»   » ಕನ್ನಡ ಕಿರುತೆರೆಗೆ ಅಡಿಯಿಟ್ಟ ಜೂಲಿ ಲಕ್ಷ್ಮಿ!

ಕನ್ನಡ ಕಿರುತೆರೆಗೆ ಅಡಿಯಿಟ್ಟ ಜೂಲಿ ಲಕ್ಷ್ಮಿ!

Posted By: Staff
Subscribe to Filmibeat Kannada

ಹಿರಿಯ ನಟಿ ಲಕ್ಷ್ಮಿ ಕನ್ನಡ ಕಿರುತೆರೆಗೆ ಮರಳಿದ್ದಾರೆ! ಲಕ್ಷ್ಮಿ ಕಿರುತೆರೆ ಕಾರ್ಯಕ್ರಮ ನಡೆಸಿಕೊಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಅವರು 'ಕಥೈಅಲ್ಲೆ ನಿಜಂ' ಎಂಬ ಜನಪ್ರಿಯ ಟಿವಿ ರಿಯಾಲಿಟಿ ಕಾರ್ಯಾಕ್ರಮವನ್ನು ತಮಿಳಿನಲ್ಲಿ ನಡೆಸಿಕೊಟ್ಟಿದ್ದರು. ಈಗ ಅದೇ ರೀತಿಯ ಕಾರ್ಯಕ್ರಮವನ್ನು ಸುವರ್ಣ ವಾಹಿನಿಗಾಗಿ ನಡೆಸಿಕೊಡಲಿದ್ದಾರೆ.

'ಇದು ಕತೆಯಲ್ಲ ಜೀವನ' ಎಂಬ ಟಿವಿ ಕಾರ್ಯಕ್ರಮ ಸುವರ್ಣ ವಾಹಿನಿಯಲ್ಲಿ ಜೂನ್ 22ರಿಂದ ಪ್ರಾರಂಭವಾಗಲಿದೆ. ಪ್ರತಿ ಸೋಮವಾರದಿಂದ ಶುಕ್ರವಾರದ ತನಕ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಜೀವನದಲ್ಲಿ ನೊಂದ ಬದುಕುಗಳಿಗೆ ಬೆಳಕು ತೋರಿಸುವ ಕಾರ್ಯಕ್ರಮ ಇದಾಗಲಿದೆ ಎನ್ನುತ್ತದೆ ಸುವರ್ಣ ವಾಹಿನಿ.

ಸಲಿಂಗಕಾಮ, ವ್ಯಭಿಚಾರ, ಕಚೇರಿಯಲ್ಲಿ ಲೈಂಗಿಕ ಕಿರುಕುಳ, ಹದಿಹರಯದ ಸಮಸ್ಯೆಗಳು, ಪತಿಯ ದಬ್ಬಾಳಿಕೆಯಂತಹ ಸಮಸ್ಯೆಗಳ ಬಗ್ಗೆ ಚರ್ಚೆ, ಸಲಹೆ, ಸೂಚನೆಗಳು ಈ ಕಾರ್ಯಕ್ರಮದಲ್ಲಿ ಸಿಗಲಿವೆ. ಪ್ರತಿ ಕಂತಿನಲ್ಲಿ ಒಂದು ನಿರ್ದಿಷ್ಟ ಘಟನೆಯನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ವೀಕ್ಷಕರಿಗೆ ಸತ್ಯ ಮತ್ತು ವಾಸ್ತವದ ಅರಿವನ್ನು ಈ ಕಾರ್ಯಕ್ರಮ ಮೂಡಿಸಲಿದೆ. (ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada