»   » ಲಕ್ಷ್ಮೀಪತಿಯರಿಗೆ ಯಮಗಂಡಕಾಲ, ಸಮಯ ಜ್ಯೋತಿಷ್ಯ

ಲಕ್ಷ್ಮೀಪತಿಯರಿಗೆ ಯಮಗಂಡಕಾಲ, ಸಮಯ ಜ್ಯೋತಿಷ್ಯ

By: * ಶಾಮಿ
Subscribe to Filmibeat Kannada
<ul id="pagination-digg"><li class="next"><a href="/tv/29-samaya-tv-astrlogy-goddess-lakshmi-nameology-part2-aid0037.html">Next »</a></li></ul>
Actor Darshan arrest
ಸಮಯ ಟಿವಿ ವಾಹಿನಿಯಲ್ಲಿ ಮಂಗಳವಾರ ಸಂಜೆ ಒಂದು ಫೋನ್ ಇನ್ ಕಾರ್ಯಕ್ರಮ ಪ್ರಸಾರವಾಯಿತು. ನಿರೂಪಕನ ಜತೆಗೆ ಓರ್ವ ಸಂಖ್ಯಾಶಾಸ್ತ್ರಜ್ಞ ಮತ್ತು ಜ್ಯೋತಿಷಿ ಇದ್ದರು. ವೀಕ್ಷಕರಿಂದ ನೇರ ಪ್ರಶ್ನೆಗಳು, ಅತಿಥಿಗಳಿಂದ ನೇರಾತಿನೇರ ಉತ್ತರಗಳು. ಕಾರ್ಯಕ್ರಮ ಸಖತ್ ಮಜಾ ಕೊಡ್ತು.

ಕಾರ್ಯಕ್ರಮದ ಹೈಲೈಟ್ ಹಿಂದೂ ದೇವತೆ ಲಕ್ಷ್ಮೀ. ಅವಳು ಪ್ರಬಲೆ ಮತ್ತು ಚಂಚಲೆ. ಅವಳ ಹೆಸರನ್ನು ನಾವುಗಳು, ಅಂದರೆ ಹುಲುಮಾನವರು ಇಟ್ಟುಕೊಳ್ಳಬಾರದು. ಹಾಗೇನಾದರೂ ಆಗಿದ್ದರೆ ಹೆಸರು ಇಟ್ಟುಕೊಂಡವಳಿಗೂ ಕಷ್ಟ, ಅವಳನ್ನು ಕಟ್ಟಿಕೊಂಡವನಿಗೆ ಭಾರೀ ನಷ್ಟ-ಕಷ್ಟ.

ಈ ವಿಚಾರಗಳನ್ನು ನೀವು ನಂಬಿದರೆ ನಂಬಿ, ಬಿಟ್ಟರೆ ಬಿಟ್ಹಾಕಿ. ಆದರೆ "ನಮ್ಮ ನಂಬಿಕೆಯನ್ನು ಪ್ರೂವ್ ಮಾಡಕ್ಕೆ ಸಾಕು ಬೇಕಾದಷ್ಟು ಜ್ವಲಂತ ಉದಾಹರಣೆಗಳಿವೆ" ಎಂದು ಸಂಖ್ಯಾಶಾಸ್ತ್ರಜ್ಞರು ಟಿವಿ ಪರದೆ ಮೇಲೆ ವಾದಿಸಿದರು.

ನೀವೇ ನೋಡಿ : ಮುತ್ತುಲಕ್ಷ್ಮಿಯ ಗಂಡ, ಮೀಸೆಮಾವ ವೀರಪ್ಪನ್ ಗತಿ ಏನಾಯಿತು, ಅರುಣ ಲಕ್ಷ್ಮಿಯ ಪತಿ ಜನಾರ್ದನ ರೆಡ್ಡಿಗೆ ಬರಬಾರದ ಕಷ್ಟ ಬಂತಲ್ಲವೇ. ಇನ್ನು ವಿಜಯಲಕ್ಷ್ಮಿಯ ಗಂಡ ನಟ ದರ್ಶನ್‌ಗೆ ಸೆರೆಮನೆ ವಾಸ, ಪಾಪ.

ಎರಡೋ ಮೂರೋ ಮದುವೆಯಾಗಿ ಹಾಯಾಗಿದ್ದ ಎನ್ ಟಿ ರಾಮರಾವ್ ಲಕ್ಷ್ಮಿಪಾರ್ವತಿಯನ್ನು ಮದುವೆ ಆದಮೇಲೆ ಇನ್ನಿಲ್ಲವಾಗಿಹೋದರು. ಅಷ್ಟು ದೂರ ಯಾಕೆ, ಲಕ್ಷ್ಮಿ ನಾಮಾಂಕಿತಳನ್ನು ಮದುವೆಯಾದ ನಿರ್ದೇಶಕ ಎಸ್ ನಾರಾಯಣ್ ಕೂಡ ಸ್ಯಾಂಡಲ್‌ವುಡ್ಡಿನಲ್ಲಿ ಅಂಥ ಏಳಿಗೆಯನ್ನು ಕಾಣುತ್ತಿಲ್ಲ. ಯಾಕೆ! ಯಾಕೆ?

<ul id="pagination-digg"><li class="next"><a href="/tv/29-samaya-tv-astrlogy-goddess-lakshmi-nameology-part2-aid0037.html">Next »</a></li></ul>
English summary
Ordinary mortals should not keep 'Lakshmi' as their name. She is the most revered Hindu goddess. All husbands who have married women with Lakshmi as their name is bound to suffer in life. Astrologers, numerologists on Samaya TV 24/7, Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada