For Quick Alerts
ALLOW NOTIFICATIONS  
For Daily Alerts

  ಸುವರ್ಣದಲ್ಲಿ ಚಂದ್ರು, ಸೃಜನ್ & 'ಕಿಚನ್ ಕಿಲಾಡಿಗಳು'

  By Mahesh
  |

  ರಿಯಾಲಿಟಿ ಶೋಗಳಿಂದ ಹೆಚ್ಚು ಜನಪ್ರಿಯತೆ ಗಳಿಸಿರುವ ಕನ್ನಡ ವಾಹಿನಿ ಸುವರ್ಣ ಟಿವಿ, ಈಗ ಹೊಸ ರಸಭರಿತ ರಿಯಾಲಿಟಿ ಶೋ ಉಣಬಡಿಸಲಿದೆ.

  ಕಿಚನ್ ಕಿಲಾಡಿಗಳು ಎಂಬ ಹೆಸರಿನ ವಿನೂತನ ಅಡುಗೆ ಆಧಾರಿತ ರಿಯಾಲಿಟಿ ಶೋ ಜ.30ರಿಂದ ಆರಂಭವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ದಿನ ರಾತ್ರಿ 8 ಗಂಟೆಗೆ ಪ್ರಸಾರವಾಗಲಿದೆ.

  ಪಾಕಪ್ರವೀಣ ನಟ ಸಿಹಿಕಹಿ ಚಂದ್ರು ಅವರು ಕಾರ್ಯಕ್ರಮದ ಜಡ್ಜ್ ಆಗಿದ್ದು, ಜನಪ್ರಿಯ ನಿರೂಪಕ ಸೃಜನ್ ಲೋಕೇಶ್ ಮತ್ತೊಮ್ಮೆ ತಮ್ಮ ಮಾತಿನ ಮೋಡಿಯಲ್ಲಿ ವೀಕ್ಷಕರನ್ನು ರಂಜಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಹಿಂದೂಸ್ತಾನ್ ಲಿವರ್ ಸಂಸ್ಥೆಯ ನೋರ್ (Knorr) ಬ್ರ್ಯಾಂಡ್ ಈ ಕಾರ್ಯಕ್ರಮದ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿದೆ.

  ಕರ್ನಾಟಕದ ವಿಭಿನ್ನ ರೀತಿಯ ಆಹಾರ ಸಂಸ್ಕೃತಿ ಇದೆ. ಈ ಶೋ ಮೂಲಕ ರಾಜ್ಯದ ಶ್ರೇಷ್ಠ ಬಾಣಸಿಗನನ್ನುಹುಡುಕುವುದಷ್ಟೇ ಅಲ್ಲ. ವೈವಿಧ್ಯಮಯ ತಿನಿಸುಗಳ ಪರಿಚಯವನ್ನು ಮಾಡಿಕೊಡಲಾಗುತ್ತದೆ. ರಾಜ್ಯದ ಮೂಲೆ ಮೂಲೆಗಳಿಂದ ಸ್ಪರ್ಧೆಗೆ ಅಭ್ಯರ್ಥಿಗಳು ಆಗಮಿಸಿದ್ದಾರೆ ಎಂದು ಸುವರ್ಣ ವಾಹಿನಿಯ ಮುಖ್ಯಸ್ಥ ಅನೂಪ್ ಚಂದ್ರಶೇಖರನ್ ಹೇಳಿದ್ದಾರೆ.

  ಮಾಸ್ಟರ್ ಚೆಫ್ ಸರಣಿಗೆ ಸವಾಲೆಸೆಯುವಂತೆ ಈ ಕಾರ್ಯಕ್ರಮ ಮೂಡಿ ಬರಲಿದೆ ಎಂಬ ಹುಮ್ಮಸ್ಸಿನಿಂದ ಚಂದ್ರು, ಸೃಜನ್ ಜೋಡಿ ಕಿಚನ್ ಕಿಲಾಡಿಗಳನ್ನು ಮುಂದಿಡುತ್ತಿದ್ದಾರೆ. ಸಿಹಿ ಕಹಿ ಚಂದ್ರು ಅವರು ಇದೇ ವಾಹಿನಿಯಲ್ಲಿ ನಡೆಸಿಕೊಡುತ್ತಿದ್ದ ಬೊಂಬಾಟ್ ಭೋಜನ ಕಾರ್ಯಕ್ರಮ ಭರ್ಜರಿ ಯಶಸ್ಸು ಕಂಡಿತ್ತು. ಅದೇ ಹೆಸರಿನಲ್ಲಿ ಚಂದ್ರು ಅವರು ಆಕರ್ಷಕ ಪುಸ್ತಕವನ್ನು ಹೊರ ತಂದಿದ್ದರು.

  English summary
  Suvarna TV Kannada all set to launch a cookery-based reality show, ‘Kitchen Kiladigalu’, primetime 8 pm slot daily, Monday to Friday starting 30 January. Hindustan Unilever Limited (HUL) for its food brand Knorr is Title sponsor said Suvarna business head Anup Chandrashekaran. Culinary expert, Actor Sihi Kahi Chandru will Judge and Srujan Lokesh will anchored the program produced by Miditech.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more