ಈಟಿವಿ ಹೊಸ ಧಾರಾವಾಹಿ ನಿನ್ನೊಲುಮೆಯಿಂದಲೇ

ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ದಿನ ರಾತ್ರಿ 8.30ಕ್ಕೆ ಧಾರಾವಾಹಿ ಪ್ರಸಾರವಾಗಲಿದೆ. 'ನಿನ್ನೊಲುಮೆಯಿಂದಲೇ' ಧಾರಾವಾಹಿ ಸಾಂಸಾರಿಕ ಚೌಕಟ್ಟಿನಲ್ಲಿ ಸಾಗುವ ಮಹಿಳಾ ಪ್ರಧಾನ ಕತೆ. ಗಂಡನ ದಬ್ಬಾಳಿಕೆಯಿಂದ ನೊಂದ ಮಹಿಳೆಯೊಬ್ಬಳ ಜೀವನಗಾಥೆಯನ್ನು ವಿನು ಬಳಂಜ ಈ ಬಾರಿ ತೆರೆದಿಟ್ಟಿದ್ದಾರೆ.
ಗೃಹಸ್ಥೆಯಾದ ಮಲ್ಲಿಕಾ ತನ್ನ ಪತಿಯ ಕಿರುಕುಳ ತಾಳಲಾರದೆ ಆತನಿಂದ ದೂರ ಹೋಗಲು ನಿರ್ಧರಿಸುತ್ತಾಳೆ. ಭಾನು ಎಂಬ ಮತ್ತೊಬ್ಬನನ್ನು ಪ್ರೇಮಿಸುತ್ತಾಳೆ. ಆದರೆ ಮಲ್ಲಿಕಾಳ ಮಗಳೂ ಆತನನ್ನೇ ಪ್ರೇಮಿಸುತ್ತಿರುವ ವಿಚಾರ ಆಕೆಯ ಗಮನಕ್ಕೆ ಬರುತ್ತದೆ. ಮುಂದೇನಾಗುತ್ತದೆ ಎಂಬ ಕುತೂಹಲ ಘಟ್ಟದಲ್ಲಿ ಕತೆ ಸಾಗುತ್ತದೆ.
ವಿನು ಬಳಂಜ ಈಗಾಗಲೆ ಕಿರುತೆರೆಯಲ್ಲಿ ಯಶಸ್ವಿ ನಿರ್ದೇಶಕ ಎನ್ನಿಸಿಕೊಂಡವರು. ತಾಂತ್ರಿಕತೆಯಲ್ಲಿ ಹಾಗೂ ಅಭಿನಯದಲ್ಲಿ ರಾಜಿಯಾಗದ ನಿರ್ದೇಶಕರೆಂದೇ ಹೆಸರಾಗಿದ್ದಾರೆ. ಅವರ ಯಶಸ್ಸಿಗೆ ಇದೂ ಒಂದು ಕಾರಣ ಎನ್ನಬಹುದು. 'ನಿನ್ನೊಲೊಮೆಯಿಂದಲೇ' ಧಾರಾವಾಹಿಯೂ ಆ ನಿರೀಕ್ಷೆಗಳನ್ನು ಹುಟ್ಟಿಸಿದೆ. (ಒನ್‌ಇಂಡಿಯಾ ಕನ್ನಡ)
More from Filmibeat
English summary
Vinu Balanja's new tele serial Ninnolumeyindale starts on Etv Kannada from 2nd January 2012 at 8.30 pm IST from Monday to Friday. Malika is a loving housewife who can't bear her husband's torture anymore and decides to venture out; she falls in love with Bhanu but later realizes her daughter too is in love with him.


Click it and Unblock the Notifications











