»   » ಅಮೀರ್ 'ಸತ್ಯಮೇವ ಜಯತೆ ಸೀಸನ್-2' ಬರಲಿದೆಯೇ?

ಅಮೀರ್ 'ಸತ್ಯಮೇವ ಜಯತೆ ಸೀಸನ್-2' ಬರಲಿದೆಯೇ?

Posted By:
Subscribe to Filmibeat Kannada
ಸ್ಟಾರ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಮೀರ್ ಖಾನ್ ಟಾಕ್ ಶೋ 'ಸತ್ಯಮೇವ ಜಯತೆ' ಸಾಕಷ್ಟು ಜನಪ್ರಿಯವಾಗಿದೆ. ಈ ವಿಷಯವನ್ನು ಅರಿತಿರುವ ಸತ್ಯಮೇವ ಜಯತೆ ತಂಡ ಪ್ರೇಕ್ಷಕರಿಗೆ ಕೃತಜ್ಞತೆ ಸಲ್ಲಿಸಿದೆ. ಅಷ್ಟೇ ಅಲ್ಲ, ಜನರ ಉತ್ತಮ ಪ್ರತಿಕ್ರಿಯೆಯಿಂದ ರೋಮಾಂಚನಗೊಂಡಿರುವ ಅಮೀರ್ ಖಾನ್ ಮತ್ತು ತಂಡ ಇದೀಗ 'ಸತ್ಯಮೇವ ಜಯತೆ ಭಾಗ-2' ರ ಸಿದ್ಧತೆಯಲ್ಲಿ ತೊಡಗಿದೆ.

ಮೊದಲ ಸೀಸನ್ ಮೂಲಕ ದೇಶಾದ್ಯಂತ ಸಾಕಷ್ಟು ಪ್ರೇಕ್ಷಕರನ್ನು ಈ ಶೋ ತಲುಪಿದೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಸೇರಿ ಬಹಳಷ್ಟು ಭಾಷೆಗಳಲ್ಲಿ ಪ್ರಸಾರವಾಗುತ್ತಿರುವ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಚರ್ಚೆಗೆ ವೇದಿಕೆಯಾಗಿದೆ. ಅಮೀರ್ ಖಾನ್ ಪ್ರಕಾಶಿಸುತ್ತಿದ್ದಾರೆ. ಸತ್ಯಮೇವ ಜಯತೆ ಮನೆಮನೆ ಮಾತಾಗಿದೆ.

ಈ ಮೊದಲು ಕೇವಲ 13 ಸಂಚಿಕೆ ಮಾಡಿ ಸತ್ಯಮೇವ ಜಯತೆ ಮುಗಿಸುವ ತಂಡದ ನಿರ್ಧಾರ ಈಗ ಬದಲಾಗಿದೆ. ಈಗಾಗಲೇ ಅರ್ಧಕ್ಕಿಂತ ಹೆಚ್ಚು ದಾರಿ ಕ್ರಮಿಸಿರುವ ಸತ್ಯಮೇವ ಜಯತೆ ತಂಡ, ಪ್ರೇಕ್ಷಕರು ಹಾಗೂ ಅಭಿಮಾನಿಗಳ ಅಮೋಘ ಪ್ರತಿಕ್ರಿಯೆಗೆ ದಂಗಾಗಿದೆ. ಹೀಗಾಗಿ 2 ನೇ ಆವೃತ್ತಿ ತರಲು ಸಿದ್ಧತೆಗೆ ತೊಡಗಿದೆ.

ಕೇವಲ 13 ಸಂಚಿಕೆಗಳನ್ನು ಮಾತ್ರ ನೋಡಿ ಅಮೀರ್ ಅಭಿಮಾನಿಗಳು ಸುಮ್ಮನಾಗಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಈ ಮೊದಲು ಅಮೀರ್ ಅಭಿಮಾನಿಗಳಲ್ಲದವರೂ ಕೂಡ ಈಗ ಸತ್ಯಮೇವ ಜಯತೇ ನೋಡಿ ಅವರ ಅಭಿಮಾನಿಗಳಾಗಿದ್ದಾರೆ. ಹೀಗಾಗಿ ಕೇವಲ 13 ಸಂಚಿಕೆಗೆ ಸತ್ಯಮೇವ ಜಯತೆ ಮುಗಿಸಲು ಅಮೀರ್ ಖಾನ್ ಅವರಿಗೆ ಸಾಧ್ಯವಾಗಲಿಕ್ಕಿಲ್ಲ. ಈ ವಿಷಯ ಸ್ವತಃ ಅಮೀರ್ ಅವರಿಗೂ ಮನವರಿಕೆಯಾಗಿದೆ.

ಈ ಕುರಿತು ರೇಡಿಯೋ 92.7 ಬಿಗ್ ಎಫ್ ಎಂ ನಲ್ಲಿ ಮಾತನಾಡಿರುವ ಅಮೀರ್ "ಕನಸಿನಲ್ಲೂ ಕಾಣದ ಅತ್ಯುತ್ತಮ ಪ್ರತಿಕ್ರಿಯೆಯನ್ನು ನಾವು ಈ ಶೋಗೆ ಜನರಿಂದ ಪಡೆದಿದ್ದೇವೆ. ಈ ಶೋ ದೇಶಾದ್ಯಂತ ಸಾಕಷ್ಟು ಎಚ್ಚರಿಕೆಯ ಸಂದೇಶ ಹಾಗೂ ಜನಜಾಗೃತಿ ಮೂಡಿಸಿದೆ. ನಾವು ಆ ಗುಂಗಿನಿಂದ ಸದ್ಯಕ್ಕೆ ಹೊರಬರುವುದೇ ದುಸ್ತರವಾಗಿದೆ. ಖಂಡಿತ ಈ ಶೋದ 2ನೇ ಆವೃತ್ತಿಯನ್ನು ಮಾಡುವ ಬಗ್ಗೆ ಯೋಚಸಲಿದ್ದೇವೆ" ಎಂದಿದ್ದಾರೆ.

ಸದ್ಯಕ್ಕೆ ಅಮೀರ್ ಖಾನ್, 'ಧೂಮ್- 3' ಮತ್ತು ರಾಜ್ ಕುಮಾರ್ ಹಿರಾನಿಯವರ 'ಪಿಕೆ' ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಅದನ್ನು ಮುಗಿಸಿ ನಂತರ ಸೆಪ್ಟೆಂಬರ್ ತಿಂಗಳಲ್ಲಿ 'ಸತ್ಯಮೇವ ಜಯತೇ ಭಾಗ- 2' ವನ್ನು ಕಿರುತೆರೆಯ ಮೇಲೆ ತರಲು ಯೋಜಿಸಿದ್ದಾರೆ. ಒಟ್ಟಿನಲ್ಲಿ ಅಮೀರ್ ಖಾನ್ ಸತ್ಯಮೇವ ಜಯತೆ, ಬಹಳಷ್ಟು ಜನರು ಮೊದಲೇ ಅಭಿಪ್ರಾಯಪಟ್ಟಂತೆ ಸೂಪರ್ ಹಿಟ್ ಎನಿಸಿದೆ. (ಏಜೆನ್ಸೀಸ್)

English summary
Aamir Khan recently declared that thanks to the awesome response that Satyamev Jayate has generated, the team will decide on the second season of the show.
 
Please Wait while comments are loading...