For Quick Alerts
  ALLOW NOTIFICATIONS  
  For Daily Alerts

  ಮಾಸ್ಟರ್ ಚೆಫ್ ಇಂಡಿಯಾ 2 ಟೈಟಲ್ ಗೆದ್ದ ಶಿಪ್ರ ಖನ್ನಾ

  By Rajendra
  |
  ಅದ್ಭುತವಾಗಿ ಅಡುಗೆ ಮಾಡುವುದು ಒಂದು ಕಲೆ. ಅಡುಗೆ ಮನೆಯಲ್ಲಿ ಚಾಂಪಿಯನ್ ಅನ್ನಿಸಿಕೊಳ್ಳುವುದು ಸಾಮಾನ್ಯದ ಮಾತಲ್ಲ ಬಿಡಿ. ಈ ಕಲೆಯಲ್ಲಿ ಭಲೆ ಎನ್ನಿಸಿಕೊಳ್ಳಬೇಕಾದರೆ ಆಸಕ್ತಿ, ಅಭಿರುಚಿ ಜೊತೆಗೆ ಚಾಕಚಕತ್ಯೆ ಬೇಕು. ಅಡುಗೆ ಕಲೆಯಲ್ಲಿ ನಿಪುಣರನ್ನು ಹೊರತೆಗೆಯುವ ರಿಯಾಲಿಟಿ ಶೋ ಸ್ಟಾರ್ ಪ್ಲಸ್‌ನಲ್ಲಿ ಪ್ರಸಾರವಾಗುತ್ತಿರುವ 'ಮಾಸ್ಟರ್ ಚೆಫ್ ಇಂಡಿಯಾ'. ಈಗ ಇದರ ಎರಡನೇ ಸೀಸನ್ ಫೈನಲ್ ರಿಸಲ್ಟ್ಸ್ ಹೊರಬಿದ್ದಿವೆ.

  ಬಾಲಿವುಡ್ ಆಕ್ಷನ್ ಹೀರೋ ಅಕ್ಷಯ್ ಕುಮಾರ್ ನಡೆಸಿಕೊಡುವ ಈ ಕಾರ್ಯಕ್ರಮ ಭಾರತದಲ್ಲಿ ಅತ್ಯಧಿಕ ವೀಕ್ಷಕರನ್ನು ಹೊಂದಿರುವುದು ವಿಶೇಷ. ಶಿಮ್ಲಾದ ಶಿಪ್ರ ಖನ್ನಾ (29) ಎಂಬ ಗೃಹಿಣಿ 'ಮಾಸ್ಟರ್ ಚೆಫ್ ಇಂಡಿಯಾ 2' ಟೈಟಲನ್ನು ತನ್ನ ಕೈವಶ ಮಾಡಿಕೊಂಡಿದ್ದಾರೆ. ಇವರು ತಮ್ಮ ಸಮೀಪದ ಪ್ರತಿಸ್ಪರ್ಧಿಗಳಾದ ಜೋಸೆಫ್ ರೋಝಾರಿಯೋ (ಸಿಲಿಗುರಿ) ಹಾಗೂ ಶಾಜಿಯಾ ಫಾತಿಮಾ (ಬೆಂಗಳೂರು)ಎಂಬುವವನ್ನು ಹಿಂದಿಕ್ಕಿ ಮುನ್ನುಗ್ಗಿದ್ದಾರೆ.

  ಭಾನುವಾರ (ಜ.1) ನಡೆದ ಗ್ರಾಂಡ್ ಫಿನಾಲೆಯಲ್ಲಿ ಸಲ್ಮಾ ಮತ್ತು ಶಿಪ್ರಾ ಒಟ್ಟು 100 ಮಂದಿಗೆ ಅಡುಗೆ ರೆಡಿ ಮಾಡಿಕೊಡಬೇಕಾಗಿತ್ತು. ರಸವತ್ತಾದ ಭೋಜನವನ್ನು ಸವಿದವರು ನೀಡಿದ ಓಟಿನ ಆಧಾರವಾಗಿ ಶಿಫ್ರಾರನ್ನು ವಿನ್ನರ್ ಎಂದು ನಿರ್ಧರಿಸಲಾಯಿತು.

  ಶಿಪ್ರ ಅವರಿಗೆ ರು.1 ಕೋಟಿ ನಗದು ಬಹುಮಾನ, ಸ್ಟಾರ್ ಪ್ಲಸ್ ವಾಹಿನಿಯಲ್ಲಿ ತನ್ನದೇ ಆದ ಕಾರ್ಯಕ್ರವನ್ನು ಆಯೋಜಿಸುವ ಅವಕಾಶ ಹಾಗೂ ಮೂರು ರಾತ್ರಿ ಮತ್ತು ನಾಲ್ಕು ಹಗಲುಗಳನ್ನು ಲಂಡನ್‌ನಲ್ಲಿ ಕಳೆಯುವ ಚಾನ್ಸ್ ಸಿಕ್ಕಿದೆ.

  ಶಿಪ್ರ ಖನ್ನಾ ಅವರು ಸದ್ಯಕ್ಕೆ ತಮ್ಮ ಗಂಡನಿಂದ ದೂರವಾಗಿದ್ದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ಗಂಡನೊಂದಿಗೆ ಇರುವ ಮಕ್ಕಳನ್ನು ತನ್ನ ಸುಪರ್ದಿಗೆ ಒಪ್ಪಿಸುವಂತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ಗೆಲ್ಲುವ ಮೂಲಕ ಆಕೆಯ ಬಾಳು ಬಂಗಾರವಾಗಿದೆ. (ಏಜೆನ್ಸೀಸ್)

  English summary
  A 29 yr old single mother Shipra Khanna from Shimla wins ‘MasterChef India 2’ hosted by action hero Akshay Kumar. Aired on Sunday night, Shipra was over the moon in winning the kitchen champion trophy. She beat Joseph Rozario from Siliguri and Salma Shazia Fathima from Bengaluru. ಮಾಸ್ಟರ್ ಚೆಫ್ ಇಂಡಿಯಾ 2 ಟೈಟಲ್ ಗೆದ್ದ ಶಿಪ್ರ ಖನ್ನಾ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X