»   » ಕೌನ್ ಬನೇಗ ಕರೋಡ್ ಪತಿ ಯಲ್ಲಿ ಕನ್ನಡ ಡಿಂಡಿಮ

ಕೌನ್ ಬನೇಗ ಕರೋಡ್ ಪತಿ ಯಲ್ಲಿ ಕನ್ನಡ ಡಿಂಡಿಮ

Posted By:
Subscribe to Filmibeat Kannada
Amitabh Bachchan in KBC
ವೆಂಕಟೇಶ್ ಮತ್ತು ಪ್ರಾಣೇಶ್ ಸಹೋದರರು ಕೌನ್ ಬನೇಗಾ ಕರೋಡ್ ಪತಿ ಸೀಸನ್ 5 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವೆಂಕಟೇಶ್ ಗುಲ್ಬರ್ಗಾದಿಂದ ಮತ್ತು ಪ್ರಾಣೇಶ್ ರಾಯಚೂರು ನಗರದಿಂದ ಬಂದಿದ್ದರು. ದೀಪಾವಳಿಯ ಅಮಾವಾಸ್ಯೆ ದಿನದಂದು (26.10.11) ಪ್ರಸಾರಗೊಂಡ ಈ ಕಾರ್ಯಕ್ರಮದಲ್ಲಿ ಈ ಸಹೋದರರು ಕನ್ನಡ ಮತ್ತು ಡಾ.ರಾಜಕುಮಾರ್ ಬಗ್ಗೆ ಅಭಿಮಾನ ತೋರಿ ಕನ್ನಡತನ ಮೆರೆದರು.

ಕಾರ್ಯಕ್ರಮದ ಮೊದಲಲ್ಲಿ ವೆಂಕಟೇಶ್ ಕನ್ನಡದಲ್ಲಿ ಅಮಿತಾಬ್ ಬಚ್ಚನ್ ಬಗ್ಗೆ ಬರೆದ ಶಾಹಿರಿಯನ್ನು ಹಾಡಿದರೆ ಅವರ ಸಹೋದರ ಪ್ರಾಣೇಶ್ ಅದನ್ನು ಹಿಂದಿಗೆ ಅನುವಾದಿಸಿದರು. ಕಾರ್ಯಕ್ರಮದಲ್ಲಿ ತಮಗೆ ಎದುರಾದ ಕೆಲವೊಂದು ಪ್ರಶ್ತ್ನೆಗಳಿಗೆ ಉ.ದಾ. ಸೋಮದೇವ್ ಬರ್ಮನ್ ಯಾವ ಕ್ಷೇತ್ರದ ಆಟಗಾರ, ಜೀನಾಯಹ.. ಮರ್ನಾಯಹ.. ಯಾವ ಚಿತ್ರದ ಹಾಡು ಮುಂತಾದ ಪ್ರಶ್ತ್ನೆಗಳಿಗೆ ನಿರಾಯಾಸವಾಗಿ ಉತ್ತರಿಸಿ ಮುನ್ನಡೆದರು..

ಕಾರ್ಯಕ್ರಮದ ಮಧ್ಯೆ ಮತ್ತ ಕನ್ನಡತನ ಮೆರೆದ ಈ ಸಹೋದರರು.. ಅಮಿತಾಬ್ ಅನುಮತಿ ಪಡೆದು ಆಕಸ್ಮಿಕ ಚಿತ್ರದ ಜನಪ್ರಿಯ 'ಹುಟ್ಟಿದರೆ ಕನ್ನಡ ನಾಡಲಿ ಹುಟ್ಟಬೇಕು' ಹಾಡನ್ನು ಹಾಡಿ ಅದನ್ನು ಹಿಂದಿಗೆ ಅನುವಾದಿಸಿ ಬಚ್ಚನ್ ಗೆ ವಿವರಿಸಿದರು. ಈ ಹಾಡು ಎಷ್ಟು ಜನಪ್ರಿಯ ಎಂದರೆ ರಾಜ್ಯದ ಎರಡನೇ ನಾಡಹಾಡು ಮಟ್ಟದಲ್ಲಿ ಜನಪ್ರಿಯವಾಗಿದೆ ಎಂದಾಗ ಅಮಿತಾಬ್, ಕಲೆಗೆ ಪ್ರೋತ್ಸಾಹ ನೀಡಿದ ಕರ್ನಾಟಕ ಸರಕಾರ ಮತ್ತು ಡಾ. ರಾಜಕುಮಾರ್ ಗೆ ಹೃತ್ಪೂರ್ವಕ ಧನ್ಯವಾದ ಹೇಳಿದರು.

ನಿಮ್ಮ ಸೊಸೆ ಐಶ್ವರ್ಯಾ ರೈ ಬಚ್ಚನ್ ನಮ್ಮ ರಾಜ್ಯದವರು. ಹೆಣ್ಣು ಕೊಟ್ಟವರು (ನಮ್ಮ ರಾಜ್ಯ) ನಾವಾಗಿರುವುದರಿಂದ ನಿಮ್ಮ ಎದುರಿಗೆ ಯಾವತ್ತೋ ತಗ್ಗಿ ಬಗ್ಗಿ ನಡೆಯ ಬೇಕಾಗುತ್ತದೆ ಎಂದಾಗ ಇಡೀ ಸ್ಟುಡಿಯೋ ನಗೆಗಡಲಲ್ಲಿ ತೇಲಿತು. ಇದ್ದ ನಾಲ್ಕೂ ಲೈಫ್ ಲೈನ್ ಬಳಸಿ ಕೊಂಡಿದ್ದರಿಂದ ಈ ಸಹೋದರರು 12.5 ಲಕ್ಷ ರೂಪಾಯಿ ಮೊತ್ತಕ್ಕೆ ತಮ್ಮ ಆಟಕ್ಕೆ ಮಂಗಳ ಹಾಡಿದರು.

ದೇಶದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲಿ ಒಂದಾದ ಮತ್ತು ಅತಿ ಹೆಚ್ಚು ಟಿ ಆರ್ ಪಿ ಹೊಂದಿರುವ ಈ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಬಗ್ಗೆ ಅಭಿಮಾನ ತೊರೆದ ಈ ಸಹೋದರರಿಗೆ ಅಭಿನಂದನೆಗಳು. (ಒನ್ ಇಂಡಿಯಾ ಕನ್ನಡ)

English summary
Brothers Venkatesh from Gulbarga and Pranesh from Raichur participated in KBC season 5 on 26.10.11. In this programme they show cased their love to mother language Kannada by singing Dr Rajkumars songs. Hurray.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada