»   » ಮರಳಿ ಕಿರುತೆರೆಗೆ ಲವ್ಲಿ ಗರ್ಲ್ ಜೆನಿಲಿಯಾ ಲಗ್ಗೆ

ಮರಳಿ ಕಿರುತೆರೆಗೆ ಲವ್ಲಿ ಗರ್ಲ್ ಜೆನಿಲಿಯಾ ಲಗ್ಗೆ

Posted By:
Subscribe to Filmibeat Kannada
Actress Genelia DSouza
ರಿತೇಶ್ ದೇಶ್‌ಮುಖ್ ಕೈಹಿಡಿದ ಮೇಲೆ ಜೆನಿಲಿಯಾ ಡಿಸೋಜಾ ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಆಕೆಯ ಕೈಯಲ್ಲಿ ಸದ್ಯಕ್ಕೆ ಎರಡು ಹಿಂದಿ ಚಿತ್ರಗಳಿವೆ. ಈ ಎರಡು ಚಿತ್ರಗಳ ಬಳಿಕ ಜೆನಿಲಿಯಾ ಕಿರುತೆರೆಗೆ ರೀಎಂಟ್ರಿ ಕೊಡಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಆದರೆ ಕಣ್ಣೀರಧಾರೆ ಹರಿಸುವ ಧಾರಾವಾಹಿಗಳಲ್ಲಂತೂ ಜೆನಿಲಿಯಾ ಅಭಿನಯಿಸಲು ಅಲ್ಲ. ಕಾರ್ಯಕ್ರಮವೊಂದರ ನಿರೂಪಕಿಯಾಗಿ ಕಾಣಿಸಿಕೊಳ್ಳಲು ಅಂಗೀಕರಿಸಿದ್ದಾರೆ. ಯುವಕರಿಗೆಂದೇ ಒಂದು ಕಾರ್ಯಕ್ರಮ ಸಿದ್ಧವಾಗುತ್ತಿದೆ. ಕಾರ್ಯಕ್ರಮದ ಹೆಸರು 'ದ ಚೂಸನ್ ಒನ್'.

ಯುಟಿವಿಯಲ್ಲಿ ಪ್ರಸಾರವಾಗಲಿರುವ ಈ ಕಾರ್ಯಕ್ರಮ ಮುಂಬರುವ ಮೂರು ತಿಂಗಳ ಬಳಿಕ ಚಿತ್ರೀಕರಣ ಆರಂಭವಾಲಿದೆ. ಕಾರ್ಯಕ್ರಮದಲ್ಲಿ ರಿತೇಶ್ ಕೂಡ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಜೆನಿಲಿಯಾಗೆ ಕಿರುತೆರೆ ಅಡಿಯಿಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2009ರಲ್ಲಿ ಕಿರುತೆರೆಯ 'ಬಿಗ್ ಸ್ವಿಚ್' ಎಂಬ ಕಾರ್ಯಕ್ರಮವನ್ನು ಜೆನಿಲಿಯಾ ನಿರೂಪಿಸಿದ್ದರು. (ಏಜೆನ್ಸೀಸ್)

English summary
Bollywood actress Genelia DSouza, whose first brush with the small screen came with ‘Big Switch’ in 2009, is set for her TV comeback. She will play a mentor on UTV Stars ‘The Chosen One’.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada