ಮಂತ್ರಾಲಯಕ್ಕೆ ರಾಘವೇಂದ್ರ ವೈಭವ ನಿರ್ಮಾಪಕರು

ಇತ್ತೀಚೆಗೆ ಧಾರಾವಾಹಿಯ ನಿರ್ಮಾಪಕರಾದ ಅನಿತಾಪಟ್ಟಾಭಿರಾಮ್ ದಂಪತಿಗಳು ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ದರ್ಶನ ಪಡೆದರು. ಗ್ರಾಮದೇವತೆ ಮಂಚಾಲಮ್ಮ, ಶ್ರೀರಾಘವೇಂದ್ರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಮಠದ ದಿವಾನರಾದ ರಾಜಾ ಎಸ್ ಭಂಡಾಚಾರ್ ಅವರು ಮಠದ ಸಂಪ್ರದಾಯದಂತೆ ದಂಪತಿಗಳನ್ನು ಸನ್ಮಾನಿಸಿದರು. ಪೀಠಾಧಿಪತಿಗಳ ಹೆಚ್ಚುವರಿ ಆಪ್ತ ಕಾಯದರ್ಶಿ ಸುಯಮೀಂದ್ರಾಚಾರ್ ಅವರು ಶ್ರೀಮಠದ ದಿನಚರಿ, ಕ್ಯಾಲೆಂಡರ್ ನೀಡಿ ದಂಪತಿಗಳನ್ನು ಬೀಳ್ಕೊಟ್ಟರು.
ಈ ಸಂದರ್ಭದಲ್ಲಿ ನಿರ್ಮಾಪಕರು ಮಾತನಾಡುತ್ತಾ, ರಾಯರ ಆಶೀರ್ವಾದದಿಂದ ಈ ಧಾರಾವಾಹಿಯನ್ನು ಚಿತ್ರೀಕರಿಸುತ್ತಿದ್ದೇವೆ. ಇದುವರೆಗೂ 495 ಸಂಚಿಕೆಗಳನ್ನು ಪೂರೈಸಲಾಗಿದೆ. ರಾಘವೇಂದ್ರ ಸ್ವಾಮಿಗಳ ಬೃಂದಾವನ ಪಟ್ಟಾಭಿಷೇಕವನ್ನು ಚಿತ್ರೀಕರಿಸುತ್ತಿರಬೇಕಾದರೆ ಒಂದು ಅಪೂರ್ವ ಘಟನೆ ನಡೆಯಿತು.
ಎರಡು ಗರುಡ ಪಕ್ಷಿಗಳು ಚಿತ್ರೀಕರಣ ಸ್ಥಳದಲ್ಲೇ ಸುದೀರ್ಘ ಸಮಯ ಕಳೆದದ್ದು ನಿಜಕ್ಕೂ ನಮ್ಮನ್ನು ಮಂತ್ರಮುಗ್ಧಗೊಳಿಸಿತು. ರಾಯರ ಮಹಿಮೆಗಳನ್ನು ಸಾರುವ ಇನ್ನೂ ನೂರು ಎಪಿಸೋಡುಗಳನ್ನು ಚಿತ್ರೀಕರಿಸಲಿದ್ದೇವೆ ಎಂದು ನಿರ್ಮಾಪಕರು ತಿಳಿಸಿದರು. (ಏಜೆನ್ಸೀಸ್)


Click it and Unblock the Notifications











