For Quick Alerts
  ALLOW NOTIFICATIONS  
  For Daily Alerts

  ತೆಲುಗು ಧಾರಾವಾಹಿಯ ನಾಯಕ ನಾಯಕಿ ಪಾತ್ರದಲ್ಲಿ ಕನ್ನಡದ ನಿಶಾ ರವಿಕೃಷ್ಣನ್ ಹಾಗೂ ಯಶ್ವಂತ್

  By ಪ್ರಿಯಾ ದೊರೆ
  |

  ಕನ್ನಡ ಕಿರುತೆರೆಯಲ್ಲಿ ಟಾಪ್ ಒನ್ ಸೀರಿಯಲ್ ಆಗಿ ಉಳಿದಿರುವ ಗಟ್ಟಿಮೇಳ ಧಾರಾವಾಹಿ ಇಂದಿಗೂ ಯಾರಿಗೂ ಬೋರ್ ಹೊಡೆಸಿಲ್ಲ. ಈ ಧಾರಾವಾಹಿಯಲ್ಲಿ ನಾಯಕಿ ಅಮೂಲ್ಯ ಪಾತ್ರದ ನಟಿಯ ನಿಜವಾದ ಹೆಸರು ನಿಶಾ ರವಿಕೃಷ್ಣನ್. ರೌಡಿ ಬೇಬಿ ಎಂದೇ ಖ್ಯಾತಿ ಗಳಿಸಿರುವ ನಿಶಾ, ಸಿಂಗರ್ ಹಾಗೂ ಡ್ಯಾನ್ಸರ್ ಕೂಡ ಹೌದು.

  ಖಾಸಗಿ ಚಾನೆಲ್ ನಲ್ಲಿ 12ನೇ ವಯಸ್ಸಿನಲ್ಲೇ ಆಂಕರ್ ಆಗಿದ್ದ ನಿಶಾ ರವಿಕೃಷ್ಣನ್, ಸತತವಾಗಿ ನಾಲ್ಕು ವರ್ಷಗಳ ಕಾಲ ನಿರೂಪಕಿಯಾಗಿದ್ದರು. ಸದ್ಯ ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಿಶಾ ಅವರಿಗೆ ಎರಡೂ ರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ.

  ನಿಶಾ ರವಿಕೃಷ್ಣನ್ ಅವರು ನಟಿ ಮಾತ್ರವಲ್ಲದೇ, ಅವರು ಸಿಂಗರ್ ಕೂಡ ಹದು. ಅಲ್ಲದೇ, ಒಳ್ಳೆಯ ಡ್ಯಾನ್ಸರ್ ಕೂಡ. ಕರ್ನಾಟಕ ಮತ್ತು ಭರತನಾಟ್ಯದಲ್ಲಿ ಪರಿಣಿತಿ ಪಡೆದಿದ್ದಾರೆ. ಇನ್ನು ತಮ್ಮ ಉತ್ತಮ ಅಭಿನಯಕ್ಕಾಗಿ ಜೀ ಕನ್ನಡದ ಅತ್ಯುತ್ತಮ ನಾಯಕಿ ಪ್ರಶಸ್ತಿ ಕೂಡ ಪಡೆದಿದ್ದಾರೆ.

  ಬಾಲನಟಿಯಾಗಿದ್ದ ನಿಶಾ ರವಿಕೃಷ್ಣನ್

  ಬಾಲನಟಿಯಾಗಿದ್ದ ನಿಶಾ ರವಿಕೃಷ್ಣನ್

  ನಿಶಾ ರವಿಕೃಷ್ಣನ್ ಅವರು ಮೂಲತಃ ಹಾಸನದ ಸಕಲೇಶಪುರದವರು. ನಿಶಾ ಅವರ ತಂದೆ ರವಿಕೃಷ್ಣನ್ ಅವರು ಮಂಡ್ಯ ರಮೇಶ್ ತಂಡದ ನಾಟಕಗಳಲ್ಲಿ ಭಾಗವಹಿಸುತ್ತಿದ್ದರಂತೆ. ಚಿಂಟು ಟಿವಿಯ ಕಾರ್ಯಕ್ರಮದ ಮೂಲಕ ಕಿರುತೆರೆ ಪಯಣ ಆರಂಭಿಸಿದ ನಿಶಾ, ಸುಮಾರು ನಾಲ್ಕು ವರ್ಷಗಳ ಕಾಲ ಆಂಕರಿಂಗ್ ಮಾಡಿದ್ದರು. ಅದೂ ಕೂಡ ಅವರ ಕಾರ್ಯಕ್ರಮವನ್ನು ಅವರೇ ಪ್ಲಾನ್ ಮಾಡುತ್ತಿದ್ದರಂತೆ. ಬಾಲ್ಯದಲ್ಲೇ ಕ್ಯಾಮರಾ ಫೇಸ್ ಮಾಡುವುದನ್ನು ಕಲಿತಿದ್ದರು.

  ಧಾರಾವಾಹಿಗಳಲ್ಲಿ ಮಿಂಚುತ್ತಿರುವ ನಟಿ

  ಧಾರಾವಾಹಿಗಳಲ್ಲಿ ಮಿಂಚುತ್ತಿರುವ ನಟಿ

  ಆಂಕರಿಂಗ್ ಮಾಡಿದ ಬಳಿಕ ನಿಶಾ ಅವರು ಸರ್ವ ಮಂಗಳ ಮಾಂಗಲ್ಯೇ ಎಂಬ ಸೀರಿಯಲ್ ನಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದರು. ತದನಂತರ ನಿಶಾ ಗಟ್ಟಿಮೇಳ ಸೀರಿಯಲ್ ಮೂಲಕ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಮೂಲ್ಯ ಪಾತ್ರದಲ್ಲಿ ಮಿಂಚುತ್ತಿರುವ ನಿಶಾ ಅವರು ರೌಡಿ ಬೇಬಿ ಎಂಬ ಬಿರುದನ್ನು ಕೂಡ ಪಡೆದಿದ್ದಾರೆ. ಈ ಧಾರಾವಾಹಿಯ ಅಮೂಲ್ಯಾ ಪಾತ್ರವನ್ನು ಹಲವು ಪ್ರೇಕ್ಷಕರು ಮೆಚ್ಚಿದ್ದಾರೆ. ಧಾರಾವಾಹಿ ಮಾತ್ರವಲ್ಲದೇ ಸಿನಿಮಾದಲ್ಲೂ ನಿಶಾ ಬಣ್ಣ ಹಚ್ಚಿದ್ದಾರೆ. ಅಂದೊಂದಿತ್ತು ಕಾಲ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಇಷ್ಟಕಾಮ್ಯ ಸಿನಿಮಾದ ಹಾಡೊಂದಕ್ಕೆ ಬ್ಯಾಕ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ.

  ಎರಡೂ ಭಾಷೆಯಲ್ಲೂ ನಟನೆ

  ಎರಡೂ ಭಾಷೆಯಲ್ಲೂ ನಟನೆ

  ಇನ್ನು ಕನ್ನಡದ ನಟ-ನಟಿಯರು ಪರಭಾಷೆಗಳಿಗೆ ಹೋಗಿ ಅಲ್ಲೆ ಸೆಟಲ್ ಆಗುವುದು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇನ್ನು ಕೆಲವರು ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಗಳಲ್ಲೂ ಒಂದೇ ಸಲ ನಟಿಸುತ್ತಾ ಬ್ಯಾಲೆನ್ಸ್ ಮಾಡುತ್ತಾರೆ. ಅಂತೆಯೇ ನಿಶಾ ರವಿಕೃಷ್ಣನ್ ಅವರು ಕೂಡ ತೆಲುಗಿನಲ್ಲಿ 'ಮುತ್ಯಮಂತ ಮುದ್ದು' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ತೆಲುಗಿನಲ್ಲೂ ಕೂಡ ತಮ್ಮದೇ ಅಭಿಮಾನಿಗಳನ್ನು ಗಳಿಸಿರುವ ನಿಶಾಗೆ ಇನ್ ಸ್ಟಾಗ್ರಾಂನಲ್ಲಿ ಲಕ್ಷ ಲಕ್ಷ ಅಭಿಮಾನಿಗಳಿದ್ದಾರೆ.

  ಕನ್ನಡದ ನಟನೊಂದಿಗೆ ತೆಲುಗಿನಲ್ಲಿ ನಾಯಕಿ

  ಕನ್ನಡದ ನಟನೊಂದಿಗೆ ತೆಲುಗಿನಲ್ಲಿ ನಾಯಕಿ

  ಇದೀಗ ನಿಶಾ ಅವರು ತೆಲುಗಿನ ಮತ್ತೊಂದು ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲು ಮುಂದಾಗಿದ್ದಾರೆ. ಅಮ್ಮಾಯಿಗಾರು ಎಂಬ ತೆಲುಗು ಧಾರಾವಾಹಿಗೆ ನಿಶಾ ಬಣ್ಣ ಹಚ್ಚುತ್ತಿದ್ದಾರೆ. ಇದರಲ್ಲಿ ನಿಶಾ ಅವರದ್ದು ಶ್ರೀಮಂತ ಮನೆ ಹುಡುಗಿಯ ಪಾತ್ರ. ಇನ್ನು ಇದರಲ್ಲಿ ನಾಯಕನ ಪಾತ್ರ ಮಾಡುತ್ತಿರುವುದು ಕೂಡ ಕನ್ನಡದ ಹುಡುಗ. ಕನ್ಯಾಕುಮಾರಿ ಧಾರಾವಾಹಿಯಲ್ಲಿ ನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದ ನಟ ಯಶ್ವಂತ್ ಅವರು ಅಮ್ಮಾಯಿಗಾರು ಧಾರಾವಾಹಿಯಲ್ಲಿ ಹೀರೋ ಆಗಿ ನಟಿಸುತ್ತಿದ್ದಾರೆ. ಇದರಲ್ಲಿ ಯಶ್ವಂತ್ ಬಡ ಕುಟುಂಬ ಹುಡುಗ. ಇವರಿಬ್ಬರ ನಡುವೆ ಹುಟ್ಟುವ ಪ್ರೀತಿಯ ಕಥೆಯೇ ಧಾರಾವಾಹಿಯಾಗಿ ಮೂಡಿ ಬರುತ್ತಿದೆ.

  English summary
  Actress Nisha Ravikrishnan and Actor Yashwanth started to act in telugu serial ammayigaru.
  Wednesday, October 12, 2022, 19:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X