For Quick Alerts
ALLOW NOTIFICATIONS  
For Daily Alerts

ಟಿವಿ ಜ್ಯೋತಿಷಿಗಳ ನಿತ್ಯ ಬಕ್ರಾ ಕಾರ್ಯಕ್ರಮ

By * ಪಿಎಸ್ ಶೆಟ್ಟಿ, ಮಠದಕಣಿ, ಮಂಗಳೂರು
|

ಹಿಂದಿ ಟಿವಿ ಚಾನೆಲ್‌ವೊಂದರಲ್ಲಿ ಬಕ್ರಾ ಎಂಬ ಹಾಸ್ಯ ಕಾರ್ಯಕ್ರಮ ಬರುತ್ತದೆ. ಯಾವನಾದರೂ ಒಬ್ಬ ಮುಗ್ಧನನ್ನು ಕಿಚಾಯಿಸಿ, ಸತಾಯಿಸಿ, ಕೊನೆಗೆ ನಿಜ ಹೇಳಿ ಅವನನ್ನೂ ನಗಿಸಿ ಕೊನೆಗೊಂದು ಬಹುಮಾನ ಕೊಡುತ್ತಾ, ಇದೊಂದು ಮನೋರಂಜನೆ ಕಾರ್ಯಕ್ರಯ, ಯಾರಿಗೂ ನಷ್ಟವಿಲ್ಲ.

ಆದರೆ ಕನ್ನಡ ಟಿವಿಯವರು ಇದೇ ಬಕ್ರಾ ಕಾರ್ಯಕ್ರಮವನ್ನು ದೊಡ್ಡ ದೊಡ್ಡ ರೀತಿಯಲ್ಲಿ ನಡೆಸಿ ಇಡೀ ಸಮಾಜಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ. ಹೇಗೆಂದರೆ ಕನ್ನಡ ಚಾನೆಲ್‌ಗಳಲ್ಲಿ ದಿನಾ ಬೆಳಿಗ್ಗೆ ಪ್ರಸಾರವಾಗುವ ಎಲ್ಲಾ ಜ್ಯೋತಿಷ್ಯ ಹಾಗೂ ವಾಸ್ತು ಕಾರ್ಯಕ್ರಮಗಳು ಎಲ್ಲರನ್ನೂ 'ಬಕ್ರಾ" ಮಾಡಿ ಮೋಸ ಮಾಡಿ ಪ್ರತಿಯೊಬ್ಬರಿಗೂ ಸಾವಿರಾರು ರೂಪಾಯಿ ಖರ್ಚು ನಷ್ಟ ಮಾಡಿಸುತ್ತದೆ.

ಮಹಿಳೆಯರೇ ಟಾರ್ಗೆಟ್ : ಈ ಜ್ಯೋತಿಷ್ಯ ಕಾರ್ಯಕ್ರಮದಲ್ಲಿ ಮಹಿಳೆಯರೇ ಹೆಚ್ಚಾ ಗಿ 'ಬಕ್ರಿ " ಆಗುವುದು, ಕಾರಣ ಮಹಿಳೆಯರೇ ಹೆಚ್ಚಾಗಿ ಯಾವುದನ್ನೂ ಪ್ರಶ್ನಿಸದೆ, ತರ್ಕಿಸದೇ, ಮೌಢ್ಯ ಮತ್ತು ಕಂದಾಚಾರಗಳನ್ನು ಸುಲಭವಾಗಿ ಅಪ್ಪಿಕೊಳ್ಳುವುದು. ಇಂತಹ ಕಂದಚಾರಿಗಳಲ್ಲಿ ವಿದ್ಯಾವಂತ ಮಹಿಳೆಯರೇ ಹೆಚ್ಚು!

ಜಪಾನ್‌ನ ಸುಮೋ ಪೈಲ್ವಾನ್ ತರಹದ ಜ್ಯೋತಿಷಿಯೊಬ್ಬ ಕೊಟ್ಟ ಸಲಹೆಯೆಂದರೆ ಅವನು ಹೇಳಿದ ಕೆಲವು ವಸ್ತುಗಳನ್ನು ಸುಟ್ಟು ಬೂದಿ ಸೇವಿಸಿದ್ದರೆ ಅವರಿಗೆ ವಾಮಾಚಾರದಿಂದ ರಕ್ಷಣೆ ಸಿಗುತ್ತದೆಂತೆ. ಅವನು ಹೇಳಿದ ವಿಷ ವಸ್ತುಗಳ ಬೂದಿಯೂ ವಿಷಕಾರಕವಾಗಿರುತ್ತದೆಂಬ ಸಾಧಾರಣ ಜ್ಞಾನವೂ ಆ ದಡಿಯನಿಗಿಲ್ಲ!

ಇನ್ನೊಬ್ಬ ಜ್ಯೋತಿಷಿಯು ಹಾವು ಕಡಿದರೆ ವಿಷವನ್ನು ಮಂತ್ರದಿಂದ ಪರಿಹರಿಸಬಹುದೆಂಬ ಆತ್ಮಘಾತುಕ ಸಲಹೆ ಕೊಡುತ್ತಾನೆ. ಹಾವುಗಳಿಗೆ ಕಿವಿಯಿರುವುದಿಲ್ಲ. ಮಾನವನ ಮಂತ್ರ ಅವುಗಳಿಗೆ ಕೇಳಿಸುವುದೇ ಇಲ್ಲ ಎಂಬ ಜ್ಞಾನವೂ ಆತನಿಗಿಲ್ಲ. ಕೆಲವು ಜ್ಯೋತಿಷಿಗಳಿಗೆ ಇಂಗ್ಲಿಷ್ ಭಾಷೆಯಲ್ಲಿ ಹೇಳಿದ ವಿಷಯ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತ ಎಂದು ಗೊತ್ತಿರುವುದರಿಂದ ಕಂದಾಚಾರ ಹರಡಲು ಬೇಕೆಂದೇ ಇಂಗ್ಲೀಷ್ ಬಳಸುತ್ತಾರೆ.

ಹೈಟೆಕ್ ಜ್ಯೋತಿಷಿಗಳು: ಲ್ಯಾಪ್‌ಟಾಪ್ ಬಳಸುವುದು ಗೊತ್ತಿಲ್ಲದಿದ್ದರೂ, ವೀಕ್ಷಕರನ್ನು ಇಂಪ್ರೆಸ್ ಮಾಡಲು ಕೆಲವು ಜ್ಯೋತಿಷಿಗಳು ಎದುರಲ್ಲಿ ಲ್ಯಾಪ್‌ಟ್ಯಾಪ್ ತೋರಿಕೆಗೆ ಇಟ್ಟಿರುತ್ತಾರೆ. ಭಿಕ್ಷುಕರಿಗೆ ದಾನ ಮಾಡುವುದರಿಂದ ಲಕ್ಷ್ಮಿ ಮುನಿಯುತ್ತಾಳೆ ಎಂದು ಒಬ್ಬ ಜ್ಯೋತಿಷಿ ಹೇಳಿದ್ದೆ ತಡ, ನಮ್ಮ ಕಂದಾಚಾರಿ ಮುಖ್ಯಮಂತ್ರಿ ಯಡ್ಡಿ ಬೆಂಗಳೂರಿನಲ್ಲಿ ಭಿಕ್ಷುಕರನ್ನೆಲ್ಲ ಹಿಡಿದು ತಂದು ಮರುವಸತಿ ಕೇಂದ್ರದಲ್ಲಿ ತುರುಕಿ ನಂತರ ಪಸರಿಸಿದ ಸಾಂಕ್ರಾಮಿಕ ರೋಗದಿಂದ ನೂರಾರು ಭಿಕ್ಷುಕರ ಸಾವಿಗೆ ಕಾರಣೀಭೂತನಾದ.

'ಕನ್ನಡಿಗ ಮಾಜಿ ಪ್ರಧಾನಿಗಳು" ಇನ್ನು ಮೂರು ತಿಂಗಳಲ್ಲಿ ಸಾಯುತ್ತಾರೆ ಎಂದು ಹುಂಬ ಜ್ಯೋತಿಷಿ ಹೇಳಿ ಎರಡು ವರ್ಷವಾಯಿತು. ದೇವೇಗೌಡರು ಆರೋಗ್ಯವಾಗಿಯೇ ಇದ್ದಾನೆ. ಅಮೆರಿಕದಲ್ಲಿ ಹೀಗೆ ರಾಷ್ಟ್ರೀಯ ನಾಯಕರ ಬಗ್ಗೆ ಹೇಳಿ ಅವರ ಕುಟುಂಬಿಕರಿಗೆ ಅಭಿಮಾನಿಗಳಿಗೆ ಮಾನಸಿಕ ಹಿಂಸೆ ಕೊಟ್ಟಿದ್ದರೆ ಆ ಮೂರ್ಖ ಜ್ಯೋತಿಷಿಯನ್ನು ಕೋರ್ಟಿಗೆಳೆದು ಜೈಲಿಗೆ ಅಟ್ಟುತಿದ್ದರು.

ಒಟ್ಟಾರೆ, ಟಿವಿ ಜ್ಯೋತಿಷಿವೆಂದರೆ ಮೂಢರ ಸಂತೆ. ವೀಕಕರು ಪೆದ್ದು ಪೆದ್ದಾಗಿ ಕೇಳುವ ಪ್ರಶ್ನೆಗಳಿಗೆ ಅದಕ್ಕಿಂತ ಪೆದ್ದ ಉತ್ತರ ನೀಡುವ ಹುಂಬ ಜ್ಯೋತಿಷಿಗಳಿಗೆ ಕಾನೂನಿನ ಕಡಿವಾಣ ಅಗತ್ಯ. ಅಂತೆಯೇ ಅದಾಯಕರ ಇಲಾಖೆಯವರು ಈ ಟಿವಿ ಜ್ಯೋತಿಷಿಗಳ ವಿವಿಧ ಆದಾಯ ಮೂಲಗಳ ತನಿಖೆ ನಡೆಸಬೇಕು.

English summary
Kannada TV Jyotishis prediction has become big joke like MTV Bakra program. TV channels are targeting innocent house wives. Fake Astrologers prediction on natural disaster, vaastu, Devegowda's death date and on various issues has proved to be fake and wrong. Government should take necessary legal action against this kind of fake astrologers who create panic and fear in the minds of public. 

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more