»   » ಅಮೀರ್ ಖಾನ್ ಗಿಂತ ಸತ್ಯಮೇವ ಜಯತೇ ಹಿಟ್

ಅಮೀರ್ ಖಾನ್ ಗಿಂತ ಸತ್ಯಮೇವ ಜಯತೇ ಹಿಟ್

Posted By:
Subscribe to Filmibeat Kannada
ಬಾಲಿವುಡ್ ಮಿ ಪರ್ಫೆಕ್ಟ್ ಅಮೀರ್ ಖಾನ್ ಕಿರುತೆರೆಯಲ್ಲಿ ನಡೆಸಿಕೊಡುತ್ತಿರುವ ಟಾಕ್ ಶೋ ಸತ್ಯಮೇವ ಜಯತೇ ಸಖತ್ ಹಿಟ್ ದಾಖಲಿಸಿದೆ. ಗೂಗಲ್ ವರದಿ ಪ್ರಕಾರ್ ಈಗ ಅಮೀರ್ ಖಾನ್ ಅವರಗಿಂತ ಹೆಚ್ಚಾಗಿ ಸತ್ಯಮೇವ ಜಯತೇ ಬಗ್ಗೆ ಜನರು 'ಸರ್ಚ್' ಮಾಡುವುದು ಹೆಚ್ಚಾಗಿದೆ. ಇದರರ್ಥ, ಸತ್ಯಮೇವ ಜಯತೇ ಅಮೀರ್ ಗಿಂತಲೂ ಜನಪ್ರಿಯವಾಗಿದೆ.

ಸಾಮಾಜಿಕ ಸಮಸ್ಯೆಗಳನ್ನು ಸರಿಯಾದ ಅಂಕಿ-ಅಂಶಗಳ ಆಧಾರದ ಮೂಲಕ ಚರ್ಚಿಸುತ್ತಿರುವ ಅಮೀರ್ ಖಾನ್ ಎಲ್ಲಾ ವರ್ಗದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ಕಾರ್ಯಕ್ರಮ ನಡೆಸಿಕೊಡುವ ಅಮೀರ್ ಖಾನ್ ಶೈಲಿ ಜಗತ್ತಿನಾದ್ಯಂತ ಜನರ ಕುತೂಹಲ ಹಾಗೂ ಅದ್ಭುತ ಪ್ರತಿಕ್ರಿಯೆಗೆ ಕಾರಣವಾಗಿದೆ.

ಅಂತರ್ಜಾಲ ಬಳಕೆದಾರರು ಅಮೀರ್ ಬದಲಾಗಿ ಸತ್ಯಮೇವ ಜಯತೇ ಕಾರ್ಯಕ್ರಮದ ಹುಡುಕಾಟದಲ್ಲಿ ತೊಡಗಿದ್ದಾರೆ. ಕಳೆದ ಏಳು ದಿನಗಳಿಂದ ಸತ್ಯಮೇವ ಜಯತೇ ಶೋ ಬಗ್ಗೆ ಹುಡುಕಾಟ ನಿರಂತರವಾಗಿ ನಡೆದಿದೆ. ಕಾರ್ಯಕ್ರಮದ ಜನಪ್ರಿಯತೆಯಲ್ಲಿ ಮಧ್ಯಪ್ರದೇಶ ಮೊದಲ ಸ್ಥಾನದಲ್ಲಿದ್ದರೆ ರಾಜಸ್ಥಾನ ದ್ವಿತೀಯ ಹಾಗೂ ಗುಜರಾತ್ ತೃತೀಯ ಸ್ಥಾನದಲ್ಲಿದೆ ಎಂದು ಗೂಗಲ್ ಸಮೀಕ್ಷೆ ತಿಳಿಸಿದೆ. (ಒನ್ ಇಂಡಿಯಾ ಕನ್ನಡ)

English summary
According to the Google Search Report, Aamir Khan talk show Satyamev Jayate is more popular than Aamir Khan himself. People around the world are searching for Satyamev Jayate and liked very much this programme. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada