For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿಯಿಂದ ಹೊಸ ಸುದ್ದಿ ವಾಹಿನಿ ಆರಂಭ?

  By Mahesh
  |

  ಆಂಧ್ರದ ಮೆಗಾ ಸ್ಟಾರ್ ಕಮ್ ರಾಜಕಾರಣಿ ಚಿರಂಜೀವಿ ಹೊಸ ಸುದ್ದಿ ವಾಹಿನಿ ಆರಂಭಿಸಲಿದ್ದಾರೆ ಎಂದು ಸುದ್ದಿ ಹಬ್ಬಿದೆ. ಇತ್ತೀಚೆಗೆ ಚಿರಂಜೀವಿ ಅವರು ತಮ್ಮ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ ಪಕ್ಷದೊಡನೆ ವೀಲಿನಗೊಳಿಸಿ, ರಾಹುಲ್ ಗಾಂಧಿ ಕೈ ಕುಲುಕಿದ್ದರು.

  ಅಪಾರ ಮೊತ್ತ ನೀಡಿ ಪ್ರಜಾರಾಜ್ಯಂ ಪಕ್ಷವನ್ನು ಕಾಂಗ್ರೆಸ್ ಪಕ್ಷ ಕೊಂಡುಕೊಂಡಿದೆ ಎಂದು ಅನೇಕ ಪಕ್ಷಗಳು ಆರೋಪ ಮಾಡಿದ್ದವು.

  ಇದಕ್ಕೆ ಪೂರಕವಾಗಿ ಈಗ ಚಿರಂಜೀವಿ ಸುದ್ದಿ ವಾಹಿನಿ ಆರಂಭಿಸುವ ಸುದ್ದಿ ಹೊರ ಬಿದ್ದಿದೆ. ಚಿರಂಜೀವಿ ಆಪ್ತರಾದ ಅನಕಪಲ್ಲಿ ಶಾಸಕ ಘಂಟ ಶ್ರೀನಿವಾಸ ರಾವ್ ಹಾಗೂ ಪಿಆರ್ ಪಿ ನಾಯಕ ಥೋಟ ಚಂದ್ರಶೇಖರ್ ಅವರು ಸಹಪಾಲುದಾರರಾಗಿ ಈ ಸುದ್ದಿ ವಾಹಿನಿಗೆ ಬಂಡವಾಳ ಹೂಡುವ ಸಾಧ್ಯತೆಯಿದೆ.

  ಅಕ್ಟೋಬರ್ 2011ರ ವೇಳೆಗೆ 'ಎಸ್ ಚಾನೆಲ್' ಎಂಬ ಹೆಸರಿನ ಸುದ್ದಿ ವಾಹಿನಿ ಲೋಕಾರ್ಪಣೆಯಾಗುವ ಸಾಧ್ಯತೆಯಿದೆ.

  ಆಂಧ್ರ ಸಿಎಂ ಕುರ್ಚಿಯ ಮೇಲೆ ಕಣ್ಣಿರಿಸಿರುವ ಚಿರು, 2014ರ ಅಸೆಂಬ್ಲಿ ಚುನಾವಣೆಗೆ ಈಗಿಂದಲೇ ತಯಾರಿ ನಡೆಸಿದ್ದಾರೆ. ಆಂಧ್ರ ಪ್ರದೇಶದ ಜನಪ್ರಿಯ ಮನರಂಜನಾ ವಾಹಿನಿ 'ಮಾ ಟಿವಿ' ಯಲ್ಲೂ ಚಿರಂಜೀವಿ ಕುಟುಂಬ ಬಂಡವಾಳ ಹೂಡಿದೆ.

  English summary
  PRP and Congressman Chiranjeevi likely to launch new news channel S News by October says sources. Earlier Chiranjeevi merged his Prajarajyam Party with Congress and many opposition alleged he has received heavy kickbacks for merger.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X