twitter
    For Quick Alerts
    ALLOW NOTIFICATIONS  
    For Daily Alerts

    ಪಾಂಡುರಂಗ ವಿಠಲಕ್ಕೆ ತೋತಾಪುರಿ ಭಟ್ಟ ಎಂಟ್ರಿ!

    By Rajendra
    |

    Panduranga Vittala
    ಕನ್ನಡಿಗರ ಕಣ್ಮಣಿ ಜೀ ಕನ್ನಡದ ಹಾಸ್ಯ ಧಾರಾವಾಹಿ ಪಾಂಡುರಂಗ ವಿಠಲಕ್ಕೆ ಹೊಸ ತಿರುವು ಸಿಕ್ಕಿದೆ. ದಿನನಿತ್ಯ ನಡೆಯುವ ವಿದ್ಯಮಾನಗಳು, ಘಟನಾವಳಿಗಳಿಗೆ ಹಾಸ್ಯದ ಲೇಪನ ಹಚ್ಚಿ ವೀಕ್ಷಕರಿಗೆ ಹಾಸ್ಯವನ್ನು ಉಣಬಡಿಸುತ್ತಿರುವ ಧಾರಾವಾಹಿ ಇದು.

    ಎಂ ಎಸ್ ನರಸಿಂಹಮೂರ್ತಿಯವರ ಸಂಭಾಷಣೆಯ ಚತುರತೆ ಪ್ರೇಕ್ಷಕರನ್ನು ಹಿಡಿದಿಡುವ ಪ್ರಮುಖ ಅಂಶಗಳಲ್ಲಿ ಒಂದು. ಮಧ್ಯಮವರ್ಗದ ತಾಪತ್ರಯ, ತೊಂದರೆಗಳು, ಪೇಚಿಗೆ ಸಿಲುಕುವ ಸನ್ನಿವೇಶಗಳನ್ನು ನವಿರಾದ ಹಾಸ್ಯದಲ್ಲಿ ಎಂಎಸ್‌ಎನ್ ನಗಿಸುತ್ತಾರೆ.

    ಜಹಂಗೀರ್ (ಪಾಂಡುರಂಗ), ಸುಜಯ್ ಶಾಸ್ತ್ರಿ (ವಿಠಲ), ಪಿ ಡಿ ಸತೀಶ್ (ಪದ್ದು ), ಅಪೇಕ್ಷಾ (ಜಾಜಿ), ಶ್ರೀಲಕ್ಷ್ಮಿ(ಪಲ್ಲು), ಬಿ ಜಯಮ್ಮ(ಅಮ್ಮ), ಮೇಘಶ್ರೀ ಭಾಗವತರ್(ಚಂಪಾ) ಪಾತ್ರಗಳು ಜನರಿಗೆ ಅಷ್ಟೊಂಡು ಇಷ್ಟವಾಗಿವೆ ಎಂದರೆ ಇದಕ್ಕೆ ಕಾರಣ ಎಂಎಸ್‌ಎನ್ ಅವರ ಚಾಕಚಕ್ಯತೆ. ಈಗ ಈ ಪಾತ್ರಗಳ ಜೊತೆಗೆ ಮತ್ತೊಂದು ಪಾತ್ರ ಎಂಟ್ರಿಯಾಗಿದೆ. ಅದೇ ಅಡುಗೆ ಭಟ್ಟರ ಪಾತ್ರ.

    ಭಟ್ಟರು ಎಂದರೆ ತೋತಾಪುರಿ ಪುಳಿಮೊಟ್ಟೆ ಭೀಮೇಶ್ವರ ಭಟ್ಟ. ಈ ಪಾತ್ರದಲ್ಲಿ ಸಿಹಿ ಕಹಿ ಚಂದ್ರು ಕಾಣಿಸಲಿದ್ದಾರೆ. ಈಗಾಗಲೆ ಏಳೆಂಟು ಸಂಚಿಕೆಗಳಿಂದ ಕಾಣಿಸುತ್ತಿದ್ದ ಭಟ್ಟರು ವೀಕ್ಷಕರಿಗೆ ಸಖತ್ ಇಷ್ಟವಾಗಿದ್ದಾರೆ. ಪಾಂಡುರಂಗ ಪಾತ್ರದಲ್ಲಿ ನಟ ಜಹಂಗೀರ್ ವೀಕ್ಷಕರನ್ನು ಸೆಳೆಯುತ್ತಿದ್ದರು.

    ಈಗ ಸಿಹಿಕಹಿ ಚಂದ್ರು ಅವರ ಭಟ್ಟ ಪಾತ್ರಗೂ ಪಾಂಡುರಂಗ ಪಾತ್ರಗಳ ನಡುವೆ ತೀವ್ರ ಪೈಪೋಟಿ ಎದುರಾಗಿದೆ. ಇನ್ನು ಪಲ್ಲು, ಜಾಜಿ ಹಾಗೂ ಪದ್ದು ರಂಜಿಸಲು ಇದ್ದೇ ಇದ್ದಾರೆ. ಪಾಂಡುರಂಗ ವಿಠಲ ಪ್ರಸಾರ ಸಮಯ: ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10ಕ್ಕೆ ಜೀ ಕನ್ನಡಲ್ಲಿ. (ಒನ್‌ಇಂಡಿಯಾ ಕನ್ನಡ)

    English summary
    Zee Kannada's comedy serial Panduranga Vittala is playing on Moday to Friday at 10:00 PM. This is a story of the Gandugali family that is a loving and caring one. The family includes Rangamma, her stingy son Pandurang and his wife Jaaji, his sister Pallavi and the unlucky Vittala.
    Tuesday, December 13, 2011, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X