»   » ಕನ್ನಡ ಕಿರುತೆರೆಗೆ ಕನ್ಯಾಮಣಿ ಪ್ರಿಯಾಮಣಿ ಎಂಟ್ರಿ

ಕನ್ನಡ ಕಿರುತೆರೆಗೆ ಕನ್ಯಾಮಣಿ ಪ್ರಿಯಾಮಣಿ ಎಂಟ್ರಿ

Posted By:
Subscribe to Filmibeat Kannada

ಈಟಿವಿ ಕನ್ನಡ ವಾಹಿನಿಯ ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ 'ಡಾನ್ಸಿಂಗ್ ಸ್ಟಾರ್' ಎರಡನೇ ಆವೃತ್ತಿಗೆ ಚಾಲನೆ ಸಿಕ್ಕಿದೆ. ಇಂದಿನಿಂದ ಕಾರ್ಯಕ್ರಮದ ಚಿತ್ರೀಕರಣ ಶುರುವಾಗಲಿದ್ದು, ಫೆಬ್ರವರಿ 7 ರಿಂದ ಪ್ರಸಾರವಾಗಲಿದೆ.

ಹಾಗಾದ್ರೆ, ಡಾನ್ಸಿಂಗ್ ಸ್ಟಾರ್-2 ಕಾರ್ಯಕ್ರಮದಲ್ಲಿ ಯಾರ್ಯಾರು ಭಾಗವಹಿಸಲಿದ್ದಾರೆ? 'ಫಿಲ್ಮಿಬೀಟ್ ಕನ್ನಡ' ಈ ಹಿಂದೆ ವರದಿ ಮಾಡಿದ ಹಾಗೆ, ಕಾಂಟ್ರವರ್ಶಿಯಲ್ ಕ್ವೀನ್ 'ಮೈತ್ರಿಯಾ ಗೌಡ', ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅಳಿಯ 'ಅನಿರುದ್ಧ', ಚಂದನವನದ ಚಂದ್ರಿಕೆ 'ಚಂದ್ರಿಕಾ', ಮಾಸ್ಟರ್ ಆನಂದ್, ರ್ಯಾಪಿಡ್ ರಶ್ಮಿ, ಹರ್ಷಿಕಾ ಪೂಣಚ್ಚ ಸ್ಪರ್ಧಿಗಳಾಗಿದ್ದಾರೆ. [ಮೈತ್ರಿಯಾ ಗೌಡ ಈಗ ಕಿರುತೆರೆಯ 'ಡಾನ್ಸಿಂಗ್ ಸ್ಟಾರ್']

Actress Priyamani to Judge

ಇನ್ನು ಕಿರುತೆರೆ ಬಳಗದಿಂದ ವಿಜಯ್ ಸೂರ್ಯ (ಅಗ್ನಿಸಾಕ್ಷಿ), ರಜನಿ (ಅಮೃತವರ್ಷಿಣಿ), ಕಾರ್ತಿಕ್ (ಯಶೋದೆ), ಸುಕ್ರಿತಾ (ಅಗ್ನಿಸಾಕ್ಷಿ), ಮಾಸ್ಟರ್ ಅಶ್ವಿಕ್ (ಪುನರ್ ವಿವಾಹ) ಮತ್ತು ಗಾಯಕ ಸಿಂಚನ್ ದೀಕ್ಷಿತ್ ಭಾಗವಹಿಸುತ್ತಿದ್ದಾರೆ.

ಡಾನ್ಸ್ ವೇದಿಕೆಯಲ್ಲಿ ಒಟ್ಟು 12 ಮಂದಿ ಸೆಣಸಲಿರುವ ಈ ಕಾರ್ಯಕ್ರಮಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ತೀರ್ಪುಗಾರರಾಗಿರುವುದು ಸಖತ್ ಸ್ಪೆಷಲ್. ಆ ಮೂಲಕ ಕಿರುತೆರೆಯಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ ರವಿಮಾಮ. [ಕಿರುತೆರೆಗೆ ಅಡಿಯಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್]

Actress Priyamani to Judge

ಇದೆಲ್ಲವೂ ಹಳೇ ಸುದ್ದಿ. ಇದೀಗ 'ಡಾನ್ಸಿಂಗ್ ಸ್ಟಾರ್' ಅಡ್ಡದಿಂದ ಬಂದಿರುವ ಲೇಟೆಸ್ಟ್ ಅಪ್ ಡೇಟ್ ಪ್ರಕಾರ, ರವಿಚಂದ್ರನ್ ಜೊತೆ ನಟಿ ಪ್ರಿಯಾಮಣಿ ಕೂಡ ಜಡ್ಜ್ ಆಗಿದ್ದಾರೆ. ಬೆಳ್ಳಿತೆರೆಯಲ್ಲಿ ಸಿಕ್ಕಾಪಟ್ಟೆ ಬಿಜಿಯಿರುವ ಪ್ರಿಯಾಮಣಿ, ಸಣ್ಣ ಪರದೆ ಕಡೆ ಮುಖ ಮಾಡಿರುವುದು ಸೋಜಿಗ.

ಇನ್ನೂ ಮೂರನೇ ತೀರ್ಪುಗಾರರಾಗಿ ನೃತ್ಯ ಕಲಾವಿದೆ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಪತ್ನಿ ಮಯೂರಿ ಸೆಲೆಕ್ಟ್ ಆಗಿದ್ದಾರೆ. ಹಿಂದಿನ ಸೀಸನ್ ನಂತೆ ಇಲ್ಲೂ ಕೂಡ 'ರಿಯಾಲಿಟಿ ಸ್ಟಾರ್' ಅಕುಲ್ ಬಾಲಾಜಿ ಕಾರ್ಯಕ್ರಮವನ್ನ ನಡೆಸಿಕೊಡಲಿದ್ದಾರೆ.

Actress Priyamani to Judge

ದೊಡ್ಡ ದೊಡ್ಡ ಕಲಾವಿದರ ದಂಡು ಒಂದೇ ಕಾರ್ಯಕ್ರಮದಲ್ಲಿ ಸೇರಿರುವುದು 'ಡಾನ್ಸಿಂಗ್ ಸ್ಟಾರ್-2' ಹೆಗ್ಗಳಿಕೆ. ಅಲ್ಲಿಗೆ ಫೆಬ್ರವರಿ 7 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಈ ಟಿವಿ ಕನ್ನಡ ವಾಹಿನಿಯಲ್ಲಿ ಡಾನ್ಸ್ ಜುಗಲ್ಬಂದಿ ಗ್ಯಾರೆಂಟಿ. (ಫಿಲ್ಮಿಬೀಟ್ ಕನ್ನಡ)

English summary
Crazy Star Ravichandran, Actress Priyamani, Dancer Mayuri is roped in to judge the contestants on the ETV Kannada's popular show Dancing stars-2. Mythriya Gowda, Harshika Poonacha, Aniruddh, Chandrika are the popular contestants.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada