»   » ಅಮೀರ್ ಸತ್ಯಮೇವ ಜಯತೆಗೆ ಭರ್ಜರಿ ಪ್ರತಿಕ್ರಿಯೆ

ಅಮೀರ್ ಸತ್ಯಮೇವ ಜಯತೆಗೆ ಭರ್ಜರಿ ಪ್ರತಿಕ್ರಿಯೆ

Posted By:
Subscribe to Filmibeat Kannada
Aamir Khan TV Show
ಭಾರಿ ನಿರೀಕ್ಷೆ ಹುಟ್ಟಿಸಿದ್ದ ಅಮೀರ್ ಖಾನ್ ಅವರ ಕಿರುತೆರೆ ಟಾಕ್ ಶೋ 'ಸತ್ಯಮೇವ ಜಯತೆ' ಮೊದಲ ಸಂಚಿಕೆಯಲ್ಲೇ ವೀಕ್ಷಕರ ತನುಮನ ಗೆದ್ದಿದೆ. ಈ ಮೂಲಕ ಅಮೀರ್ ಶೋ ಭಾರಿ ನಿರೀಕ್ಷೆ ಹುಟ್ಟುಹಾಕಿದೆ. ಬದುಕಿನ ಕಟು ಸತ್ಯಗಳನ್ನು ಶೋನಲ್ಲಿ ಅಮೀರ್ ಬಿಚ್ಚಿಟ್ಟಿದ್ದು ಮೆಚ್ಚುಗೆಯ ಅಂಶ.

ಭಾನುವಾರ (ಮೇ 6) ಬೆಳಗ್ಗೆ 11ಕ್ಕೆ ಪ್ರಸಾರವಾದ ಮೊದಲ ಸಂಚಿಕೆಯಲ್ಲಿ ಅಮೀರ್ ಆಯ್ದುಕೊಂಡ ಟಾಪಿಕ್ 'ಹೆಣ್ಣು ಭ್ರೂಣ ಹತ್ಯೆ'. ಭ್ರೂಣಹತ್ಯೆ ಎದುರಿಸಿದ ಹಲವು ಅಮ್ಮಂದಿರ ಕರುಣಾಜನಕ ಕಥೆಗಳು, ಆಘಾತಕಾರಿ ಅಂಕಿಅಂಶಗಳು, ವೈದ್ಯರು ಹಾಗೂ ತಜ್ಞರ ಸಂದರ್ಶನಗಳು...ಹೀಗೆ ಕಾರ್ಯಕ್ರಮವನ್ನು ಬಹಳ ಲವಲವಿಕೆಯಿಂದ ಅಮೀರ್ ನಡೆಸಿಕೊಟ್ಟರು.

ಒಟ್ಟು ತೊಂಬತ್ತು ನಿಮಿಷಗಳ ಈ ರಿಯಾಲಿಟಿ ಶೋ ಮೂಲಕ ಅಮೀರ್ ಕೆಲವು ಸತ್ಯ ಸಂಗತಿಗಳನ್ನು ಅನಾವರಣಗೊಳಿಸಿದರು. ಮೊದಲ ಸಂಚಿಕೆ ಮುಗಿಯುತ್ತಿದ್ದಂತೆ ಅಮೀರ್‌ಗೆ ದೇಶದ ಮೂಲೆಮೂಲೆಗಳಿಂದ ಶ್ಲಾಘನೆಯ ಸುರಿಮಳೆಯಾಯಿತು. ಅವರ ಟ್ವಿಟ್ಟರ್ ಖಾತೆಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ.

'ಸತ್ಯಮೇವ ಜಯತೆ' ಕಮರ್ಷಿಯಲ್ ಟಿವಿ ಶೋ ಅಲ್ಲ. ಇದೊಂದು ಚಳವಳಿ. ಜನರ ಮನೋಭಾವ, ಅವರ ಚಿಂತನೆಗಳನ್ನು ಈ ಶೋ ಮೂಲಕ ಬದಲಾಯಿಸಲು ಹೊರಟಿದ್ದೇನೆ. ಪ್ರತಿ ಸಂಚಿಕೆಯೂ ದೇಶದ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಎಂದಿದ್ದಾರೆ ಅಮೀರ್ ಖಾನ್. (ಏಜೆನ್ಸೀಸ್)

English summary
The sensitive, yet harsh reality of female infanticide in India became the first issue Mr Perfectionist Aamir Khan tackled with his TV debut Satyamev Jayate (Truth Alone Prevails) on Star Plus this week. The premier episode evoked mixed response with thousands immediately taking to social media to voice their opinions.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada