For Quick Alerts
  ALLOW NOTIFICATIONS  
  For Daily Alerts

  ನಟಿ ನಯನತಾರಾಗೆ ನಿಗೂಢ ಕಾಯಿಲೆಯಂತೆ

  By ರವಿಕಿಶೋರ್
  |

  ನಟಿ ನಯನತಾರಾ ಕುರಿತು ಇತ್ತೀಚೆಗೆ ಸದಾ ಒಂದಿಲ್ಲೊಂದು ಸುದ್ದಿಗಳು ಹರಿದಾಡುತ್ತಲೇ ಇವೆ. ಈಗ ಮತ್ತೊಂದು ಶಾಕಿಂಗ್ ಸುದ್ದಿ ಅವರ ಸುತ್ತ ಸುತ್ತುತ್ತಿದೆ. ಅದೇನೆಂದರೆ ಅವರಿಗೆ ಎಂಥದೋ ನಿಗೂಢ ಕಾಯಿಲೆ ಇದೆ ಎಂಬುದು.

  ಆದರಿದು ಗುಪ್ತ ರೋಗ ಅಲ್ಲ ಎಂಬುದು ಸಮಾಧಾನದ ಸಂಗತಿ. ಏನು ಕಾಯಿಲೆ ಎಂಬುದು ಸ್ಪಷ್ಟವಾಗಿ ಗೊತ್ತಿಲ್ಲದಿದ್ದರೂ ಚರ್ಮ ಕಾಯಿಲೆಯಿಂದ ಅವರು ಬಳಲುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಆ ಕಾಯಿಲೆ ಜಾಸ್ತಿಯಾಗಿ ಚಿತ್ರೀಕರಣಕ್ಕೂ ಸರಿಯಾಗಿ ಹಾಜರಾಗುತ್ತಿಲ್ಲವಂತೆ. ಇದಕ್ಕಾಗಿ ಕೇರಳದಲ್ಲಿ ಆಯುರ್ವೇದ ಚಿಕಿತ್ಸೆಗೆ ಮೊರೆಹೋಗಿದ್ದಾರೆ ನಯನಿ.

  ಈ ಹಿಂದೊಮ್ಮೆ ನಯನತಾರಾ ಮೇಲೆ ವಾಮಾಚಾರ ಪ್ರಯೋಗ ಮಾಡಲಾಗಿತ್ತು ಎಂಬ ಸುದ್ದಿ ಹಬ್ಬಿತ್ತು. ಆಗ ನಯನತಾರಾ ಅದು ವಾಮಾಚಾರವೂ ಅಲ್ಲ ಕಾಟಾಚಾರವೂ ಅಲ್ಲ ಎಂದು ಅಲ್ಲಗಳೆದಿದ್ದರು. ಆದರೆ ಕಾಲಿವುಡ್ ಮಂದಿ ಮಾತ್ರ ತಲೆಗೊಂದರಂತೆ ಮಾತನಾಡಿದ್ದರು.

  ಇದೆಲ್ಲಾ ಯಾರೋ ಮಾಡಿಸಿದ ಮಾಟ ಮಂತ್ರದ ಫಲ ಎಂದು ಕಾಲಿವುಡ್ ಚಿತ್ರರಂಗದಲ್ಲಿ ಗುಸುಗುಸು ಮಾತುಗಳು ಕೇಳಿಬಂದಿದ್ದವು. ಇತ್ತೀಚೆಗೆ ನಯನತಾರಾ ಅವರು ತಮ್ಮ ಮೇಲೆ ಪ್ರಯೋಗಿಸಿರುವ ಕ್ಷುದ್ರ ಶಕ್ತಿಗಳ ಬಿಡುಗಡೆಯಾಗಿ ಕೇರಳದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂಬುದು ಇನ್ನೊಂದು ಮಜವಾದ ಗಾಸಿಪ್.

  ವಾಮಾಚಾರದ ಬಗ್ಗೆ ಪ್ರತಿಕ್ರಿಯಿಸಿದ್ದ ನಯನಿ ಬಹುಶಃ ಅಲರ್ಜಿ ಕಾರಣ ತಮಗೆ ಹೀಗಾಗಿತ್ತು. ಇದಕ್ಕಾಗಿ ಆಂಟಿಬಯೋಟಿಕ್ಸ್ ತಗೊಂಡಿದ್ದೀನಿ. ವಾಮಾಚಾರ, ವಶೀಕರಣ, ಮಾಟ ಮಂತ್ರ, ನಿಂಬೆಕಾಯಿ, ಬದನೆಕಾಯಿ ಎಲ್ಲಾ ಸುಳ್ಳು ಎಂದಿದ್ದರು.

  English summary
  Beauty Nayantara is in another trouble. It is heard that applying makeup to her is an issue due to her skin problem. Latest rumour circulating Tamil industry is that Nayan has been taking English medicine as well as Kerala Ayurvedic treatment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X