»   » ಪ್ರಕಾಶ್ ರೈ 'ಬಿರಿಯಾನಿ' ಕಥೆ ಕೇಳಿದ್ರೆ, ಯಪ್ಪಾ ಸ್ವಾಮಿ ಅಂತೀರಾ!

ಪ್ರಕಾಶ್ ರೈ 'ಬಿರಿಯಾನಿ' ಕಥೆ ಕೇಳಿದ್ರೆ, ಯಪ್ಪಾ ಸ್ವಾಮಿ ಅಂತೀರಾ!

Posted By:
Subscribe to Filmibeat Kannada

ನಟ ಪ್ರಕಾಶ್ ರೈ ಅಚ್ಚು ಮೆಚ್ಚಿನ ಅಡುಗೆ ಯಾವುದು ಅಂದ್ರೆ 'ಬಿರಿಯಾನಿ' ಅಂತೆ. ಆದ್ರೆ, ಈ ಬಿರಿಯಾನಿಗಾಗಿ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ದಾರೆ. ಬಿರಿಯಾನಿ ತಿನ್ನೋದಕ್ಕಾಗಿ ಸಖತ್ ಸರ್ಕಸ್ ಕೂಡ ಮಾಡಿದ್ದಾರಂತೆ. ಈ ಕಥೆಗಳು ತುಂಬಾ ಇಂಟ್ರೆಸ್ಟಿಂಗ್ ಆಗಿದೆ.

ಬಹುನಿರೀಕ್ಷಿತ 'ವೀಕೆಂಡ್' ಆರಂಭ: ಮೊದಲ ಅತಿಥಿ ಬಹಿರಂಗ.!

ಹೌದು, 'ವೀಕೆಂಡ್ ವಿತ್ ರಮೇಶ್ ಸೀಸನ್-3' ರಲ್ಲಿ ಮೊದಲ ಅತಿಥಿಯಾಗಿ ಆಗಮಿಸಿರುವ ಪ್ರಕಾಶ್ ರೈ ಅವರು ತಮ್ಮ ನೆಚ್ಚಿನ 'ಬಿರಿಯಾನಿ' ಬಗ್ಗೆ ಕೆಲವು ಕಥೆಗಳನ್ನ ಬಿಚ್ಚಿಟ್ಟಿದ್ದಾರೆ.

ಪ್ರಕಾಶ್ ರೈಗೆ ಬಿರಿಯಾನಿ ಅಂದ್ರೆ ಇಷ್ಟ!

ಬಹುಭಾಷಾ ನಟ ಪ್ರಕಾಶ್ ರೈಗೆ ಬಿರಿಯಾನಿ ಅಂದ್ರೆ ತುಂಬಾ ಇಷ್ಟವಂತೆ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಬಿರಿಯಾನಿಗಾಗಿ ಪತ್ನಿ ಬಳಿ ಜಗಳ ಕೂಡ ಆಡುವಷ್ಟು ಇಷ್ಟವಂತೆ.['ವೀಕೆಂಡ್ ವಿತ್ ರಮೇಶ್-3' ಮೊಟ್ಟಮೊದಲ ಅತಿಥಿ ಯಾರು?]

ಕುರಿ/ಮೇಕೆ ಕಂಡ್ರೆ ಕಾರ್ ನಿಲ್ಲಿಸುತ್ತಿದ್ದರಂತೆ

ರಸ್ತೆಯಲ್ಲಿ ಹೋಗುವಾಗ ಮಾರ್ಗ ಮಧ್ಯೆ ತಮ್ಮ ಕಾರಿಗೆ ಯಾವುದಾದರೂ ಕುರಿ ಅಥವಾ ಮೇಕೆ ಅಡ್ಡ ಬಂದ್ರೆ ಕಾರ್ ನ ನಿಲ್ಲಿಸುತ್ತಿದ್ದರಂತೆ. ಆಮೇಲೆ ಕುರಿಗೆ ಬುದ್ಧಿವಾದ ಹೇಳುತ್ತಿದ್ದರಂತೆ. ''ಎಲೈ ಮೇಕೆ, ಯಾಕೆ ಬಿಸಿಲಿನಲ್ಲಿದ್ದಿಯಾ? ಇಲ್ಲಿ ಬಾ...ಮರದ ನೆರಳ ಕೆಳಗೆ ಹೋಗು, ತಂಪಾಗಿ ತಿನ್ನು, ಒಳ್ಳೆಯ ಕನಸುಗಳನ್ನ ಕಾಣು....ನಾಳೆ ರಂಜಾನ್'' ಎನ್ನುತ್ತಿದ್ದರಂತೆ....

'ಬಿರಿಯಾನಿ'ಗಾಗಿ ಪತ್ನಿ ಹಾಕಿದ್ರಂತೆ ಚಾಲೆಂಜ್!

ಪ್ರಕಾಶ್ ರೈ ಅವರ ಸ್ನೇಹಿತರೊಬ್ಬರು ಚೆನ್ನೈನಲ್ಲಿ ಗರ್ಲ್ ಫ್ರೆಂಡ್ ಇಟ್ಕೊಂಡಿದ್ದರಂತೆ. ಅವರು ಬಿರಿಯಾನಿಯನ್ನ ಸಖತ್ ಆಗಿ ಮಾಡುತ್ತಿದ್ದರಂತೆ. ಅವರು ತಯಾರಿಸಿದ್ದ ಬಿರಿಯಾನಿ ತಿಂದು, ನೇರವಾಗಿ ತಮ್ಮ ಪತ್ನಿಯ ಬಳಿ ''ತಿಂಗಳು ಟೈಮ್ ಕೊಡ್ತಿನಿ, ಬಿರಿಯಾನಿ ಮಾಡುವುದು ಕಲಿತುಕೋ, ಇಲ್ಲ ಅಂದ್ರೆ, ನಮ್ಮ ಫ್ರೆಂಡ್ ಅವರ ಗರ್ಲ್ ಫ್ರೆಂಡ್ ನ ಬಿರಿಯಾನಿಗಾಗಿ ಇಟ್ಕೊಂಡು ಬಿಡ್ತಿನಿ ಎಂದರಂತೆ. ಆಮೇಲೆ ಒಂದೇ ತಿಂಗಳಲ್ಲಿ ಬಿರಿಯಾನಿ ಕಲಿತರು.

ಪ್ರೊಮೋ ನೋಡಿ

'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಪ್ರಕಾಶ್ ರೈ ಭಾಗವಹಿಸಿರುವ ಪ್ರೊಮೋ ಔಟ್ ಅಗಿದೆ. ಈ ಪ್ರೋಮೋದಲ್ಲಿ ಪ್ರಕಾಶ್ ರೈ ಅವರು ಬಿರಿಯಾನಿ ಕಥೆ ಹೇಳಿದ್ದು ನೋಡಲು ಈ ಲಿಂಕ್ ಕ್ಲಿಕ್ ಮಾಡಿ...

ಈ 'ವೀಕೆಂಡ್' ಮಿಸ್ ಮಾಡ್ಬೇಡಿ...

ಮಾರ್ಚ್ 25 ಹಾಗೂ 26 ರಾತ್ರಿ 9ಕ್ಕೆ ಪ್ರಕಾಶ್ ರೈ ರವರ ಸಾಧನೆ 'ವೀಕೆಂಡ್ ವಿತ್ ರಮೇಶ್-3' ಶೋನಲ್ಲಿ... ತಪ್ಪದೇ ವೀಕ್ಷಿಸಿ...

English summary
Actor Prakash Rai Reveals Secrete behind his favourite food biryani in Weekend With Ramesh Season-3.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada