»   » ನೋಡಿ ಸ್ವಾಮಿ ನಾವಿರೋದೇ ಹೀಗೆ ಗ್ರಾಂಡ್ ಫಿನಾಲೆ

ನೋಡಿ ಸ್ವಾಮಿ ನಾವಿರೋದೇ ಹೀಗೆ ಗ್ರಾಂಡ್ ಫಿನಾಲೆ

Posted By:
Subscribe to Filmibeat Kannada
Nodi Swamy Navirode Heege
ಸುವರ್ಣ ವಾಹಿನಿಯ ವಿಭಿನ್ನ ರಿಯಾಲಿಟಿ ಶೋ "ನೋಡಿ ಸ್ವಾಮಿ ನಾವಿರೋದೇ ಹೀಗೆ". ಈ ಕಾರ್ಯಕ್ರಮ ಈಗ ಅಂತಿಮ ಘಟ್ಟಕ್ಕೆ ತಲುಪಿದೆ. ದಪ್ಪ ದೇಹವರು, ದಢೂತಿಕಾಯದವರು ಕಾರ್ಯಕ್ರಮದ ಸ್ಪರ್ಧಿಗಳು ಎಂಬುದು ವಿಶೇಷ. ಒಟ್ಟು 12 ಮಂದಿ ಸ್ಪರ್ಧಿಗಳಲ್ಲಿ 5 ಮಂದಿ ಗ್ರಾಂಡ್ ಫಿನಾಲೆ ಪ್ರವೇಶಿಸಿದ್ದಾರೆ.

ಈ ವಿಭಿನ್ನ ರಿಯಾಲಿಟಿ ಶೋ ಗ್ರಾಂಡ್ ಫಿನಾಲೆ ಶನಿವಾರ ಮತ್ತು ಭಾನುವಾರ ಬೆಳಗ್ಗೆ 9.30ಕ್ಕೆ ಪ್ರಸಾರವಾಲಿದೆ. ಇದೊಂದು ನಾನ್‌ಸ್ಟಾಪ್ ಮನರಂಜನಾ ಕಾರ್ಯಕ್ರವಾಗಿದ್ದು ದಢೂತಿ ದೇಹದವರ ಬಗೆಗಿನ ಸಮಾಜದ ಪೂರ್ವಗ್ರಹಗಳನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದೆ.

ದಢೂತಿ ದೇಹಿಗಳ ಕೀಳರಿಮೆಯನ್ನು ಕಡಿಮೆ ಮಾಡಿ ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಸಫಲವಾಗಿದೆ. ದಪ್ಪಗಿರುವುದು ಅಪರಾಧವಲ್ಲ ಎಂದ ಸಂದೇಶವನ್ನು ನೀಡುವಲ್ಲಿ ವಾಹಿನಿ ಯಶಸ್ವಿಯಾಗಿದೆ. ಈ ಮೂಲಕ ಸಾಮಾಜಿಕ ಬದಲಾವಣೆಯ ಪ್ರಯತ್ನವನ್ನು ಮಾಡಿದ್ದೇವೆ ಎನ್ನುತ್ತಾರೆ ಸುವರ್ಣ ವಾಹಿನಿ ಬ್ಯುಸಿನೆಸ್ ಹೆಡ್
ಅನೂಪ್ ಚಂದ್ರಶೇಖರ್. (ಒನ್‌ಇಂಡಿಯಾ ಕನ್ನಡ)

English summary
Nodi Swamy Navirode Heege reality show grand finale on Asianet Suvarna channel is playing Saturday (Oct 22) and Sunday (Oct 23) at 9.30 am IST Non-stop entertainment programme.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada