Just In
Don't Miss!
- News
ಬೈಡನ್ಗೆ ನ್ಯೂಕ್ಲಿಯರ್ ಬಾಂಬ್ ಮೂಲಕ ಸ್ವಾಗತ ಕೋರಿದ ಉ. ಕೊರಿಯಾ..!
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Sports
ಐಎಸ್ಎಲ್: ಹೈದರಾಬಾದ್ಗೆ ಬಲಿಷ್ಠ ಮುಂಬೈ ಸಿಟಿ ಎಫ್ಸಿ ಸವಾಲು
- Education
KIOCL Recruitment 2021: ಆಫೀಸರ್ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Lifestyle
ಕುಂಭ ಮೇಳ ಪ್ರಾರಂಭ: ಕುಂಭ ಮೇಳ ವಿಶೇಷತೆ ಹಾಗೂ ಎಷ್ಟು ದಿನ ಇರುತ್ತದೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬದುಕು ಜಟಕಾ ಬಂಡಿ ಕಟಕಟೆಯಲ್ಲಿ ನಟಿ ರಂಜಿತಾ
ಕನ್ನಡಿಗರ ಕಣ್ಮಣಿ ಜೀ ಕನ್ನಡದಲ್ಲಿ ಇತ್ತೀಗಷ್ಟೇ ಪ್ರಾರಂಭಗೊಂಡು ಜನಪ್ರಿಯ ಆಗುತ್ತಿರುವ 'ಬದುಕುಜಟಕಾ ಬಂಡಿ' ಕಾರ್ಯಕ್ರಮದಲ್ಲಿ ಖ್ಯಾತ ತಮಿಳು ನಟಿ ರಂಜಿತಾ ಕಾಣಿಸಿಕೊಳ್ಳಲಿದ್ದಾರೆ. ನಿತ್ಯಾನಂದಸ್ವಾಮಿ ಜತೆಗಿನ ರಾಸಲೀಲೆಯ ಪ್ರಮುಖ ಪಾತ್ರದಾರಿ ಎಂದೇ ಬಿಂಬಿತವಾಗಿರುವ ರಂಜಿತಾ ಇದುವರೆಗೂ ಕಣ್ಮರೆಯಾಗಿದ್ದು ಇತ್ತೀಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಜೀ ಕನ್ನಡ ಅವರನ್ನು 'ಬದುಕು ಜಟಕಾ ಬಂಡಿ' ಕಾರ್ಯಕ್ರಮಕ್ಕೆ ಕರೆತಂದು ರಾಸಲೀಸೆ ಪ್ರಕರಣದ ಬಗ್ಗೆ ಮಾತನಾಡಿಸಿದೆ. ರಂಜಿತಾ ನಿತ್ಯಾನಂದ ರಾಸಲೀಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾಳೆ ಎಂಬ ಆರೋಪ ಎದುರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ರಂಜಿತ ತನ್ನ ಇಡೀ ಕಥಾನಕವನ್ನು 'ಬದುಕು ಜಟಕಾಬಂಡಿ' ಕಾರ್ಯಕ್ರಮದಲ್ಲಿ ತೆರೆದಿಟ್ಟಿದ್ದಾಳೆ.
ತನ್ನ ಮೇಲಿರುವ ರಾಸಲೀಲೆಯ ಆರೋಪ ಸತ್ಯಕ್ಕೆ ದೂರವಾದ್ದುದ್ದು ಎಂದೇ ವಾದಿಸುತ್ತಿರುವ ಆಕೆ ತನ್ನ ಮೇಲಿನ ಆರೋಪಕ್ಕೆ ಕಣ್ಣೀರಿನಧಾರೆ ಹರಿಸಿದ ಘಟನೆ 'ಬದುಕು ಜಟಕಾಬಂಡಿ'ಯಲ್ಲಿ ನಡೆಯಿತು. ರಂಜಿತಾ ಪಾಲ್ಗೊಂಡ ಸಂಚಿಕೆಯಲ್ಲಿ ಮಾಜಿ ಲೋಕಸಭಾ ಸದಸ್ಯೆ ತೇಜಸ್ವಿನಿ ರಮೇಶ್, ನಟಿ ಸುಧಾ ಬೆಳವಾಡಿ ಹಾಗೂ ಬಿ.ಯು. ಗೀತಾ ಪಾಲ್ಗೊಂಡು ರಂಜಿತಾ ಮೇಲಿರುವ ಆರೋಪದ ಕುರಿತು ಸತ್ಯಾಂಶವನ್ನು ಹೊರಗೆಳೆಯುವ ಪ್ರಯತ್ನ ಮಾಡಿದ್ದಾರೆ.
ಬದುಕು ಜಟಕಾಬಂಡಿಯ ನಿರೂಪಕಿ ಮಾಳವಿಕಾ ಕೂಡಾ ನಿತ್ಯಾನಂದಸ್ವಾಮಿಯ ಅನುಯಾಯಿಯಾಗಿದ್ದು ಚರ್ಚೆ ಮತ್ತಷ್ಟು ರೋಚಕವಾಗಿದೆ. ಅಷ್ಟಕ್ಕೂ ನಿತ್ಯಾನಂದ ಹಾಗೂ ರಂಜಿತಾ ನಡುವೆ ಇರುವಂತಹ ಸಂಬಂಧವಾದರೂ ಏನು ಎಂಬುದು ಜೀ ಕನ್ನಡದಲ್ಲಿ ಅನಾವರಣಗೊಳ್ಳಲಿದೆ. ರಂಜಿತಾ ಭಾಗವಹಿಸಿದ ಬದುಕು ಜಟಕಾಬಂಡಿ ಸಂಚಿಕೆ ಜನವರಿ 17ರ ಸೋಮವಾರ ಮಧ್ಯಾಹ್ನ 2.30ಗಂಟೆಗೆ ಪ್ರಸಾರವಾಗಲಿದೆ. [ರಾಸಲೀಲೆ]