For Quick Alerts
ALLOW NOTIFICATIONS  
For Daily Alerts

ಜೀ ಕನ್ನಡದಲ್ಲಿ ಸಲಿಂಗಿಗಳ ಮನದಾಳದ ಮಾತು

By Rajendra
|

ಕರ್ನಾಟಕ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಜೀ ಕನ್ನಡದ 'ಬದುಕು ಜಟಕಾ ಬಂಡಿ' ಕಾರ್ಯಕ್ರಮದಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಸಲಿಂಗಿಗಳಿಬ್ಬರು ತಮ್ಮ ಮನದಾಳದ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದು, ಜೀವಮಾನ ಪರ್ಯಂತ ಒಟ್ಟಿಗೆ ಬಾಳಲು ಪ್ರತಿಜ್ಞೆ ಮಾಡಿದ್ದಾರೆ. ಈ ರೋಚಕ ಕಾರ್ಯಕ್ರಮ ಇದೇ ಮೇ 25ರ ರಾತ್ರಿ 9 ಗಂಟೆಯಿಂದ ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ.

ಸೋನು ಎಂಬ ಕೇರಳದ ಚಲುವೆ ತಾನು ಸ್ವಾಭಾವಿಕವಾಗಿ ಹುಟ್ಟಿದ್ದು ಹೆಣ್ಣಾಗಿಯೇ ಆದರೆ ಆಕೆ ಮಾನಸಿಕವಾಗಿ ಓರ್ವ ಗಂಡಸಾಗಿ ಬೆಳೆದದ್ದು ಮಾತ್ರ ವಿಧಿಯ ವಿಪರ್ಯಾಸವೇ ಸರಿ. ಈ ಎಲ್ಲದರ ನಡುವೆ ತಾನು ಹೆಂಗಸಾಗಿ ಮನೆಯಲ್ಲಿ ಇರಲು ಹಾಗೂ ಯಾರೋ ಗಂಡನ್ನು ಮದುವೆಯಾಗಲು ಮಾನಸಿಕವಾಗಿ ದೈಹಿಕವಾಗಿ ಒಪ್ಪದ ಸೋನು , ತಾನು ತನ್ನ ಮನೆ ತೊರೆದು ಸೇರಿಕೊಂಡಿದ್ದು ಬೆಂಗಳೂರು.

ಇಲ್ಲಿಗೆ ಬಂದು ಸಂಗಮ ಎಂಬ ಸಮಾನ ಮನಸ್ಕರ ಸಂಘಟಯೊಂದಿಗೆ ಗುರುತಿಸಿಕೊಂಡಆಕೆ ಅಲ್ಪ ದುಡಿಮೆಯೊಂದಿಗೆ ತನ್ನ ಜೀವನ ಸಾಗಿಸುತ್ತಿರುತ್ತಾಳೆ. ಈ ನಡುವೆ ಇದೇ ಸಂಘಟನೆಯ ಮೂಲಕ ಪರಿಚಿತಳಾದ ಚಿತ್ರಾ ಎಂಬ ಅದ್ಭುತ ಗಾಯಕಿಯನ್ನು ಸೋನು ಮೋಹಿಸುತ್ತಾಳೆ ಈ ಅನುರಾಗಕ್ಕೆ ಚಿತ್ರಾಳ ಅನುಮತಿಯೂ ದೊರೆಯುತ್ತದೆ.

ಈ ಇಬ್ಬರು ಸಲಿಂಗಿಗಳ ನಡುವೆ ಪ್ರೇಮ ಪರಿಣಯವಾದುದ್ದಾದರೂ ಹೇಗೆ? ಈ ಇಬ್ಬರು ಸಲಿಂಗಳ ನಡುವೆ ಇದ್ದ ಆಕರ್ಷಣೆಯಾದರೂ ಎಂತದ್ದು? ಈ ಅಪರೂಪದ ಪ್ರೇಮಕ್ಕೆ ತಮ್ಮ ಕುಟುಂಬ ಹಾಗೂ ಸಮಾಜ ಪ್ರತಿಕ್ರಿಯೆ ಏನು? ಎಂಬ ಕುತೂಹಲಕಾರಿ ಅಂಶಗಳನ್ನು ಸೋನು ಹಾಗೂ ಚಿತ್ರ ಇಬ್ಬರೂ ಬದುಕು ಜಟಕಾ ಬಂಡಿ ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

ಇಂತಹ ಪ್ರೇಮ ಪ್ರಕರಣಗಳಿಗೆ ಸಮಾಜ, ಧರ್ಮ ಹಾಗೂ ಕಾನೂನಿನಲ್ಲಿ ಎಂತಹ ಸ್ಥಾನಮಾನವಿದೆ? ಇಂತಹ ಸಂಬಂಧಗಳು ಸಮಾಜದಲ್ಲಿ ಹೀಗೆಯೇ ಮುಂದುವರೆಯಲು ಸಾಧ್ಯವೆ ಎಂಬಂಹ ವಿಚಾರಗಳನ್ನು ಸಹ ಇಲ್ಲಿ ಚರ್ಚಿಸಲಾಗಿದೆ. ಇದ್ದಕ್ಕಾಗಿಯೇ ಬದುಕು ಜಟಕಾ ಬಂಡಿ ತಂಡ ಕಾನೂನು ತಜ್ಞರು, ಧಾರ್ಮಿಕ ಮುಖಂಡರು ಹಾಗೂ ಸಮಾಜ ಸೇವಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿ ಚರ್ಚಿಸಿದೆ.

ಒಟ್ಟಾರೆ ಸಲಿಂಗ ಮೋಹ ಇಂದಿನ ನಮ್ಮ ಸಮಾಜದಲ್ಲಿ ಎಂತಹ ಸ್ಥಾನದಲ್ಲಿದೆ ಎಂಬುದರ ಸಂಪೂರ್ಣ ಚಿತ್ರಣ ಈ ಕಾರ್ಯಕ್ರಮದಲ್ಲಿ ಚರ್ಚೆಗೊಳಗಾಗಿದ್ದು ಜೀಕನ್ನಡದಲ್ಲಿ ಈ ಕಾರ್ಯಕ್ರಮವನ್ನು ಮೇ 25ರ ಬುಧವಾರ ರಾತ್ರಿ 9 ಗಂಟೆಗೆ ವೀಕ್ಷಿಸಿಬಹುದಾಗಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
A special episode of Baduku Jataka Bandi in Zee Kannada to air on May 24th at 9pm. Two women (Homosexual) in love with each other share their story on the sets of Baduku Jataka Bandi.The much admired actress Malavika hosted the show, which is all about real people, real events, real emotions and real judgments.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more