»   » ಕಿಚ್ಚನ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ನೋಡ್ರಣ್ಣ

ಕಿಚ್ಚನ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ನೋಡ್ರಣ್ಣ

By: * ಮಲೆನಾಡಿಗ
Subscribe to Filmibeat Kannada
Sudeep
ಪ್ರೇಕ್ಷಕರ ನಾಡಿಮಿಡಿತವನ್ನು ಕೊಂಚ ತಡವಾಗಿಯಾದರೂ, ಸರಿಯಾಗಿ ಅರ್ಥ ಮಾಡಿಕೊಂಡಿರುವ ಸುವರ್ಣ ವಾಹಿನಿ ತನ್ನಕಾರ್ಯಕ್ರಮಗಳ ಗುಣಮಟ್ಟ ಹೆಚ್ಚಿಸಿಕೊಂಡು, ಜನ ಮೆಚ್ಚಿಗೆಯ ಜೊತೆಗೆ ಟಿಆರ್ ಪಿ ರೇಟಿಂಗ್ ನಲ್ಲೂ ಭರ್ಜರಿಯಾಗಿ ಮುನ್ನುಗ್ಗುತ್ತಿದೆ.

ನಟ ಕಿಚ್ಚ ಸುದೀಪ್ ನೇತೃತ್ವದಲ್ಲಿ ಮೂಡಿ ಬರುತ್ತಿರುವ 'ಪ್ಯಾಟೆ ಹುಡುಗೀರ ಹಳ್ಳಿ ಲೈಫ್' ರಿಯಾಲಿಟಿ ಕಾರ್ಯಕ್ರಮ ಯುವ ಜನತೆಯ ಜೊತೆಗೆ ಎಲ್ಲಾವರ್ಗದ ಮೆಚ್ಚುಗೆ ಗಳಿಸುತ್ತಿರುವುದು ವಿಶೇಷ. ಪುರದಾಳು ಗ್ರಾಮದ ಜನತೆ ಪ್ಯಾಟೆ ಹುಡ್ಗೀರನ್ನು ಪಳಗಿಸುತ್ತಾ ಪಳಗಿಸುತ್ತಾ ಹೈ ಫೈ ಹುಡುಗಿರೊಡನೆ ಭಾವನಾತ್ಮಕವಾಗಿ ಬೆರೆಯುತ್ತಿರುವುದು ಪ್ರೇಕ್ಷಕರಿಗೆ ಇಷ್ಟವಾಗಿದೆ.

ಸುದೀಪ್ ಅವರ ಸ್ಟಾರ್ ಗಿರಿಯನ್ನಷ್ಟೇ ನೆಚ್ಚಿಕೊಳ್ಳದೆ, ಸುದೀಪ್ ಗೆ ಬಹುಪರಾಕ್ ಹೇಳುವ ಕಾರ್ಯಕ್ರಮವಾಗದೆ, ಸತ್ವಯುತವಾಗಿ ಕಾರ್ಯಕ್ರಮ ಮೂಡಿ ಬರುತ್ತಿದೆ. ಸ್ಪರ್ಧಿಗಳ ಎಲಿಮಿನೇಷನ್ ಇದ್ದಾಗ ಪುರ ಪಂಚಾಯಿತಿ ನಡೆಸಲು ವಾರಕ್ಕೊಮ್ಮೆ ಮಾತ್ರ ಸುದೀಪ್ ಈ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ, ಕಾರ್ಯಕ್ರಮದ ಹೈಲೇಟ್ ನಟ ಅಕುಲ್ ಬಾಲಾಜಿ, ಈ ರಿಯಾಲಿಟಿ ಷೋನಿಂದ ಅಕುಲ್ ಗೆ ಸಾಕಷ್ಟು ಜನ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ.

ಹಳ್ಳಿಗೆ ಬಂದವರು ಹತ್ತು ಉಳಿದವರು ಎಷ್ಟು?: ಪ್ಯಾಟೆ ಹುಡುಗಿಯರ ಹಳ್ಳಿ ಲೈಫ್ ಕಾರ್ಯಕ್ರಮ ಆರಂಭದಲ್ಲೇ ರೋಚಕ ಪಡೆದುಕೊಂಡು, ಜನತೆಯಲ್ಲಿ ಕುತೂಹಲ ಮೂಡಿಸಿತು. ಒಂದಿಬ್ಬರು ಸ್ಪರ್ಧಿಗಳು ಅನಾರೋಗ್ಯ ಪೀಡಿತರಾಗಿ, ಮೈಗಳ್ಳರಾಗಿ ಸ್ಪರ್ಧೆಯಿಂದ ಹೊರಬೀಳಲು ಅತಿರೇಕದ ಕೃತ್ಯಗಳಿಗೆ ಕೈ ಹಾಕಿದ್ದು ನಡೆದುಹೋಯ್ತು.

ಮೊಬೈಲ್ , ಕಂಪ್ಯೂಟರ್, ಕೆಫೆ ಕಾಫಿಡೇ, ಲೇಟ್ ನೈಟ್ ಪಾರ್ಟಿ ಹೀಗೆ ಸಿಟಿ ಲೈಫ್ ನ ಸುಖ ಅನುಭವಿಸಿದ್ದ ಹುಡುಗಿಯರು ಅಪ್ಪ, ಅಮ್ಮ , ಸ್ನೇಹಿತರನ್ನು ತೊರೆದು ತಿಂಗಳುಗಳ ಕಾಲ ಹಳ್ಳಿ ಜನರೊಟ್ಟಿಗೆ ಜೀವನ ಸಾಗಿಸಲು ಹೆಣಗುತ್ತಿದ್ದಾರೆ.

ಹೊಲ ಉಳುವುದು, ಕಸ ಗುಡಿಸುವುದು, ನೀರು ಸೇದುವುದು, ಹಾಲು ಕರೆಯುವುದು, ಮಕ್ಕಳು, ವೃದ್ಧರನ್ನು ಪಾಲಿಸುವುದು, ಅಡುಗೆ ಮಾಡುವುದು, ಬೆರಣಿ ತಟ್ಟುವುದು ಇತ್ಯಾದಿ ಕಾಯಕಗಳಲ್ಲದೆ, ಗ್ರಾಮೀಣ ಆಟಗಳ ಆಡಿ ಕುಣಿದು ನಲಿಯುವುದಲ್ಲದೆ ಪರಸ್ಪರ ಕಿತ್ತಾಟವನ್ನು ಸ್ಪರ್ದಿಗಳು ಮಾಡುತ್ತಿದ್ದಾರೆ.

ಈಗ ಉಳಿದಿರುವುದು ನಾಲ್ಕೇ ಜನ 'ಕೋಳಿ' ರಮ್ಯ, 'ಏಜೆ' ಅರ್ಪಿತಾ, 'ರಾಯಲ್ಸ್ 'ಮಾನ್ವಿ ಹಾಗೂ ನಯನಾ. ವಾರಕ್ಕೊಮ್ಮೆ ವೋಟಿಂಗ್ ಮಾಡಿ ಒಬ್ಬ ಸ್ಪರ್ಧಿಯನ್ನು ಡೆಂಜರ್ ಜೋನ್ ಗೆ ತಳ್ಳ ಲಾಗುತ್ತದೆ. ಕಡಿಮೆ ಅಂಕಗಳಿಸಿದ ಸ್ಪರ್ಧಿಯನ್ನು ಹೊರಹಾಕಲಾಗುತ್ತದೆ ಇದೆಲ್ಲವನ್ನು ಸುದೀಪ್ ಪಂಚಾಯಿತಿಯಲ್ಲಿ ನಿರ್ಣಯಿಸುತ್ತಾರೆ.

ಭರ್ಜರಿ ಬಹುಮಾನ:
ಹಳ್ಳಿ ಲೈಫನ್ನು ಗೆದ್ದವರಿಗೆ 2 ಬೆಡ್ ರೂಮ್ ಇರುವ ಫ್ಲಾಟ್ ನೀಡುತ್ತಿದ್ದು ಗೆದ್ದ ಹುಡುಗಿಯಷ್ಟೇ ಅಲ್ಲದೆ ಎರಡನೇ ಸ್ಥಾನ ಪಡೆವ ಸ್ಪರ್ಧಿಗೂ ಬಂಪರ್ ಬಹುಮಾನ ಉಂಟು. ಹತ್ತು ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನು ನೀಡಲಾಗುವುದು ಎಂದು ಸುದೀಪ್ ಹೇಳಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada