»   »  ಸನ್ ನೆಟ್ ವರ್ಕ್ ನಿಂದ ಮತ್ತೊಂದು ಕನ್ನಡ ಟಿವಿ

ಸನ್ ನೆಟ್ ವರ್ಕ್ ನಿಂದ ಮತ್ತೊಂದು ಕನ್ನಡ ಟಿವಿ

Subscribe to Filmibeat Kannada
Sun Network starts Ushe TV
ಸನ್ ನೆಟ್ ವರ್ಕ್ ನಿಂದ ಕನ್ನಡಕ್ಕೆ ಮತ್ತೊಂದು ಹಾಸ್ಯ ಚಾನಲ್ ಬರಲಿದೆ. 'ಉಷೆ' ಹೆಸರಿನ ಈ ಹೊಸ ಹಾಸ್ಯ ಚಾನಲ್ ಬರುವ ಯುಗಾದಿ ದಿನದಂದು ( ಮಾರ್ಚ್ 27) ಪ್ರಸಾರ ಆರಂಭಿಸಲಿದೆ. ಸನ್ ಸಮೂಹ ಸಂಸ್ಥೆ ಕನ್ನಡದಲ್ಲಿ ಪ್ರಸಾರ ಮಾಡುತ್ತಿರುವ ಆರನೇ ಚಾನಲ್ ಇದು.

ಚಾನಲ್ ಗೆ ಸಂಬಂಧಪಟ್ಟ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ ಆದರೆ ಈ ಹಾಸ್ಯ ವಾಹಿನಿ ಕೇಬಲ ಮೂಲಕವೇ ಪ್ರಸಾರವಾಗಲಿದೆ ಎಂದು ಸನ್ ನೆಟ್ ವರ್ಕ್ಸ್ ತಿಳಿಸಿದೆ. ಈಗಾಗಲೇ ಸನ್ ನೆಟ್ ವರ್ಕ್ 'ಹಾಸ್ಯ ತೆರೆ' ಎಂಬ ಚಾನಲನ್ನು ಆರಂಭಿಸಿದ್ದರೂ ಅದು ಸನ್ ಡಿಟಿಎಚ್ ಸೌಲಭ್ಯ ಇರುವವರಿಗೆ ಮಾತ್ರ ಲಭ್ಯವಾಗುತ್ತಿದೆ.

ಸನ್ ನೆಟ್ ವರ್ಕ್ ಕನ್ನಡದಲ್ಲಿ ಉದಯ, ಯು2, ಉದಯ ಮೂವೀಸ್, ಉದಯ ವಾರ್ತೆಗಳು ಮತ್ತು ಉದಯ ನ್ಯೂಸ್ ಚಾನೆಲ್ ಗಳನ್ನು ಪ್ರಸಾರ ಮಾಡುತ್ತಿರುವುದು ಗೊತ್ತೇ ಇದೆ. ಈಗ ಉಷೆ ಮೂಲಕ ದಿನಪೂರ್ತಿ ಮನರಂಜೆ ಒದಗಿಸಲಿದೆ. ಯುಗಾದಿ ಹಬ್ಬಕ್ಕೆ ನಕ್ಕು ನಲಿಯಲು ಸಿದ್ಧರಾಗಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದನ್ನೂ ಓದಿ
ಸಂಜನಾ ,ವಿರಾಟ್ ಕೋಹ್ಲಿ ನಡುವಿನ ಕೆಮಿಸ್ಟ್ರಿ ಏನು?
ಜಯಮಾಲಾ ರಾಜೀನಾಮೆಗೆ ಹರೀಶ್ ಆಗ್ರಹ
ರೇಡಿಯೋ ಮಿರ್ಚಿಯ ಪುಗಸಟ್ಟೆ ಯುಗಾದಿ ಸ್ಪರ್ಧೆ
ಬೆಂಗಳೂರಿನಲ್ಲಿ ಅರ್ಧ ಶತಕ ಬಾರಿಸಿದ ಅರುಂಧತಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada