»   » ಹೇಮಶ್ರೀ ಸಾವು, ಇನ್ನೆರಡು ದಿನಗಳಲ್ಲಿ ಸತ್ಯ ಬಯಲು

ಹೇಮಶ್ರೀ ಸಾವು, ಇನ್ನೆರಡು ದಿನಗಳಲ್ಲಿ ಸತ್ಯ ಬಯಲು

Posted By:
Subscribe to Filmibeat Kannada
ಕಿರುತೆರೆಯ ಜನಪ್ರಿಯ ತಾರೆ ಹೇಮಶ್ರೀ ಅನುಮಾನಾಸ್ಪದವಾಗಿ ಮೃತಪಟ್ಟು ಸರಿಸುಮಾರು ಒಂದು ತಿಂಗಳಾಗುತ್ತಿದೆ. ಆದರೂ ಆಕೆಯ ಸಾವಿಗೆ ನಿಜವಾದ ಕಾರಣ ಏನು ಎಂಬುದು ಇದುವರೆಗೂ ಬಹಿರಂಗವಾಗಿಲ್ಲ. ಏತನ್ಮಧ್ಯೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹೆಬ್ಬಾಳ ಪೊಲೀಸರ ಕೈಸೇರಿದೆ.

ಮುಚ್ಚಿದ ಲಕೋಟೆಯಲ್ಲಿರುವ ಈ ವರದಿಯಲ್ಲಿ ಏನಿದೆ ಎಂಬುದು ಇನ್ನೆರಡು ದಿನಗಳಲ್ಲಿ ಬಹಿರಂಗವಾಗಲಿದೆ. ಪೊಲೀಸರು ಈ ವರದಿಯನ್ನು ವಿಕ್ಟೋರಿಯಾ ಆಸ್ಪತ್ರೆ ವೈದ್ಯರಿಗೆ ಹಸ್ತಾಂತರಿಸಿದ್ದಾರೆ. ಶವ ಪರೀಕ್ಷಾ ವರದಿ ಹಾಗೂ ಈ ವರದಿ ಎರಡನ್ನೂ ತಾಳೆ ನೋಡಿ ಅಂತಿಮ ವರದಿಯನ್ನು ವೈದ್ಯರು ನೀಡಲಿದ್ದಾರೆ.

ಹೇಮಶ್ರೀ ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯಲ್ಲಿ ಕಪ್ಪು ದ್ರಾವಣ ಪತ್ತೆಯಾಗಿತ್ತು. ಆ ದ್ರಾವಣ ಏನಿರಬಹುದು ಎಂಬ ಬಗ್ಗೆ ಹೆಚ್ಚಿನ ತನಿಖೆಗಾಗಿ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಈಗ ಆ ವರದಿಯೂ ಬಂದಿದ್ದು ಹೇಮಶ್ರೀ ಸಾವಿಗೆ ನಿಖರವಾದ ಕಾರಣ ಏನು ಎಂಬುದು ಇನ್ನೆರಡು ದಿನಗಳಲ್ಲಿ ಬಹಿರಂಗವಾಗಲಿದೆ ಎನ್ನುತ್ತವೆ ಮೂಲಗಳು. ಕಿರುತೆರೆ ನಟಿ ಹೇಮಶ್ರೀ ಅನುಮಾನಾಸ್ಪದ ಸಾವಿನ ಹಿಂದೆ ಆಕೆಯ ಪತಿ ಸುರೇಂದ್ರ ಬಾಬು ಕೈವಾಡವಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ವಶಕ್ಕೆ ಪಡೆದಿರುವುದು ಗೊತ್ತೇ ಇದೆ. (ಏಜೆನ್ಸೀಸ್)

English summary
Hebbal police, Bangalore finally got Forensic Science Laboratory report (FSL) relating to Kannada small screen actress Hemashree death. The police may expose the report details in two or three days. 
Please Wait while comments are loading...