For Quick Alerts
  ALLOW NOTIFICATIONS  
  For Daily Alerts

  ಒಂದು ನಿಮಿಷದ ಧಾರಾವಾಹಿ ಪ್ರೋಮೋಗಾಗಿ ನಟಿ ರೇಖಾ ಪಡೆದ ಸಂಭಾವನೆ ಕೇಳಿದ್ರೆ ಅಚ್ಚರಿ ಪಡುತ್ತೀರಿ

  |

  ಬಾಲಿವುಡ್ ಖ್ಯಾತ ನಟಿ, ಎವರ್ ಗ್ರೀನ್ ಬ್ಯೂಟಿ ರೇಖಾ ಸದ್ಯ ಅಪರೂಪಕ್ಕೊಂದು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಮುಂದೆ ಬರ್ತಿದ್ದಾರೆ. ಸಿನಿಮಾ ಮತ್ತು ಕಿರುತೆರೆಯಲ್ಲಿ ಆಗಾಗ ಕಾಣಿಸಿಕೊಳ್ಳುವ ರೇಖಾ ತನ್ನ 66ನೇ ವಯಸ್ಸಿನಲ್ಲೂ ಅದ್ಭುತ ಸೌಂದರ್ಯದ ಮೂಲಕ ಅಭಿಮಾನಿಗಳ ಮನಕದಿಯುತ್ತಿದ್ದಾರೆ.

  ರೇಖಾ ಈಗಲೂ ಬಾಲಿವುಡ್ ನ ಬಹು ಬೇಡಿಕೆಯ ನಟಿಯಾಗಿದ್ದು ಎವರನ್ ಗ್ರೀನ್ ಸುಂದರಿ ಪಡೆಯುವ ಸಂಭಾವನೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. ಅಪರೂಪಕ್ಕೆ ತೆರೆಮೇಲೆ ಕಾಣಿಸಿಕೊಳ್ಳುವ ರೇಖಾ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಿದ್ದಾರೆ. ಇದಕ್ಕೆ ಸಾಕ್ಷಿ ಇತ್ತೀಚಿಗೆ ಧಾರಾವಾಹಿಯೊಂದರ ಪ್ರೋಮೋದಲ್ಲಿ ಕಾಣಿಸಿಕೊಂಡಿರುವ ರೇಖಾ ಕೋಟಿ ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ.

  ನಟಿ ರೇಖಾ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮದುವೆ ವಿಚಾರ ಮತ್ತೆ ವೈರಲ್ ನಟಿ ರೇಖಾ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮದುವೆ ವಿಚಾರ ಮತ್ತೆ ವೈರಲ್

  ಕೇವಲ ಒಂದು ನಿಮಿಷದ ಪ್ರೋಮೋದಲ್ಲಿ ಕಾಣಿಸಿಕೊಳ್ಳಲು ರೇಖಾ ಭರ್ಜರಿ ಸಂಭಾವನೆ ಪಡೆಯುವ ಮೂಲಕ ಯುವ ನಟಿಯರಿಂತ ತಾವೇನು ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಅಂದಹಾಗೆ ರೇಖಾ ಕಿರುತೆರೆಗೆ ಎಂಟ್ರಿ ಕೊಟ್ಟಿರುವುದು ಘಮ್ ಹೈ ಕಿಸಿಕೇ ಪ್ಯಾರ್ ಮೇಯಿನ್ ಧಾರಾವಾಹಿಗಾಗಿ. ಹಿಂದಿ ಕಿರುತೆರೆಯ ಪ್ರಸಿದ್ಧ ಧಾರಾವಾಹಿಗಳಲ್ಲಿ ಘಮ್ ಹೈ ಕಿಸಿಕೇ ಪ್ಯಾರ್ ಮೇಯಿನ್ ಕೂಡ ಒಂದು. ಹೆಚ್ಚು ಜನಪ್ರಿಯತೆ ಪಡೆದಿರುವ ಈ ಧಾರಾವಾಹಿಯಲ್ಲಿ ನಟಿ ರೇಖಾ ವಿಶೇಷ ಪ್ರದರ್ಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಅಂದಹಾಗೆ ನಟಿ ರೇಖಾ ಈ ವಿಶೇಷ ಪಾತ್ರಕ್ಕಾಗಿ ಬರೋಬ್ಬರಿ 5 ರಿಂದ 7 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಬಾಲಿವುಡ್ ಬ್ಯೂಟಿ ಕೇವಲ ಒಂದು ನಿಮಿಷದ ಪ್ರೋಮೋದಲ್ಲಿ ಕಾಣಿಸಿಕೊಳ್ಳಲು ಭರ್ಜರಿ ಮೊತ್ತ ಪಡೆದು ಸುದ್ದಿಯಾಗಿದ್ದಾರೆ. ಗೋಲ್ಡ್ ಬಣ್ಣದ ಜೆರಿ ಸೀರಿ ಧರಿಸಿ ಸಾಂಪ್ರದಾಯಿಕ ಲುಕ್ ನಲ್ಲಿ ಕಾಣಿಸಿಕೊಂಡಿರುವ ರೇಖಾ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

  ರೇಖಾ ಅವರನ್ನು ಧಾರಾವಾಹಿಯಲ್ಲಿ ನೋಡಲು ಪ್ರೇಕ್ಷಕರು ಸಹ ಕಾತರರಾಗಿದ್ದಾರೆ. ಅಂದಹಾಗೆ ಈ ಧಾರಾವಾಹಿ ಸ್ಟಾರ್ ಪ್ಲಾಸ್ ನಲ್ಲಿ ಪ್ರಸಾರವಾಗುತ್ತಿದೆ. ವಿರಾಟ್ ಮತ್ತು ಸಾಯಿ ಪ್ರೇಮಕಥೆಯ ಧಾರಾವಾಹಿ ಎಲ್ಲರ ಮನಗೆದ್ದಿದೆ. ಇದೀಗ ರೇಖಾ ಎಂಟ್ರಿಯಿಂದ ಮತ್ತಷ್ಟು ರೋಚಕವಾಗಿರಲಿದೆ ಎನ್ನುವುದು ಗೊತ್ತಾಗುತ್ತಿದೆ.

  ಅಂದಹಾಗೆ ಈ ಧಾರಾವಾಹಿಯಲ್ಲಿ ಹಿಂದಿ ಕಿರುತೆರೆ ಲೋಕದಲ್ಲಿ ಪ್ರಸಿದ್ಧ ಪಡೆದಿರುವ ಆಯೇಷಾ ಸಿಂಗ್, ನೀಲ್ ಭಟ್, ಐಶ್ವರ್ಯ ಶರ್ಮಾ ನಟಿಸುತ್ತಿದ್ದಾರೆ. ಇನ್ನು ಪೋಷಕ ಪಾತ್ರದಲ್ಲಿ ಕಿಶೋರ್ ಸಹನೆ, ಯೋಗೇಂದ್ರ ವಿಕ್ರಮ್ ಭಾರತಿ ಪಟೇಲ್ ಸೇರಿದಂತೆ ದೊಡ್ಡ ತಾರಾಬಳಗವಿದೆ. ಇಡೀ ಧಾರಾವಾಹಿ ತಂಡ ರೇಖಾ ಎಂಟ್ರಿಯಿಂದ ಸಖತ್ ಸಂತೋಷಗೊಂಡಿದೆ.

  ನಟಿ ರೇಖಾಗೆ ಕಿರುತೆರೆ ಏನು ಹೊಸದಲ್ಲ. ಆಗಾಗ ಕಿರುತೆರೆಯ ಪ್ರಮುಖ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಆಯ್ಕೆ ಮಾಡಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ರೇಖಾ ಇತ್ತೀಚಿಗೆ ಇಂಡಿಯನ್ ಐಡಲ್ ಗಾಯನ ಸ್ಪರ್ಧಿಯಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಸ್ಪರ್ಧಿಗಳ ಗಾಯನಕ್ಕೆ ರೇಖಾ ಫಿದಾ ಆಗಿದ್ದರು.

  ಇನ್ನು ಸ್ಟಾರ್ ನಟಿಯರ ಬಳಿ ಧಾರಾವಾಹಿ ಪ್ರಮೋಷನ್ ಮಾಡಿಸುವುದು ಹೊಸದಲ್ಲ. ಅನೇಕರು ಸ್ಟಾರ್ ಕಲಾವಿದರು ಧಾರಾವಾಹಿ ಪ್ರೋಮೋಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಹೆಚ್ಚು ಕುತೂಹಲ ಮೂಡಿಸುತ್ತಾರೆ. ಇತ್ತೀಚಿಗೆ ಉಪ್ಪೇನಾ ಸಿನಿಮಾದ ನಟಿ ಕೃತಿ ಶೆಟ್ಟಿ ಕೂಡ ಧಾರಾವಾಹಿ ಪ್ರಮೋಷನ್ ನಲ್ಲಿ ಕಾಣಿಸಿಕೊಂಡಿದ್ದರು. ತೆಲುಗಿನ ಹೊಸ ಧಾರಾವಾಹಿ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದ ಕೃತಿ ಶೆಟ್ಟಿ ಪ್ರಮೋಷನ್ ಗಾಗಿ ಬರೋಬ್ಬರಿ 1 ಕೋಟಿ ರೂ. ಸಂಭಾವನೆ ಜೇಬಿಗೆ ಇಳಿಸಿದ್ದರು ಎನ್ನುವ ಸುದ್ದಿ ಕೇಳಿಬಂದಿದೆ.

  English summary
  Bollywood Legend Actress Rekha charges 5 crore for Ghum Hai Kisikey Pyaar Meiin serial promo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X