For Quick Alerts
  ALLOW NOTIFICATIONS  
  For Daily Alerts

  ಪತ್ನಿ ಮೇಲೆ ಹಲ್ಲೆ: 'ಆಕಾಶ ದೀಪ' ನಟಿ ದಿವ್ಯಾ ಶ್ರೀಧರ್ ಪತಿ ಬಂಧನ

  |

  ಕನ್ನಡತಿ, ನಟಿ ದಿವ್ಯಾ ಶ್ರೀಧರ್ ಮೇಲೆ ಹಲ್ಲೆ ಮಾಡಿದ್ದ ಆರೋಪ ಹೊತ್ತಿರುವ ಆಕೆಯ ಪತಿಯನ್ನು ಚೆನ್ನೈ ಪೊಲೀಸರು ಕೊನೆಗೂ ಬಂಧಿಸಿದ್ದಾರೆ.

  ಪತಿ ಅರ್ನವ್ ಅಲಿಯಾಸ್ ಅಮ್ಜದ್ ಖಾನ್ ವಿರುದ್ಧ ಕನ್ನಡತಿ, ದಿವ್ಯಾ ಶ್ರೀಧರ್ ಚೆನ್ನೈ ಪೊಲೀಸರ ಬಳಿ ಹಲ್ಲೆ ಹಾಗೂ ವಂಚನೆ ದೂರು ದಾಖಲಿಸಿದ್ದರು. ಪ್ರಕರಣ ಸಂಬಂಧ ಸಮನ್ಸ್‌ಗಳನ್ನು ನೀಡಿದ್ದ ಚೆನ್ನೈ ಪೊಲೀಸರು ಅಂತಿಮವಾಗಿ ನಿನ್ನೆ ಅಮ್ಜದ್ ಖಾನ್ ಅನ್ನು ಬಂಧಿಸಿದ್ದಾರೆ.

  ಒಂದು ವಾರದ ಹಿಂದೆ (ಅಕ್ಟೋಬರ್ 06) ರಂದು ನಟಿ ದಿವ್ಯಾ ಶ್ರೀಧರ್ ಪತಿಯಿಂದ ಹಲ್ಲೆಗೊಳಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ಗಾಯಗೊಂಡ ಸ್ಥಿತಿಯಲ್ಲಿ ದಾಖಲಾಗಿದ್ದರು. ಗರ್ಭಿಣಿ ಆಗಿದ್ದ ದಿವ್ಯಾ ಶ್ರೀಧರ್ ಅಂದೇ ವಕೀಲರ ಸಹಾಯದ ಮೂಲಕ ಪತಿ ಅಮ್ಜದ್ ಖಾನ್ ವಿರುದ್ಧ ಚೆನ್ನೈ ಪೊಲೀಸರ ಬಳಿ ದೂರು ದಾಖಲಿಸಿದ್ದರು.

  ದೂರು ಸ್ವೀಕರಿಸಿದ್ದ ಪೊಲೀಸರು ಅಮ್ಜದ್ ಖಾನ್‌ಗೆ ಸಮನ್ಸ್‌ ಜಾರಿ ಮಾಡಿದ್ದರು. ಆದರೆ ಪೊಲೀಸರ ವಿಚಾರಣೆಗೆ ಅಮ್ಜದ್ ಹಾಜರಾಗದ ಕಾರಣ ನಿನ್ನೆ ಅಮ್ಜದ್ ಅನ್ನು ಬಂಧಿಸಿ ಕರೆದೊಯ್ದಿದ್ದಾರೆ.

  ಅಕ್ಟೋಬರ್ 14 ರಂದು ತಮಿಳುನಾಡಿನ ಕೂಟಂಬಾಕಂನಲ್ಲಿ ಧಾರಾವಾಹಿಯೊಂದರ ಚಿತ್ರೀಕರಣದಲ್ಲಿ ಅಮ್ಜದ್ ಖಾನ್‌ ತೊಡಗಿಕೊಂಡಿದ್ದಾಗ ಅಲ್ಲಿಗೆ ತೆರಳಿದ ಪೊಲೀಸ್ ಸಿಬ್ಬಂದಿ ಸೆಟ್‌ನಲ್ಲಿಯೇ ಅಮ್ಜದ್ ಅನ್ನು ಬಂಧಿಸಿ ಕರೆದೊಯ್ದಿದ್ದಾರೆ.

  ಹಲ್ಲೆಗೊಳಗಾಗಿದ್ದ ದಿವ್ಯಾ ಶ್ರೀಧರ್, ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪತಿ ಅಮ್ಜದ್ ಖಾನ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ಗರ್ಭಿಣಿ ಆಗಿದ್ದರೂ ನನ್ನ ತಳ್ಳಿದ್ದಾರೆ, ಹೊಡೆದಿದ್ದಾರೆ ಎಂದಿದ್ದಾರೆ. ಗರ್ಭಪಾತದ ಅಪಾಯವಿದೆ ಎಂದು ಸಹ ಹೇಳಿದ್ದರು. 'ಚೆಲ್ಲಮ್ಮ' ಧಾರಾವಾಹಿಯ ಸಹ ನಟಿ ಅನ್ಶಿತಾ ಜೊತೆ ಕ್ಲೋಸ್ ಆಗಿದ್ದು, ಅದೇ ಕಾರಣಕ್ಕೆ ನನ್ನನ್ನು ದೂರ ಮಾಡುವ ಕಾರಣದಿಂದ ಹಲ್ಲೆ, ಮಾನಸಿಕ ವಂಚನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

  ಪತ್ನಿಯ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡಿದ್ದ ಅಮ್ಜದ್ ಖಾನ್, ''ಆದರೆ ಈ ಬಗ್ಗೆ ಇಂದು ಸ್ಪಷ್ಟನೆ ನೀಡಿರುವ ನಟ ಅಮ್ಜದ್ ಖಾನ್, ''ನಾನು, ದಿವ್ಯಾ ಮೇಲೆ ಹಲ್ಲೆ ಮಾಡಿಲ್ಲ, ಬೇಕಿದ್ದರೆ ನಮ್ಮ ಮನೆಯ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿ. ಆಕೆ ತಮ್ಮ ಕೆಲವು ಕೆಟ್ಟ ಗೆಳೆಯರೊಟ್ಟಿಗೆ ಸೇರಿಕೊಂಡು ಹೀಗೆ ಮಾಡುತ್ತಿದ್ದಾಳೆ. ಸುಮ್ಮನೆ ನನ್ನ ಮೇಲೆ ಇಲ್ಲದ ಆರೋಪ ಹೊರಿಸುತ್ತಿದ್ದಾಳೆ. ಆಕೆಗೆ ತಾನು ತಾಯಿಯಾಗುತ್ತಿರುವುದು ಇಷ್ಟವಿಲ್ಲ, ಅಬಾರ್ಶನ್ ಮಾಡಿಸಿಕೊಳ್ಳಲು ಇಲ್ಲ-ಸಲ್ಲದ ನಾಟಕವಾಡುತ್ತಿದ್ದಾಳೆ'' ಎಂದಿದ್ದರು.

  ದಿವ್ಯಾ ಶ್ರೀಧರ್ ಹಾಗೂ ಅಮ್ಜದ್ ಖಾನ್ 2015 'ಕೆಳದಿ ಕಣ್ಮನಿ' ತಮಿಳು ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದರು. ಆ ಬಳಿಕ ಇಬ್ಬರೂ ಪ್ರೀತಿ ಮೊದಲ ಲಾಕ್‌ಡೌನ್ ಮುಗಿದ ಬಳಿಕ ವಿವಾಹವಾಗಿ ಚೆನ್ನೈನಲ್ಲಿ ನೆಲೆಸಿದ್ದರು. ಇದೀಗ ದಿವ್ಯಾ, ಗರ್ಭಿಣಿ ಆಗಿದ್ದು, ಪತಿ ಅಮ್ಜದ್ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ, ನನ್ನ ಹೊಟ್ಟೆಗೆ ಒದ್ದಿದ್ದಾನೆ ಎಂದು ನಟಿಯು ದೂರು ನೀಡಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಸಹ. ''ನೀನು ಕನ್ನಡದ ನಟಿ, ಇದು ಚೆನ್ನೈ, ಇಲ್ಲಿ ನನಗೆ ಬೇಕಾದ ಹೆಚ್ಚು ಮಂದಿ ಜನರಿದ್ದಾರೆ, ನಿನಗೆ ಗತಿ ಕಾಣಿಸುತ್ತೇನೆ ಎಂದು ಆವಾಜ್ ಸಹ ಹಾಕಿದ್ದಾರಂತೆ ಅಮ್ಜದ್, ಹೀಗೆಂದು ದಿವ್ಯಾ ಪರ ವಕೀಲರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಆ ಬಳಿಕ ಸೆಲ್ಫಿ ವಿಡಿಯೋದಲ್ಲಿ ಕಣ್ಣೀರು ಹಾಕುತ್ತಾ ಮಾತನಾಡಿರುವ ದಿವ್ಯಾ, ಪತಿಯ ವಿರುದ್ಧ ಹಿಂಸಾಚಾರದ ಆರೋಪ ಮಾಡಿದ್ದಾರೆ.

  English summary
  Actress Divya Shridhar's husband Amzad Khan arrested by Chennai Police. He accused of violence against his pregnant wife.
  Saturday, October 15, 2022, 10:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X