಮ ಸ್ಪರ್ಧಿಗಳು ಜನಪ್ರಿಯ ಗೀತೆಗಳಿಗೆ ಹೆಜ್ಜೆ ಹಾಕಲಿದ್ದಾರೆ. ಕೇವಲ ಪುಟಾಣಿಗಳು ಮಾತ್ರವಲ್ಲದೇ ದೇಶದ ಪ್ರಸಿದ್ಧ ನೃತ್ಯ ತಂಡ ಕೇರಳದ ಶಿವಾಸ್ ಡಾನ್ಸ್ ಟ್ರೂಪ್ ಮತ್ತು ಮಂಗಳೂರಿನ ಎಕ್ಸ್ ಜೋನ್ ನೃತ್ಯ ತಂಡದಿಂದ ವಿಶೇಷ ನೃತ್ಯ ಪ್ರದರ್ಶನವಿದೆ.

ಜೀ ಕನ್ನಡ ತನ್ನ ವೈವಿಧ್ಯಮಯ ಕಾರ್ಯಕ್ರಮಗಳಿಂದ ಕರ್ನಾಟಕದ ವೀಕ್ಷಕರ ಮೆಚ್ಚುಗೆ ಗಳಿಸಿದ್ದು ಈಗಾಗಲೇ ಕುಣಿಯೋಣು ಬಾರಾ 5ಭಾಗಗಳನ್ನು ಪೂರೈಸಿದೆ ಎಂದು ಜೀ ಕನ್ನಡದ ಮುಖ್ಯಸ್ಥ ಅನುಪ್ ಚಂದ್ರಶೇಖರನ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada