»   » ಮೆಜೆಸ್ಟಿಕ್ ಬಸ್ಟಾಂಡ್ ನಲ್ಲಿ ರಾತ್ರಿ ಕಳೆದಿದ್ದ ನಟ ಯಶ್

ಮೆಜೆಸ್ಟಿಕ್ ಬಸ್ಟಾಂಡ್ ನಲ್ಲಿ ರಾತ್ರಿ ಕಳೆದಿದ್ದ ನಟ ಯಶ್

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್ ಕುರಿತ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಹೊಸತೊಂದು ಅನುಭವ ಕೊಟ್ಟಿದೆ. ಬಹಳ ಚಿಕ್ಕ ವಯಸ್ಸಿಗೆ ಯಶ್ ಏರಿದ ಎತ್ತರ ನಿನಕ್ಕೂ ಪ್ರಶಂಸನೀಯ. ರಮೇಶ್ ಅರವಿಂದ್ ಅವರ ನಿರೂಪಣೆ ಶೈಲಿಯೂ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಎರಡನೇ ಕಂತಿನಲ್ಲಿ ಯಶ್ ಅವರ ಜೀವನ ಸಾಧನೆಗಳ ಮತ್ತಷ್ಟು ವಿವರಗಳು ಅನಾವರಣಗೊಂಡವು. ಇಂಟರ್ ವಲ್ ತನಕ ಏನು ನಡೀತು ಎಂಬುದನ್ನು ಈಗಾಗಲೆ ಓದಿದ್ದೀರಾ. ಈಗ ಪೋಸ್ಟ್ ಇಂಟವರ್ ನಲ್ಲಿ ಏನೆಲ್ಲಾ ಸಂಗತಿಗಳು ಇದ್ದವು ಎಂಬುದನ್ನು ನೋಡೋಣ ಬನ್ನಿ. [ಬಿಎಂಟಿಸಿ ಡ್ರೈವರ್ ಮಗ ರಾಕಿಂಗ್ ಸ್ಟಾರ್ ಯಶೋಗಾಥೆ]

ನವೀನ್ ಗೌಡ ಹೇಗೆ ಯಶ್ ಆದರು. ಬಳಿಕ ಅವರು ಚಿತ್ರರಂಗದಲ್ಲಿ ನೆಲೆನಿಂತದ್ದು ಹೇಗೆ? ಮೆಜೆಸ್ಟಿಕ್ ಬಸ್ ಸ್ಟಾಂಡ್ ನಲ್ಲಿ ಕಳೆದ ಒಂದು ರಾತ್ರಿ ಅವರ ಬದುಕನ್ನೇ ಬದಲಾಯಿಸಿತು. ನಟಿ ರಾಧಿಕಾ ಪಂಡಿತ್ ಜೊತೆಗಿನ ಅವರ ಒಡನಾಡ ಹೀಗೆ ಎಲ್ಲಾ ವಿವರಗಳು ಸ್ಲೈಡ್ ನಲ್ಲಿವೆ ನೋಡಿ.

ಪಿಯುಸಿಗೆ ವಿದ್ಯಾಭ್ಯಾಸ ನಿಲ್ಲಿಸಿದ ಯಶ್

ನನ್ನಲ್ಲಿ ಒಂದು ಕನಸ್ಸಿತ್ತು, ಅವಶ್ಯಕತೆ ಇತ್ತು. ಹಾಗಾಗಿ ಪಿಯುಸಿಗೆ ವಿದ್ಯಾಭ್ಯಾಸ ನಿಲ್ಲಿಸಿಬಿಟ್ಟೆ. ಸಿನಿಮಾದಲ್ಲಿ ಆಕ್ಟ್ ಮಾಡಬೇಕು ಎಂಬುದು ನನ್ನ ಕನಸು. ಹೀರೋ ಆಗ್ಬೇಕು ಎಂದುಕೊಂಡು ಬಂದೆ. ನನ್ನ ಅದೃಷ್ಟ ಏನೆಂದರೆ ಸಿನಿಮಾಗೆ ಬದಲಾಗಿ ರಂಗಭೂಮಿಗೆ ಬಂದೆ. ನನ್ನ ಗೆಳೆಯ ಅವರು ನನ್ನನ್ನು ನಾಟಕಗಳಿಗೆ ಪರಿಚಯಿಸಿದರು.

ರಂಗಭೂಮಿ ಎಂದರೆ ಏನು ಎಂದು ಗೊತ್ತಿರಲಿಲ್ಲ

ಮೈಸೂರಿನ ಮನೆ ಪಕ್ಕದಲ್ಲೇ ರಂಗಾಯಣ ಇದ್ದರೂ ಒಮ್ಮೆಯೂ ಅತ್ತ ತಲೆ ಹಾಕಿರಲಿಲ್ಲ. ಸಾಮಾನ್ಯವಾಗಿ ರಂಗಭೂಮಿ ಎಂದರೆ ಗದೆ ಇಟ್ಟುಕೊಂಡು ನಾಟಕ ಮಾಡುವುದು ಎಂದಷ್ಟೇ ಗೊತ್ತಿತ್ತು. ಆದರೆ ನಂಜುಂಡನ ಮೂಲಕ ನಾಟಕ ಎಂದರೆ ಏನು ಎಂಬುದು ಗೊತ್ತಾಯಿತು.

ಅಣ್ಣಾವ್ರನ್ನು ಹತ್ತಿರದಿಂದ ಕಂಡಾಗ ಪುಳಕಿನಾಗಿದ್ದೆ

ಟಿ.ಎಸ್.ನಾಗಾಭರಣ ಅವರ 'ಬೆನಕ' ನಾಟಕ ತಂಡ ಸೇರಿದ ಮೇಲೆ ಗೊತ್ತಾಯಿತು ರಂಗಭೂಮಿಗೆ ಅಂದರೆ ಏನು ಎಂಬುದು. ಅದು ನನ್ನನ್ನು ಸಂಪೂರ್ಣ ಪರಿವರ್ತನೆ ಮಾಡಿತು. ಒಮ್ಮೆ ಅಣ್ಣಾವ್ರನ್ನು ಹತ್ತಿರದಿಂದ ಕಂಡಾಗ ಆಗ ನನಗೆ ಇನ್ನೂ ಹದಿನೇಳರ ಪ್ರಾಯ. ನಾಗಾಭರಣ ಅವರ ಮಗಳ ಮದುವೆಗೆ ಅವರು ಬಂದಿದ್ದರು. ಅಲ್ಲೇ ಮಾತನಾಡುತ್ತಿದ್ದ ನನಗೆ ಅವರನ್ನು ಹತ್ತಿರದಿಂದ ಕಂಡು ಕ್ಷಣಕಾಲ ಮಾತೇ ಬರದಂತಾಗಿತ್ತು.

ನಾಗಾಭರಣರಿಗೆ ಲಾಠಿ ಏಟು ಕೊಟ್ಟಿದ್ದ ಯಶ್

ನಾಗಾಭರಣ ಅವರ ಸಿಂಪ್ಲಿಸಿಟಿ ಬಗ್ಗೆ ಯಶ್ ನೆನಪಿಸಿಕೊಂಡರು. ರಂಗಭೂಮಿಯಲ್ಲಿ 'ತಬರನ ಕಥೆ'ಯಲ್ಲಿ ಯಶ್ ಪೊಲೀಸ್ ಪಾತ್ರ ಮಾಡಿದ್ದು. ಆಗ ನಾನು ತಬರನಾಗಿದ್ದೆ. ಲಾಠಿಯಲ್ಲಿ ನಿಜವಾಗಿ ನನಗೆ ಎರಡು ಏಟು ಹೊಡೆದಿದ್ದ ಎಂದು ನಾಗಾಭರಣ ನೆನಪಿಸಿಕೊಂಡರು.

ಹೋಟೆಲ್ ನಲ್ಲಿ ಕೊಡಕ್ಕೆ ದುಡ್ಡಿರಲಿಲ್ಲ

ಈ ಹೊತ್ತು ನಾನು ಏನೇ ಆದರೂ ರಂಗಭೂಮಿಯೇ ಅದಕ್ಕೆ ಕಾರಣ ಎಂದರು. ಆ ದಿನಗಳಲ್ಲಿ ಹೋಟೆಲ್ ನಲ್ಲಿ ದುಡ್ಡುಲ್ಲದಾಗ ಏನು ಬೇಕೋ ಅದನ್ನು ತಿಂದು ಬರುತ್ತಿದ್ದೆವು. ದುಡ್ಡು ಕೇಳಿದಾಗ ಸ್ಟಾರ್ ಆದ ಮೇಲೆ ಕೊಡ್ತೀನಿ ಎಂದು ಹೇಳುತ್ತಿದ್ದೆವು. ಸ್ಟಾರ್ ಆದ ಮೇಲೆ ಹಳೆ ಬಾಕಿ ತೆಗೆದುಕೊಳ್ಳಿ ಎಂದು ಸಾವಿರ ರೂಪಾಯಿ ಕೊಟ್ಟಿದ್ದೇನೆ. ಅವರು ಮಿಕಮಿಕ ಎಂದು ಮುಖ ನೋಡುತ್ತಿದ್ದರು. ಯಾವ ಬಾಕಿ ಎಂಬುದು ಅವರಿಗೆ ಅರ್ಥವಾಗುತ್ತಿರಲಿಲ್ಲ ಎಂದರು ಯಶ್.

ನ್ಯಾಶನಲ್ ಕಾಲೇಜು ಮೈದಾನದಲ್ಲಿ ಮಲಗುತ್ತಿದ್ದ

ಎಷ್ಟೋ ದಿನ ಊಟಕ್ಕೆ ಇಲ್ಲದಂತಹ ಪರಿಸ್ಥಿತಿ ಇತ್ತು. ಕಳ್ಳೆಪುರಿ ಮತ್ತು ನೀರು ಕುಡಿದುಕೊಂಡು ಇದ್ದ. ನ್ಯಾಶನಲ್ ಕಾಲೇಜು ಮೈದಾನದಲ್ಲೇ ಮಲಗಿ, ಬೆಳಗ್ಗೆ ಎದ್ದು ಯಾವುದೋ ಟಾಯ್ ಲೆಟ್ ಗೆ ಹೋಗುತ್ತಿದ್ದನ್ನು ನಾನು ಕಣ್ಣಾರೆ ನೋಡಿದ್ದೀನಿ ಎಂದು ಹೇಳಿದರು ಅವರ ಗೆಳೆಯ ಮತ್ತು ನಟ ನಂಜುಂಡ. ಯಶ್ ಬಹಳ ಸಂಕೋಚ ಸ್ವಭಾವದವ. ತನ್ನ ಕಷ್ಟಗಳನ್ನು ಯಾರ ಬಳಿಯೂ ಹೇಳಿಕೊಳ್ಳುತ್ತಿರಲಿಲ್ಲ ಎಂದರು.

ಅಸೋಸಿಯೇಟ್ ಡೈರೆಕ್ಟರ್ ಆಗಿದ್ದು

'ಸ್ಟಾಪ್' ಎಂಬ ಸಿನಿಮಾದಲ್ಲಿ ಮೋಹನ್ ಬಳಿ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದು, ಆ ಸಿನಿಮಾ ಸ್ಟಾಪ್ ಆಗಿದ್ದು. ರಾತ್ರೋ ರಾತ್ರಿ ಆ ಚಿತ್ರ ಸ್ಟಾಪ್ ಆಗೋಯ್ತು. ಆಗ ರಾತ್ರಿ ನನ್ನ ಲಗೇಜ್ ಇಡಬೇಕಾಗಿತ್ತು, ನೆಂಟರೊಬ್ಬರ ಮನೆಗೆ ಕರೆ ಮಾಡಿದೆ. ಲಗೇಜ್ ಇಡಬಹುದಾ, ಉಳಿದುಕೊಳ್ಳಲು ಅಲ್ಲ ಎಂದು ಕೇಳಿದಾಗ ಅವರು ಇಲ್ಲ ಊರಿಗೆ ಹೋಗ್ತಾ ಇದ್ದೀನಿ ಎಂದರು.

ಆ ರಾತ್ರಿಯಲ್ಲಾ ಮೆಜೆಸ್ಟಿಕ್ ನಲ್ಲಿ ಕಳೆದೆ

ಮನಸ್ಸಿಗೆ ತುಂಬಾ ಬೇಜಾರ್ ಆಯ್ತು. ಆಗ ಮೋಹನ್ ಏನಾಯ್ತು ಎಂದು ಕೇಳಿದಾಗ ಏನಿಲ್ಲ ಎಂದೆ. ನಮ್ಮ ಮನೆಗೆ ಬನ್ನಿ ಎಂದು ಕರೆದರು. ಅವರ ಮನೆಯಲ್ಲಿ ಇಬ್ಬರು ಉಳಿದುಕೊಳ್ಳಲಷ್ಟೇ ಜಾಗ ಇತ್ತು. ಇವರು ಮತ್ತು ಅವರ ತಾಯಿ ಇದ್ದರು. ಆಗ ನಾನು ಸ್ವಲ್ಪ ಬರ್ತೀನಿ ಇರಿ ಎಂದು ಹೇಳಿ ಆ ರಾತ್ರಿ ನಾನು ಮೆಜೆಸ್ಟಿಕ್ ನಲ್ಲಿ ಮಲಗಿದೆ.

ಆ ಒಂದು ರಾತ್ರಿ ಇಡೀ ಜಗತ್ತು ನೋಡಿದೆ

ಆ ರಾತ್ರಿ ಮೆಜೆಸ್ಟಿಕ್ ನ ಮೈಸೂರು ಬಸ್ ನಿಲ್ದಾಣದಲ್ಲಿ ಇಡೀ ಪ್ರಪಂಚ ನೋಡಿದೆ. ಒಂದು ಕಡೆ ಯಾರೀ ಮೈಸೂರು ಮೈಸೂರು ಎಂದು ಕೂಗುವವರು. ಇನ್ನೊಂದು ಕಡೆ ಗಾಂಧಿನಗರ. ಸರಿ ಎಲ್ಲೂ ಹೋಗದೆ ರಾತ್ರಿ ಅಲ್ಲೇ ಕಳೆದೆ. ಒಂದು ಕಡೆ ಭಿಕ್ಷುಕರು, ವೇಶ್ಯೆಯರು, ಎಲ್ಲ ತರಹದ ಜನ ಅಲ್ಲಿಗೆ ಬರುತ್ತಿದ್ದರು. ಪೊಲೀಸರು ಬಂದು ಮಲಗಿದವರಿಗೆ ಲಾಠಿ ಏಟು ಕೊಡುತ್ತಿದ್ದರು. ಅವರ ಮಧ್ಯೆ ನಾನೂ ಒಬ್ಬ ಬದುಕಬೇಕು ಎಂಬ ಕನಸು ಇತ್ತು.

ಅಮ್ಮನಿಗೆ ಇಷ್ಟು ದಿನ ಈ ವಿಷಯ ಹೇಳಿರಲಿಲ್ಲ

ಇದನ್ನು ಕೇಳುತ್ತಿದ್ದ ಅವರ ತಾಯಿಯ ಕಣ್ಣಲ್ಲಿ ಧಾರಾಕಾರ ಕಣ್ಣೀರು ಹರಿಯುತ್ತಿತ್ತು. ಇದನ್ನೆಲ್ಲಾ ಅವನು ನಮ್ಮ ಬಳಿ ಒಮ್ಮೆಯೂ ಹೇಳಿಲ್ಲ ನೋಡಿ ಎಂದರು.

ಒಬ್ಬ ವ್ಯಕ್ತಿ ಒಂದು ಕೆಲಸ ಮಾಡ್ತೀನಿ ಎಂದು ಹೊರಟರೆ ಅವರ ಬೆನ್ನಿಗೆ ಇಡೀ ಜಗತ್ತೇ ನಿಲ್ಲುತ್ತದೆ ಎಂದರು ಯಶ್. ಈಗ ಮೋಹನ್ ಅವರು 'ಬಾಂಬೆ ಮಿಠಾಯಿ' ಎಂಬ ಚಿತ್ರ ಮಾಡುತ್ತಿದ್ದಾರೆ ಒಳ್ಳೆಯದಾಗಲಿ ಎಂದರು.

ಮನೆಮಂದಿಯಲ್ಲಾ ನೋಡುವಂತಹ ಸಿನಿಮಾಗಳು

ಈ ಹೊತ್ತಿಗೂ ಅಷ್ಟೇ ನನ್ನ ಚಿತ್ರಗಳಲ್ಲಿ ಮುಜುಗರಕ್ಕೆ ಈಡಾಗುವ ಸನ್ನಿವೇಶಗಳು ಇರಲ್ಲ. ಯಾಕೆಂದರೆ ನಾನೂ ಅಪ್ಪ ಅಮ್ಮನ ಜೊತೆ ಕೂತು ಸಿನಿಮಾಗಳನ್ನು ನೋಡ್ತೀನಿ. ಮನೆಮಂದಿಯಲ್ಲಾ ನೋಡುವಂತಹ ಸನ್ನಿವೇಶಗಳಲ್ಲಿ ಮಾತ್ರ ತಾವು ಅಭಿನಯಿಸುತ್ತೇವೆ ಎಂದು ಹೇಳಿದರು.

ಹೊಸ ತಿರುವು ನೀಡಿದ ಚಿತ್ರ 'ಮೊಗ್ಗಿನ ಮನಸು'

ಧಾರಾವಾಹಿಯಲ್ಲಿ ನನ್ನನ್ನು ನೋಡಿದ ಶಶಾಂಕ್, ಇ ಕೃಷ್ಣಪ್ಪರಂತಹ ಮಹನೀಯರು ನಿಜವಾದ ಅಭಿನಯ ಗೊತ್ತಿರುವಂತಹನಿಗೆ ಅವಕಾಶ ಕೊಡಬೇಕು ಎಂದು ಕೊಟ್ಟಂತಹ ಚಾನ್ಸ್ ಅದು 'ಮೊಗ್ಗಿನ ಮನಸ್ಸು'. ಅಲ್ಲಿಂದ ತಮ್ಮ ಸಿನಿ ಪಯಣ ಹೊಸ ತಿರುವು ಪಡೆಯಿತು ಎಂದು ಹೇಳಿದರು ಯಶ್.

ರಾಧಿಕಾ ಪಂಡಿತ್ ಜೊತೆಗಿನ ಒಡನಾಟ

ರಾಕಿಂಗ್ ಸ್ಟಾರ್ ಬಗ್ಗೆ ರಾಧಿಕಾ ಪಂಡಿತ್ ಮಾತನಾಡುತ್ತಾ, ಮೊದಲು ನಿಮ್ಮನ್ನು ನೋಡಿದಾಗ ತುಂಬಾ ಜಂಬ, ಯಾರ ಹತ್ತಿರವೂ ಮಾತನಾಡಲ್ಲ ಎಂದುಕೊಂಡಿದ್ದೆವು. ಆಗ ಹಾವಿನ ತರಹ ನಾಲಿಗೆ ಹೊರಗೆ ಹಾಕಿ ಮಾಡುತ್ತಿದ್ದೆ. ಕೊಂಕಣಿ ಭಾಷೆಯಲ್ಲಿ ಅಮ್ಮ ಬೈದಿದ್ದರು 'ಬುಷಿ' ಎಂದು. ಅಂದಿನಿಂದ ನೀವು ನನ್ನನ್ನು ಬುಷಿ ಎಂದೇ ಕರೆಯುತ್ತೀರಾ ಎಂದು ಹಳೆ ದಿನಗಳನ್ನು ನೆನಪಿಸಿಕೊಂಡರು.

ಈಗ ಮಾಡಿ ತೋರಿಸುವ ಛಲ ಇದೆ

ಐದು ವರ್ಷದಲ್ಲಿ ನಾನು ಏನು ಮಾಡ್ತೀನಿ ಎಂದು ಪಂಚವಾರ್ಷಿಕ ಯೋಜನೆ ಬಗ್ಗೆ ಹೇಳುತ್ತಿದ್ದ. ಮುಂದಿನ ನಿಮ್ಮ ಐದು ವರ್ಷಗಳ ಪ್ಲಾನ್ ಹೇಳಿ ಸಾರ್ ಎಂದು ರಮೇಶ್ ಕೇಳಿದಾಗ, ಆಗ ಹೇಳಿ ಮಾಡುವಂತಹ ಸನ್ನಿವೇಶ ಇತ್ತು. ಈಗ ಮಾಡಿ ತೋರಿಸುವ ಛಲ ಇದೆ ಎಂದರು.

ರಾಧಿಕಾ ಮತ್ತು ನಾನು ಬೆಸ್ಟ್ ಫ್ರೆಂಡ್ಸ್

ನನ್ನ ಮತ್ತು ರಾಧಿಕಾ ಪಂಡಿತ್ ಅವರ ಗಾಸಿಪ್ ಬಗ್ಗೆ ಬರೆದು ಕೆಲವರ ಹೊಟ್ಟೆ ತುಂಬುತ್ತೆ ಎಂದರೆ ನನಗೇನು ಬೇಸರ ಇಲ್ಲ ಎಂದರು. ನಾವಿಬ್ಬರು ಬೆಸ್ಟ್ ಫ್ರೆಂಡ್ಸ್ ಎಂದರು. ಗಜಕೇಸರಿ ಚಿತ್ರ 15 ಕೋಟಿ ಬಿಜಿನೆಸ್ ಮಾಡಿದೆ ಎಂಬ ಖುಷಿಕೊಟ್ಟಿದೆ ಎಂದರು. ಇದುವರೆಗೂ ಯಶ್ ಜೊತೆ ಐದು ಸಿನಿಮಾ ಮಾಡಿದ್ದೇವೆ ಎಂದರು ಜಯಣ್ಣ ಭೋಗೇಂದ್ರ.

ಜಯಣ್ಣ ಭೋಗೇಂದ್ರ ಜೊತೆಗಿನ ಗೆಳೆತನ

ಆರನೇ ಸಿನಿಮಾ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'. ಎಷ್ಟೋ ಜನ ನಮ್ಮನ್ನು ಕೇಳ್ತಾರೆ ಅವರಿಗೇ ಏಕೆ ಕಾಲ್ ಶೀಟ್ ಕೊಡ್ತೀರಿ ಎಂದು. ಸಿನಿಮಾ ಬಗ್ಗೆ ಇವರಿಗಿರುವ ಫ್ಯಾಷನ್ ಇನ್ಯಾರಿಗೂ ಇಲ್ಲ ಎಂದರು ಯಶ್. ಇದುವರೆಗೂ ನಾವು ಪೇಮೆಂಟ್ ಬಗ್ಗೆ ಮಾತನಾಡಿಲ್ಲ ಎಂದರು.

ಅದ್ದೂರಿಯಾಗಿ ತಂಗಿ ನಂದಿನಿ ಮದುವೆ

ಯಶ್ ಅವರ ತಂಗಿ ನಂದಿನಿ ಅವರು ಮಾತನಾಡುತ್ತಾ, ಈಗ ತಂದೆತಾಯಿ ದುಡ್ಡಲ್ಲಿ ತಂಗಿ ಮದುವೆ ಮಾಡಿದರೆ ಎಷ್ಟೋ ಅಣ್ಣಂದಿರು ಸಹಿಸಲ್ಲ. ಅಂತಹದ್ದರಲ್ಲಿ ಇವನು ದುಡಿದು ತನ್ನ ಶಕ್ತಿ ಮೀರಿ ನನ್ನ ಮದುವೆ ಮಾಡಿದ. ಅವನು ನನ್ನನ್ನು ಎಷ್ಟೂ ಪ್ರೀತಿಸುತ್ತಾನೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದರು ನಂದಿನಿ.

ಮಾಮನಾದಾಗ ಸಂಭ್ರಮಿಸಿದ ಕ್ಷಣ

ಇನ್ನು ತನಗೆ ಗಂಡುಮಗುವಾದಾಗ ಯಶ್ ಒಂದೇ ದಿನ ಇನ್ನೂರು ಜನಕ್ಕೆ ಕರೆ ಮಾಡಿ ತನ್ನ ತಂಗಿಗೆ ಮಗುವಾಗಿದೆ ಎಂದು ಹೇಳಿದ್ದ. ಇವನಷ್ಟು ಖುಷಿಪಟ್ಟವನು ಇನ್ಯಾರು ಇಲ್ಲ ಎಂದರು ಯಶ್ ತಂಗಿ ನಂದಿನಿ.

English summary
Rocking Star Yash shares his golden memories in Weekend with Ramesh, talk show by Ramesh Aravind on Zee Kannada. Yash companion with actress Radhika Pandith, Yash was born in Bhuvana Halli, Hassan, Karnataka, India as Naveen Kumar Gowda, after which his name was changed to Yash.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada