»   » ಟಿವಿ ಮಾತ್ರವಲ್ಲ, ರೇಡಿಯೋದಲ್ಲೂ ಅಮೀರ್ ಅಲೆ

ಟಿವಿ ಮಾತ್ರವಲ್ಲ, ರೇಡಿಯೋದಲ್ಲೂ ಅಮೀರ್ ಅಲೆ

Posted By:
Subscribe to Filmibeat Kannada
ಸತ್ಯಮೇವ ಜಯತೇ ಟಾಕ್ ಶೋ ಮೂಲಕ ರಾಷ್ಟ್ರದಾದ್ಯಂತ ತಮ್ಮ ಅಲೆ ಸೃಷ್ಟಿಸಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರೀಗ ರೇಡಿಯೋ ಮೂಲಕ ಮಿಲಿಯನ್ ಗೂ ಮೀರಿ ಜನರನ್ನು ತಲುಪುವ ಪ್ರಯತ್ನ ಮಾಡಿದ್ದಾರೆ. ಸದ್ಯದಲ್ಲೇ ಅಮೀರ್, ರೇಡಿಯೋದಲ್ಲಿ 'ದಿಲ್ ಪೇ ಲಗಿ ಔರ್ ಬಾತ್ ಬನಿ (Dil Pe Lagi Aur Baat Bani) ಎಂಬ ವಿನೂತನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಅಮೀರ್ ನಡೆಸಿಕೊಡಲಿರುವ ಈ ಕಾರ್ಯಕ್ರಮ ಮೇ 12, 2012 ರಿಂದ ಪ್ರಾರಂಭವಾಗಲಿದೆ. ಪ್ರತಿ ಶನಿವಾರ ಬೆಳಿಗ್ಗೆ 11 ಗಂಟೆಗೆ ಆಲ್ ಇಂಡಿಯಾ ರೇಡಿಯೋ ಮೂಲಕ ಇದು, ಮಧ್ಯಪ್ರದೇಶ, ಬಿಹಾರ್, ಜಾರ್ಖಂಡ್, ಛತ್ತೀಸ್ ಗಢ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ತಾನ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಪ್ರಸಾರವಾಗಲಿದೆ. ಅಷ್ಟೇ ಅಲ್ಲ, ವಿವಿಧ ಭಾರತಿ ಬಾನುಲಿ ಕೇಂದ್ರದ ಮೂಲಕ ಪ್ರತಿ ಶನಿವಾರ ಮಧ್ಯಾನ್ಹ 3 ಗಂಟೆಗೂ ಇದನ್ನು ದೇಶಾದ್ಯಂತ ಕೇಳಬಹುದು.

"ಲೇಟೇಸ್ಟ್ ಸುದ್ದಿಗಳ ಬಗ್ಗೆ ಜನರ ಅಭಿಪ್ರಾಯ, ಪ್ರತಿಕ್ರಿಯೆ ಹಾಗೂ ವಿಚಾರಧಾರೆಗಳ ಬಗ್ಗೆ ನನಗೆ ತೀವ್ರ ಕುತೂಹಲವಿದೆ. ಅದಕ್ಕಾಗಿ ಆಕಾಶವಾಣಿ ಮೊರೆ ಹೋಗಿದ್ದೇನೆ" ಎಂಬುದು ಅಮೀರ್ ಮಾತು. ಆದರೆ ಈ ಮೂಲಕ ಅಮೀರ್, ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ತಮ್ಮ ಕಾರ್ಯಕ್ರಮ ಸತ್ಯಮೇವ ಜಯತೇ ಬಗ್ಗೆ ಜನರ ಪ್ರತಿಕ್ರಿಯೆ ಕಂಡುಕೊಳ್ಳಲಿದ್ದಾರೆ ಎಂಬುದಂತೂ ಸತ್ಯ.

ಅಮೀರ್ ಆಕಾಶವಾಣಿ ಪ್ರವೇಶ ಸತ್ಯಮೇವ ಜಯತೆ ಪ್ರಚಾರಕಾರ್ಯದ ಒಂದು ಭಾಗವೂ ಹೌದು ಎನ್ನಬಹುದು. ಒಟ್ಟಿನಲ್ಲಿ ಬಾಲಿವುಡ್ ಸಿನಿಮಾಗಳ ಮೂಲಕ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿದ ಅಮೀರ್, ಟಿವಿ ಹಾಗೂ ರೇಡಿಯೋ ಮೂಲಕ ಭಾರತದ ಮೂಲೆಮೂಲೆಗೂ ತಲುಪುವ ಟಾರ್ಗೆಟ್ ಹೊಂದಿದ್ದಾರೆ. ಬಹುಶಃ ಸದ್ಯದಲ್ಲೇ ಭಾರತೀಯರೆಲ್ಲರ ಬಾಯಲ್ಲಿ 'ಸತ್ಯಮೇವ' ಹಾಗೂ 'ಜಯತೇ' ಎಂಬ ಎರಡೇ ಎರಡು ಶಬ್ದ ಮಾತ್ರ ಬಂದರೆ ಆಶ್ಚರ್ಯವೇನೂ ಇಲ್ಲ. (ಒನ್ ಇಂಡಿಯಾ ಕನ್ನಡ)

English summary
After creating a national hysteria with his debut show Satyamev Jayate, Aamir Khan is all set to connect with millions of listeners through radio.
Please Wait while comments are loading...