»   » ಕಾಶೀನಾಥ್ ಅವರು ತಮ್ಮ ವಯಸ್ಸು ಹೇಳೋದಿಲ್ಲ ಯಾಕೆ?

ಕಾಶೀನಾಥ್ ಅವರು ತಮ್ಮ ವಯಸ್ಸು ಹೇಳೋದಿಲ್ಲ ಯಾಕೆ?

Posted By:
Subscribe to Filmibeat Kannada

''ಹೆಣ್ಮಕ್ಕಳ ವಯಸ್ಸು ಕೇಳ ಬಾರದು, ಗಂಡು ಮಕ್ಕಳ ಸಂಬಳ ಕೇಳ ಬಾರದು'' ಅಂತಾರೆ. ಆದ್ರೆ, ಕಾಶೀನಾಥ್ ಅವರ ವಿಚಾರದಲ್ಲಿ ಇದು ಉಲ್ಟಾ ಆಗಿದೆ. ಯಾಕಂದ್ರೆ, ಕಾಶೀನಾಥ್ ಅವರ ವಯಸ್ಸು ಎಲ್ಲೂ ಹೇಳಲ್ಲ, ಹೇಳೋದಿಲ್ವಂತೆ.

ಹೌದು, ಇದು ಗೊತ್ತಾಗಿದ್ದೇ ಜೀ ಕನ್ನಡದಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ. ಸಾಧಕರ ಪರಿಚಯ ಮಾಡಿಕೊಡುವ ರಮೇಶ್ ಅವರು, ಹುಟ್ಟಿದ ಸ್ಥಳ, ದಿನಾಂಕ, ತಂದೆ-ತಾಯಿಯ ಪರಿಚಯದ ಮೂಲಕ ಪ್ರತಿಯೊಬ್ಬ ಸಾಧಕರ ಜರ್ನಿ ಶುರು ಮಾಡುತ್ತಾರೆ. ಆದ್ರೆ, ಕಾಶೀನಾಥ್ ಅವರ ಹುಟ್ಟಿದ ದಿನಾಂಕವನ್ನ ರಮೇಶ್ ಅವರು ಕೂಡ ಹೇಳಲಿಲ್ಲ. ಯಾಕೆ ಅಂದ್ರೆ ಅದು ಕಾಶೀನಾಥ್ ಅವರಿಗೆ ಇಷ್ಟ ಇಲ್ಲವಂತೆ.

Actor Kashinath Does Not Celebrates His Birthday

ಅಂದ್ಹಾಗೆ, ಕಾಶೀನಾಥ್ ಅವರು ಹುಟ್ಟುಹಬ್ಬವನ್ನೇ ಆಚರಿಸಿಕೊಳ್ಳುವುದಿಲ್ಲವಂತೆ. ಹೀಗಾಗಿ, ವಯಸ್ಸಿನ ಬಗ್ಗೆ ಚಿಂತಿಸಬಾರದು ಎನ್ನುತ್ತಾರೆ. ಯಾಕೆ ಎಂದು ಕೇಳಿದರೇ '' ಹುಟ್ಟುಹಬ್ಬ ಆಚರಿಸಿಕೊಂಡರೇ ಒಂದು ವರ್ಷ ಆಯಸ್ಸು ಕಮ್ಮಿಯಾಗುತ್ತೆ ನೀವು ಖುಷಿ ಪಡ್ತಿರಾ? ಅಥವಾ ವಯಸ್ಸು ಜಾಸ್ತಿ ಆಯ್ತು ಅಂತ ಖುಷಿ ಪಡ್ತಿರಾ....? ಇಲ್ಲ ಅಲ್ವಾ...! ಮತ್ಯಾಕೆ ಬರ್ತ್ ಡೇ.....ಎಂದು ಕೊನೆಗೂ ವಯಸ್ಸು ಹೇಳಿಲ್ಲ, ಹುಟ್ಟಿದ ದಿನಾಂಕವನ್ನ ಹೇಳಿಲ್ಲ.

ಅಂದ್ಹಾಗೆ, ಕಾಶೀನಾಥ್ ಅವರು ಹುಟ್ಟಿದ್ದು ಕುಂದಾಪುರದಲ್ಲಿ, ಇವರ ತಂದೆ ಜಿ.ವಾಸುದೇವ್ ರಾವ್, ತಾಯಿ ಸರಸ್ವತಿ. ಒಬ್ಬ ಅಣ್ಣ ಸತ್ಯನಾರಾಯಣ, ಮತ್ತು ಮೂವರು ತಮ್ಮಂದಿರು ದತ್ತಾತ್ರೇಯ, ರವಿ ಮತ್ತು ಉಮಾಪತಿ ಹಾಗೂ ಒಬ್ಬ ತಂಗಿ ಗಾಯಿತ್ರಿ. ಚಂದ್ರ ಪ್ರಭ ಅವರೊಂದಿಗೆ ಸಪ್ತಪದಿ ತುಳಿದಿದ್ದು, ಅಭಿಮನ್ಯು ಮತ್ತು ಅಮೃತ ವರ್ಷಿಣಿ ಇಬ್ಬರು ಮಕ್ಕಳಿದ್ದಾರೆ....

English summary
Kannada Actor and Director Kashinath Does Not Celebrates His Birthday. Why?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada