»   »  ಗುರು ಶಿಷ್ಯರ ಜೋಡಿಯ 'ಕುಣಿಯೋಣು ಬಾರಾ'

ಗುರು ಶಿಷ್ಯರ ಜೋಡಿಯ 'ಕುಣಿಯೋಣು ಬಾರಾ'

Subscribe to Filmibeat Kannada
Zee Kannada Kuniyona baara finals
ಜೀ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಕುಣಿಯೋಣು ಬಾರಾ' ಅಂತಿಮ ಸ್ಪರ್ಧೆಯು ಏಪ್ರಿಲ್ 18, 19, 25 ಮತ್ತು 26ರಂದು ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ. ಅಂತಿಮ ಕಣದಲ್ಲಿ ಮಾನಸಾ ಮತ್ತು ತರುಣ್, ನಿತಿನ್ ಮತ್ತು ರವಿ, ಜ್ಞಾನ ಮತ್ತು ಶಶಾಂಕ್, ನಿರೋಶಾ ಮತ್ತು ಹರ್ಷ, ಅಕ್ಷತಾ ಮತ್ತು ಚಿನ್ನು, ಗುರು ಶಿಷ್ಯರ ಜೋಡಿ ಇದೆ.

ವಿಜೇತ ಜೋಡಿಗೆ ಹಿರೋ ಹೊಂಡಾ ಸಿಬಿಜಿ ಮೊಟಾರ್‌ಬೈಕ್ ಮತ್ತು 2.5 ಲಕ್ಷ ಮೌಲ್ಯದ ಶೈಕ್ಷಣಿಕ ವಿಮೆ ಹಾಗೂ ರನ್ನರ್ ಅಪ್ ಜೋಡಿಗೆ ಹೀರೊ ಹೊಂಡಾ ಫ್ಯಾಷನ್ ಪ್ಲಸ್ ಮೊಟಾರ್‌ಬೈಕ್ ಮತ್ತು 2 ಲಕ್ಷ ಮೌಲ್ಯದ ಶೈಕ್ಷಣಿಕ ವಿಮೆ ನೀಡಲಾಗುತ್ತದೆ.

ಕಿರುತೆರೆಯಲ್ಲೇ ಪ್ರಪ್ರಥಮ ಬಾರಿಗೆ ಗುರುಶಿಷ್ಯರ ಜೋಡಿಯನ್ನು ಜೊತೆ ಜೊತೆಗೆ ಅಖಾಡಕ್ಕಿಳಿಸಿದ ಖ್ಯಾತಿ ಜೀ ಕನ್ನಡಕ್ಕೆ ಸಲ್ಲುತ್ತದೆ. ವಿನೂತನ ಮಾದರಿಯ ಈ ಕಾರ್ಯಕ್ರಮ ಬಹುಬೇಗನೇ ಜನಪ್ರಿಯತೆ ಗಳಿಸಿದೆ. ಸತತ ಆರು ಸೀಸನ್‌ಗಳಲ್ಲೂ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಈ ಕಾರ್ಯಕ್ರಮ ಈಗ ತನ್ನ ಆರನೇ ಭಾಗದಲ್ಲಿ ಗುರುಶಿಷ್ಯರ ಜೋಡಿಯನ್ನು ಕಣಕ್ಕಿಳಿಸಿದೆ.

ಅಂತಿಮ ಹಂತದ ಸ್ಪರ್ಧೆಯಲ್ಲಿ ಮೂರು ಸುತ್ತುಗಳಿದ್ದು ಮೊದಲ ಸುತ್ತು ಫ್ರೀ ಸ್ಟೈಲ್, ಎರಡನೇ ಸುತ್ತಿನಲ್ಲಿ ಟಪೋರಿ ಸ್ಟೈಲ್ ಮತ್ತು ಮೂರನೇ ಸುತ್ತಿನಲ್ಲಿ ಪಾಶ್ಚಾತ್ಯ ಶೈಲಿಯ ನೃತ್ಯವನ್ನು ಮಾಡಲು ಹೇಳಲಾಗುತ್ತದೆ. ಪ್ರತಿಯೊಂದು ಸುತ್ತಿನಲ್ಲೂ ಎಲಿಮಿನೇಷನ್ ಇದ್ದು ಒಂದೊಂದು ಸುತ್ತಿನಲ್ಲೂ ಒಂದು ಜೋಡಿಯನ್ನು ಸ್ಪರ್ಧೆಯಿಂದ ಅನರ್ಹಗೊಳಿಸುವ ಮೂಲಕ ಅಂತಿಮ ಸ್ಪರ್ಧೆಗೆ ಎರಡು ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಇವರಲ್ಲಿ ಒಂದು ತಂಡವನ್ನು ವಿಜೇತ ತಂಡವಾಗಿ ಹಾಗೂ ಒಂದು ತಂಡವನ್ನು ರನ್ನರ್ ಅಪ್ ತಂಡವಾಗಿ ನಿರ್ಧರಿಸಲಾಗುತ್ತದೆ.

ಸ್ಪರ್ಧೆಯ ನಿರ್ಣಾಯಕರಾಗಿ ನಟ ವಿಶಾಲ್‌ರಾಜ್ ಮತ್ತು ನಟಿಆಶಿತಾ ಕಾರ್ಯ ನಿರ್ವಹಿಸಲಿದ್ದು ವಿಶೇಷ ಅತಿಥಿಗಳಾಗಿ ತಾಜ್‌ಮಹಲ್ ಖ್ಯಾತಿಯ ನಟಅಜಯ್ ಹಾಗೂ ಅನಂತ್‌ರಾಜ್ ಭಾಗವಹಿಸಲಿದ್ದಾರೆ. ನಿರೂಪಣೆಯನ್ನು ಪ್ರಜ್ಞಾ ಮತ್ತು ಸಮೀರ್ ನಿರ್ವಹಿಸಲಿದ್ದಾರೆ.

(ದಟ್ಸ್ ಕನ್ನಡ ಕಿರುತೆರೆ)

ಜೀ ಕನ್ನಡ ವಾರ್ತಾ ವಾಚಕಿಯಾಗಿ ನಟಿ ತಾರಾ!
ಜೀ ಕನ್ನಡ ನೃತ್ಯ ರಸಸಂಜೆ ಸವಿಯೋಣ ಬಾರಾ!

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada