ಕಿರುತೆರೆಯಲ್ಲಿ ಕರಿಷ್ಮಾ ಕಪೂರ್ ಪಾಕಶಾಸ್ತ್ರ ಪಾಠ

By Rajendra

ಸಿನಿಮಾ ತಾರೆಗಳಿಗೂ ರುಚಿರುಚಿಯಾದ ಅಡುಗೆಗಳನ್ನು ಮಾಡಲು ಬರುತ್ತದೆಯೇ? ಇಲ್ಲ ಬಿಡಿ ಅವರಿಗೇನಿದ್ದರೂ ರುಚಿರುಚಿಯಾದ ಅಡುಗೆಗಳನ್ನು ತಿನ್ನುವುದಷ್ಟೇ ಗೊತ್ತು ಅನ್ನುತ್ತೀರಾ! ಸ್ವಲ್ಪ ತಡೆಯಿರಿ ಬಾಲಿವುಡ್ ತಾರೆಗಳಾದ ರವೀನಾ ಟಂಡನ್ ಮತ್ತು ಕರೀಷ್ಮಾ ಕಪೂರ್ ತಮ್ಮ ಪಾಕ ನೈಪುಣ್ಯವನ್ನು ಪ್ರದರ್ಶಿಸಲು ಹೊರಟಿದ್ದಾರೆ.

ಈ ನಟಿಯರು ಹಾಗೆ ತಮ್ಮ ಅದ್ಭುತ ಪಾಕ ನೈಪುಣ್ಯವನ್ನು ಪ್ರದರ್ಶಿಸಲು ಹೊರಟಿರುವುದು ಕಲರ್ಸ್ ವಾಹಿನಿಯ 'ಕಿಚನ್ ಚಾಂಪಿಯನ್' ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ. ವೈವಿಧ್ಯಭರಿತ ಅಡುಗೆಗಳನ್ನು ಮಾಡುವುದು ಹೇಗೆ ಎಂಬುದನ್ನು ಪ್ರೇಕ್ಷಕರಿಗೆ ಹೇಳಿಕೊಡುತ್ತಾ ತಮ್ಮ ಕೈರುಚಿಯನ್ನು ತೋರಿಸಲಿದ್ದಾರೆ.

ತರಹೇವಾರಿ ಅಡುಗೆಗಳನ್ನು ಮಾಡುವುದು ಹೇಗೆ ಎಂಬ ಬಗ್ಗೆ ಇವರು ಮಾರ್ಗದರ್ಶನ ನೀಡುತ್ತಿರುತ್ತ್ತಾರೆ. ಸ್ಪರ್ಧಿಗಳು ಇವರ ಸೂಚನೆಗಳ ಅನ್ವಯ ಅಡುಗೆ ತಯಾರಿಸುತ್ತಿರುತ್ತಾರೆ. ಅಡುಗೆ ಮನೆ ಎಂದರೆ ಕೇಳಬೇಕೆ. ಮಹಿಳೆಯರಿಗೆ ಅದೊಂದು ಪ್ರಯೋಗಶಾಲೆ ಇದ್ದಂತೆ. ನಾಲಿಗೆ ನೀರುರಿಸುವ ಸಲಾಡ್ ಗಳಿಂದ ಹಿಡಿದು ಕುರುಕುಲು ತಿಂಡಿಗಳ ತನಕ ಇವರ ಪಾಕ ವೈವಿಧ್ಯವನ್ನು ಕಾಣಬಹುದು.

ಕೇವಲ ಅಡುಗೆ ಮಾಡುವುದಷ್ಟೆ ಅಲ್ಲ. ಅಡುಗೆ ಮನೆಯಲ್ಲಿನ ಪದಾರ್ಥಗಳನ್ನು ಹೆಚ್ಚು ಉಪಯುಕ್ತವಾಗಿ ಬಳಸಿಕೊಳ್ಳುವುದು ಹೇಗೆ. ಪಾಕಶಾಸ್ತ್ರದ ಹೊಸಹೊಸ ರುಚಿಗಳನ್ನು ಹೇಳಿಕೊಡಲಿದ್ದಾರೆ. ಈಗಾಗಲೆ ಎರಡು ಸೀಸನ್ ಗಳನ್ನು ನಡೆಸಿ ಪ್ರೇಕ್ಷಕರ ಅಭೂತಪೂರ್ವ ಮೆಚ್ಚುಗೆಗೆ ಪಾತ್ರವಾಗಿರುವ ಕಲರ್ಸ್ ವಾಹಿನಿ ಈಗ ಮೂರನೆ ಆವೃತ್ತಿಯನ್ನು ಪ್ರಾರಂಭಿಸುತ್ತಿದೆ.

ಈಗಾಗಲೆ ಪ್ರಚಿ ದೇಸಾಯಿ ಈ ಕಾರ್ಯಕ್ರಮದಲ್ಲಿ ತಮ್ಮ ಪಾಕ ನೈಪುಣ್ಯವನ್ನು ಮೆರೆದಿದ್ದರು. 'ಕಿಚನ್ ಚಾಂಪಿಯನ್ 3' ಕಾರ್ಯಕ್ರಮ ಕಲರ್ಸ್ ವಾಹಿನಿಯಲ್ಲಿ ಸೋಮವಾರ(ಆ.23)ದಿಂದ ಶುಕ್ರವಾರದವರೆಗೆ ಮಧ್ಯಾಹ್ನ 1ಗಂಟೆಗೆ ಪ್ರಸಾರವಾಗುತ್ತಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X