»   » ಸುವರ್ಣ ಟಿವಿ ಮೂರನೇ ವಾರ್ಷಿಕೋತ್ಸವ

ಸುವರ್ಣ ಟಿವಿ ಮೂರನೇ ವಾರ್ಷಿಕೋತ್ಸವ

Posted By:
Subscribe to Filmibeat Kannada
Suvarna TV Thired anniversary
ಕರ್ನಾಟಕದಲ್ಲಿ ಮನೆಮಾತಾಗುವ ದಿಕ್ಕಿನಲ್ಲಿ ದಾಪುಗಾಲು ಇಡುತ್ತಿರುವ ಸುವರ್ಣ ವಾಹಿನಿಗೆ ಇದೀಗ ಮೂರರ ಪ್ರಾಯ. ಇವತ್ತು ವಾಹಿನಿಗೆ ವಾರ್ಷಿಕೋತ್ಸವ. ಉಳಿದ ವಾಹಿನಿಗಳಿಗೆ ಹೋಲಿಸಿದರೆ ಸುವರ್ಣ ವಾಹಿನಿ ವಯಸ್ಸಿನಲ್ಲಿ ಕಿರಿದು. ಆದರೆ ಜನಪ್ರಿಯತೆಯಲ್ಲಿ ಮುಂದೆ. ಕನ್ನಡ ಟಿವಿ ವಾಹಿನಿಗಳಲ್ಲಿ ಎರಡನೇ ಹಿರಿಯಣ್ಣನಂತಿದ್ದ ಈಟಿವಿ ಕನ್ನಡವನ್ನು ಮೂರೇ ವರ್ಷಗಳಲ್ಲಿ ಹಿಂದಿಕ್ಕಿ ಮುನ್ನಡೆದ ಖ್ಯಾತಿ ಸುವರ್ಣ ವಾಹಿನಿಯದು. ಸುವರ್ಣ ವಾಹಿನಿಗೆ ಹುಟ್ಟುಹಬ್ಬದ ಶುಭಾಶಯಗಳು.

ಇತ್ತೀಚೆಗಷ್ಟೆ ಸುವರ್ಣ ವಾಹಿನಿಯಲ್ಲಿ ಆರಂಭವಾದ 'ಪ್ಯಾಟೆ ಹುಡ್ಗೀರು ಹಳ್ಳಿ ಲೈಫು' ರಿಯಾಲಿಟಿ ಕಾರ್ಯಕ್ರಮ ಅತ್ಯಧಿಕ ಟಿಆರ್ ಪಿಯನ್ನು ದಾಖಲಿಸಿ ಜನಪ್ರಿಯ ಕಾರ್ಯಕ್ರಮ ಎನಿಸಿದೆ. ಕಿಚ್ಚ ಸುದೀಪ್ ಕಾರ್ಯಕ್ರಮದ ನಿರೂಪಕರಾಗಿವುದು ಕಾರ್ಯಕ್ರಮದ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಧಾರಾವಾಹಿಗಳಲ್ಲಿ ಸುವರ್ಣ ವಾಹಿನಿಯ 'ಲಕುಮಿ' ಮಹಿಳೆಯರ ಮನಗೆದ್ದಿದೆ.

ಜೂನ್ 2007ರಲ್ಲಿ ಜನ್ಮ ತಾಳಿದ ಸುವರ್ಣ ವಾಹಿನಿ ಏಷ್ಯಾ ನೆಟ್ ಚೊಚ್ಚಲ ಕೂಸು. ಬಳಿಕ ಮಾರ್ಚ್ 31, 2008ರಂದು ತನ್ನ ಎರಡನೇ ಕೂಸು "ಸುವರ್ಣ ನ್ಯೂಸ್ 24x7" ಜನ್ಮ ಪಡೆಯಿತು. ಏಷ್ಯಾ ನೆಟ್ ನ ಎರಡು ಕೂಸುಗಳು ಕನ್ನಡಿಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿವೆ.

ಕನ್ನಡಿಗರು ನೋಡು ನೋಡುತ್ತಿದ್ದಂತೆ ಈ ಎರಡು ವಾಹಿನಿಗಳು ಬಲು ಎತ್ತರಕ್ಕೆ ಬೆಳೆದು ನಿಂತಿವೆ. ಸುವರ್ಣ ವಾಹಿನಿಯನ್ನು ಅಕ್ಕರೆಯಿಂದ ಬೆಳೆಸುತ್ತಿರುವ ಮುಖ್ಯಸ್ಥ ಜಗದೀಶ್ ಕುಮಾರ್ ಮತ್ತು ಅವರ ತಂಡಕ್ಕೆ ಶುಭಕಾಮನೆಗಳು. ಸುವರ್ಣ ವಾಹಿನಿ ಹೀಗೇ ನೇರ, ದಿಟ್ಟ ನಿರಂತರವಾಗಿ ಹರಿದುಬರುತ್ತಿರಲಿ.

ಸುವರ್ಣ ವಾಹಿನಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಈ ಶುಭಸಂದರ್ಭದಲ್ಲಿ ಕನ್ನಡ ಚಾನೆಲ್ ಲೋಕದಲ್ಲಿ ಮತ್ತೊಂದು ಚಾನೆಲ್ ಕಣ್ಬಿಟ್ಟಿದೆ. ಇಂದಿನಿಂದ (ಜೂ.17) " ಸಮಯ 24x7 ವೀಕ್ಷಿಸಿರಿ, ನೈಜ ಸುದ್ದಿಗಾಗಿ" ಎಂಬ ಜಾಹೀರಾತು ಕನ್ನಡ ದಿನಪತ್ರಿಕೆಗಳನ್ನು ಅಲಂಕರಿಸಿದೆ. ಸಮಯ ವಾಹಿನಿಯನ್ನು ಸ್ವಾಗತಿಸುತ್ತಾ ಸುವರ್ಣ ವಾಹಿನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸೋಣ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada