»   » ದೇವಿ ಪಾತ್ರದ ರಹಸ್ಯ ಬಿಚ್ಚಿಟ್ಟ ಕಲಾವಿದೆ ಶ್ರುತಿ ನಾಯ್ಡು

ದೇವಿ ಪಾತ್ರದ ರಹಸ್ಯ ಬಿಚ್ಚಿಟ್ಟ ಕಲಾವಿದೆ ಶ್ರುತಿ ನಾಯ್ಡು

Posted By:
Subscribe to Filmibeat Kannada
<ul id="pagination-digg"><li class="next"><a href="/tv/zee-kannada-serial-devi-shruti-naidu-yakshagana-role-068703.html">Next »</a></li></ul>
Shruti Naidu
ಮೊದಲಬಾರಿಗೆ ಧಾರಾವಾಹಿಯೊಂದರಲ್ಲಿ ಯಕ್ಷಗಾನದ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿ ಶ್ರುತಿ ನಾಯ್ಡು. ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ದೇವಿ' ಧಾರಾವಾಹಿಯ ನಿರ್ಮಾಪಕಿಯೂ ಆಗಿರುವ ಶ್ರುತಿ ನಾಯ್ಡು, ಯಕ್ಷಗಾನದ ಅಪರೂಪದ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ವಿಶೇಷ ಸಂಚಿಕೆ ಇಂದು ರಾತ್ರಿ 9.30ಕ್ಕೆ (08 ಅಕ್ಟೋಬರ್ 2012) ಪ್ರಸಾರವಾಗಲಿದೆ.

ಈ ಕುರಿತು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿರುವ ಶ್ರುತಿ ನಾಯ್ಡು, "ನಾನು ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದು ಅಂದುಕೊಂಡಿರಲೇ ಇಲ್ಲ. ನಮ್ಮ ದೇವಿ ಧಾರಾವಾಹಿಯಲ್ಲಿ ಪಾತ್ರಧಾರಿಯೊಬ್ಬರು ತೆಂಕತಿಟ್ಟು ಯಕ್ಷಗಾನದ ಹತ್ತು ಕೈ ಹೊಂದಿರುವ ದೇವಿಯ ಅವತಾರದ ವಿಶಿಷ್ಟ ರೂಪದಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆ ಪಾತ್ರವನ್ನು ಮಾಡಲು ಜನ್ನ ಪಾತ್ರಧಾರಿ ರಜನಿಕಾಂತ್ ಸಿದ್ಧರಿದ್ದರು. ಆದರೆ ನಾನು ಆ ಅಪರೂಪದ ಪಾತ್ರವನ್ನು ಮಾಡಿದರೆ ಹೇಗೆ ಎಂಬ ಯೋಚನೆ ಬಂತು.

ಅದಕ್ಕೆ ಕಾರಣ, ನನ್ನ ವೃತ್ತಿಜೀವನದಲ್ಲಿ ನನಗೆ ಇಂಥ ಒಂದು ಅಪರೂಪದ ಪಾತ್ರ ಮಾಡುವ ಅವಕಾಶ ಲಭಿಸಿರಲಿಲ್ಲ. ನನಗೆ ಯಾಕ್ಷಗಾನದ ಬಗ್ಗೆ ಕೇಳಿ ಗೊತ್ತಿತ್ತೇ ಹೊರತೂ ಆ ಪಾತ್ರವನ್ನು ಮಾಡಿ ಗೊತ್ತಿರಲಿಲ್ಲ. ಈಗ ಆ ಪಾತ್ರವೇ ಎದುರಿಗೆ ಬಂದು ನಿಂತಿರುವಾಗ ಬಿಡಲೇಬಾರದು ಎನಿಸಿತು. ಆದರೆ ಅದನ್ನು ನಾನು ಕಲಿತು ಮಾಡಬೇಕಿತ್ತು. ಆ ಚಾಲೆಂಜ್ ತೆಗೆದುಕೊಳ್ಳಲು ರೆಡಿಯಾದೆ.

ಯಕ್ಷಗಾನ ಬಲ್ಲವರಿಂದ ಅದನ್ನು ಕಲಿತು ಮಾಡುವಾಗ ನಾನು ಪಟ್ಟ ಇಷ್ಟ-ಕಷ್ಟ, ಅಚ್ಚರಿ ಹಾಗೂ ಪಡೆದ ಆ ಅನುಭವಗಳು ನನಗೆ ತುಂಬಾ ಥ್ರಿಲ್ ನೀಡಿವೆ. ಆ ಪಾತ್ರದ ರಿಹರ್ಸಲ್ ಮಾಡುವಾಗ ಕಾಸ್ಟ್ಯೂಮ್ ಇರಲಿಲ್ಲ. ಆದರೆ ಕ್ಯಾಮರಾ ಮುಂದೆ ಮಾಡುವಾಗ ಆ ಪಾತ್ರಕ್ಕ ಸಂಬಂಧಿಸಿದಂತೆ ಹಾಕಲಾದ ಕಾಸ್ಟ್ಯೂಮ್, ತಲೆ ಮೇಲಿನ ಕಿರೀಟ ಹಾಗೂ ಬಟ್ಟೆಗಳನ್ನು ಕಟ್ಟಲು ಬಳಸಿದ ದಾರಗಳಿಂದ ನಾನು ಅಕ್ಷರಶಃ ನಡುಗಿಹೋದೆ.

ನನ್ನ ಜೀವಮಾನದಲ್ಲಿ ನಾನು ಎಂದೂ ಅಂತಹ ಬಟ್ಟೆ ಧರಿಸಿರಲಿಲ್ಲ. ಕಿರೀಟವನ್ನಂತೂ ಕೇಳಲೇಬೇಡಿ. ಬಟ್ಟೆಗೆ ಕಟ್ಟಿದ್ದ ದಾರವಂತೂ ಬಿಗಿಯಾಗಿ ತುಂಬಾ ಕಷ್ಟವೆನಿಸುತ್ತಿತ್ತು. ಆದರೂ ನಾನು ಧೈರ್ಯಗುಂದಲಿಲ್ಲ. ಕಾರಣ ಜೀವನದಲ್ಲಿ ಇಂತಹ ಪಾತ್ರ ನನಗೆ ಮತ್ತೆ ದೊರಕುತ್ತೋ ಇಲ್ಲವೋ! ಹೀಗಾಗಿ ಎಷ್ಟೇ ಕಷ್ಟವಾದರೂ ಮಾಡಿದೆ. ಪಾತ್ರ ಚೆನ್ನಾಗಿ ಮೂಡಿಬಂದಿದೆ ಎಂಬುದು ಧಾರಾವಾಹಿ ತಂಡದ ಎಲ್ಲರ ಅಭಿಪ್ರಾಯವಾಗಿದೆ.

ತೆಂಕತಿಟ್ಟು ಯಕ್ಷಗಾನದ ಹತ್ತು ಕೈ ಹೊಂದಿರುವ ದೇವಿಯ ಅವತಾರದ ವಿಶಿಷ್ಟ ಪಾತ್ರದಲ್ಲಿ ನಾನು ಅಭಿನಯಿಸಿರುವ ಈ ವಿಶೇಷ ಸಂಚಿಕೆ ಇಂದು (08 ಅಕ್ಟೋಬರ್ 2012) ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಈ ಪಾತ್ರದ ನನ್ನ ಅಭಿಪ್ರಾಯಕ್ಕೆ ಪ್ರೇಕ್ಷಕರು ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲದಲ್ಲಿದ್ದೇನೆ. ವೃತ್ತಿಜೀವನದಲ್ಲಿ ನಾನು ಮಾಡಿದ ಈ ಅವಿಸ್ಮರಣೀಯ ಪಾತ್ರವನ್ನು ನಾನು ಎಂದಿಗೂ ಮರೆಯಲಾರೆ" ಎಂದಿದ್ದಾರೆ ಶ್ರುತಿ ನಾಯ್ಡು.

ದೇವಿ ಧಾರಾವಾಹಿಯ ಕಥಾ ಹಂದರ ತಿಳಿಯಲು ಮುಂದಿನ ಪುಟ ನೋಡಿ...

<ul id="pagination-digg"><li class="next"><a href="/tv/zee-kannada-serial-devi-shruti-naidu-yakshagana-role-068703.html">Next »</a></li></ul>
English summary
Actress Shruti Naidu acted in a Special Role for Serial 'Devi' in her Carrer. She told that it is the different role she acted ever and she experienced very thrilled. This special episode of 'Devi' serial telecasts Today (08 October 2012) on Zee Kannada at 9.30 PM. &#13; &#13;
Please Wait while comments are loading...