»   » ಸುವರ್ಣ ಪರಿವಾರ ಪ್ರಶಸ್ತಿ: ನೆಚ್ಚಿನ ನಟ-ನಟಿಯರಿಗೆ ವೋಟ್ ಮಾಡಿ

ಸುವರ್ಣ ಪರಿವಾರ ಪ್ರಶಸ್ತಿ: ನೆಚ್ಚಿನ ನಟ-ನಟಿಯರಿಗೆ ವೋಟ್ ಮಾಡಿ

Posted By:
Subscribe to Filmibeat Kannada

ಸತತವಾಗಿ ಸುಮಾರು 9 ವರ್ಷಗಳಿಂದ ಕನ್ನಡಿಗರಿಗೆ ನಾನ್ ಸ್ಟಾಪ್ ಮನರಂಜನೆಯನ್ನು ನೀಡುತ್ತಾ ಬರುತ್ತಿರುವ ಕರ್ನಾಟಕದ ಹೆಮ್ಮೆಯ ಸುವರ್ಣ ಚಾನೆಲ್ ನಲ್ಲಿ ವೀಕ್ಷಕರನ್ನು ಮನ ರಂಜಿಸುತ್ತಿರುವ ಸುವರ್ಣ ಪರಿವಾರದ ಸದಸ್ಯರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುವ ಸುದಿನ ಹತ್ತಿರವಾಗುತ್ತಿದೆ.

ಹೌದು '4ನೇ ವರ್ಷದ ಸುವರ್ಣ ಪರಿವಾರ ಆವಾರ್ಡ್ಸ್ 2016' ಅನೌನ್ಸ್ ಆಗಿದ್ದು, ಕಳೆದ ವರ್ಷದಲ್ಲಿ ಸುವರ್ಣ ಸದಸ್ಯರುಗಳು ನೀಡಿದ ಮನರಂಜನೆಯ ಹಿನ್ನಲೆಯಲ್ಲಿ ಒಟ್ಟು 37 ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ.[ನೆಚ್ಚಿನ ರಿಯಾಲಿಟಿ ಶೋ: ಕನ್ನಡದ ಕೋಟ್ಯಾಧಿಪತಿ]

ಧಾರಾವಾಹಿ ವಿಭಾಗದಲ್ಲಿ 23 ಮತ್ತು ನಾನ್ ಫಿಕ್ಷನಲ್ ವಿಭಾಗದಲ್ಲಿ 8 ಪ್ರಶಸ್ತಿಗಳು ಮಾತ್ರವಲ್ಲದೇ ಸುಮಾರು 6 ವಿಶೇಷ ಪ್ರಶಸ್ತಿಗಳಿವೆ.

4th Suvarna Parivaar Awards 2016

'ದುರ್ಗಾ' ಧಾರಾವಾಹಿಯ ನಟ ನಕುಲ್, 'ಅವನು ಮತ್ತೆ ಶ್ರಾವಣಿ'ಯ ನಟ ಸೂರ್ಯ, 'ಅನುರೂಪ'ದ ನಟ ತೇಜಸ್ವಿ, 'ಜೀವನ ಚೈತ್ರದ' ನಟ ಜೀವನ್ ಮುಂತಾದವರು ನೆಚ್ಚಿನ ನಾಯಕರ ಸಾಲಿನಲ್ಲಿದ್ದಾರೆ.

'ದುರ್ಗಾ' ಧಾರಾವಾಹಿಯ ನಟಿ ದುರ್ಗಾ, 'ಅವನು ಮತ್ತೆ ಶ್ರಾವಣಿ'ಯ ನಟಿ ಶ್ರಾವಣಿ, 'ಅಮೃತ ವರ್ಷಿಣಿ'ಯ ನಟಿ ಅಮೃತ, 'ಅಮ್ಮಾ' ಧಾರಾವಾಹಿಯ ನಟಿ ಶಾಲಿನಿ ಅವರು ಮೆಚ್ಚಿನ ನಾಯಕಿಯ ಸಾಲಿನಲ್ಲಿದ್ದಾರೆ.[ಸುವರ್ಣ ಚಾನೆಲ್ ಗೆ ಲಗ್ಗೆ ಇಟ್ಟ 'ಗುಂಡ್ಯಾನ ಹೆಂಡ್ತಿ']

ಇದರಲ್ಲಿ 'ದುರ್ಗಾ', 'ಅವನು ಮತ್ತೆ ಶ್ರಾವಣಿ', 'ಅಮೃತವರ್ಷಿಣಿ' ಮತ್ತು 'ಅಮ್ಮಾ' ಧಾರಾವಾಹಿಗಳು ನೆಚ್ಚಿನ ಧಾರಾವಾಹಿ ಸ್ಪರ್ಧೆಯಲ್ಲಿ ಕಣಕ್ಕಿಳಿದಿವೆ.

ಇನ್ನು ರಿಯಾಲಿಟಿ ಶೋ ವಿಭಾಗದಲ್ಲಿ 'ಆಕ್ಷನ್ ಸ್ಟಾರ್', 'ಹಳ್ಳಿ ಹೈದ ಪ್ಯಾಟೇಗ್ ಬಂದ', 'ಪುಟಾಣಿ ಪಂಟ್ರು' ಮತ್ತು 'ಡ್ಯಾನ್ಸ್ ಡ್ಯಾನ್ಸ್' ಶೋಗಳು ರೇಸ್ ನಲ್ಲಿವೆ.['ಸೂಪರ್ ಜೋಡಿ' ಗ್ರ್ಯಾಂಡ್ ಫಿನಾಲೆ ಇಂದು! ಮಿಸ್ ಮಾಡ್ಬೇಡಿ]

ಭೌತೀಶ್ ಮತ್ತು ಇಂಚರ (ಹಳ್ಳಿ ಹೈದ ಪ್ಯಾಟೇಗ್ ಬಂದ), ವಿಶ್ವನಾಥ್ ಮತ್ತು ಅಕ್ಷಿತಾ (ಸೂಪರ್ ಜೋಡಿ), ತೌಶೀರ್, ಪ್ರಣಮ್ಯ ಮತ್ತು ಶಿಲ್ಪಾ ಮಂಜುನಾಥ್ (ಡ್ಯಾನ್ಸ್ ಡ್ಯಾನ್ಸ್) ಮತ್ತು ಮೋಕ್ಷ್ (ಪುಟಾಣಿ ಪಂಟ್ರು) ಇವರು ನೆಚ್ಚಿನ ರಿಯಾಲಿಟಿ ಶೋ ಸ್ಪರ್ಧಿಗಳ ಸಾಲಿನಲ್ಲಿ ನಾಮಿನೇಟ್ ಆಗಿದ್ದಾರೆ.

ಇದೀಗ ನಿಮ್ಮ ನೆಚ್ಚಿನ ನಟ-ನಟಿ, ನೆಚ್ಚಿನ ಧಾರಾವಾಹಿ, ನೆಚ್ಚಿನ ರಿಯಾಲಿಟಿ ಶೋ ಮತ್ತು ರಿಯಾಲಿಟಿ ಶೋನ ಸ್ಪರ್ಧಿಗಳನ್ನು ಆಯ್ಕೆ ಮಾಡಲು ನೀವು ವೋಟ್ ಮಾಡಲು ಸುವರ್ಣ ಅವಕಾಶ ಇದ್ದು, www.suvarnaparivaarawards.tv ಈ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅಲ್ಲಿ ವೋಟ್ ಮಾಡಿ.

-
-
-
ಸುವರ್ಣ ಪರಿವಾರ ಪ್ರಶಸ್ತಿ: ನೆಚ್ಚಿನ ನಟ-ನಟಿಯರಿಗೆ ವೋಟ್ ಮಾಡಿ

ಸುವರ್ಣ ಪರಿವಾರ ಪ್ರಶಸ್ತಿ: ನೆಚ್ಚಿನ ನಟ-ನಟಿಯರಿಗೆ ವೋಟ್ ಮಾಡಿ

-
English summary
Suvarna Tv: 4th Suvarna Parivaar Awards 2016 Nominations start.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada