»   »  ರಮ್ಯಾಗೆ 'ಗಾಂಚಲಿ' ಎಂದ ನಟಿ ತೇಜಸ್ವಿನಿ ವಿರುದ್ಧ ಮಹಾಯುದ್ಧ

ರಮ್ಯಾಗೆ 'ಗಾಂಚಲಿ' ಎಂದ ನಟಿ ತೇಜಸ್ವಿನಿ ವಿರುದ್ಧ ಮಹಾಯುದ್ಧ

Posted By:
Subscribe to Filmibeat Kannada

ಅದ್ಯಾಕೋ ಗೊತ್ತಿಲ್ಲ, ಇತ್ತೀಚೆಗೆ ಸ್ಟಾರ್ ನಟ-ನಟಿಯರ ಹೆಸ್ರು ಹೇಳಿ ವಿವಾದವನ್ನ ಮೈಮೇಲೆ ಎಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಖಾಸಗಿ ವಾಹಿನಿಯ ಟಾಕ್ ಶೋ ಒಂದರಲ್ಲಿ 'ಬಿಗ್ ಬಾಸ್' ಸಂಜನಾ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ 'ಬಿಲ್ಡಪ್' ಎಂದು ಕಾಮೆಂಟ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಮಹಾ ಯುದ್ಧವನ್ನೇ ಸೃಷ್ಟಿಸಿದ್ದರು.

ಇದನ್ನೇ ಇನ್ನು ಮರೆತಿಲ್ಲ. ಅಷ್ಟರಲ್ಲಾಗಲೇ 'ರಮ್ಯಾಗೆ ಗಾಂಚಲಿ ಇದೆ' ಎಂದು ಹೇಳುವ ಮೂಲಕ ನಟಿ ತೇಜಸ್ವಿನಿ ರಮ್ಯಾ ಅಭಿಮಾನಿಗಳನ್ನ ಕೆಣಕಿದ್ದಾರೆ. ಈ ಹೇಳಿಕೆಯನ್ನ ಗಮನಿಸಿದ ರಮ್ಯಾ ಫ್ಯಾನ್ಸ್ ತೇಜಸ್ವಿನಿಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.

ರಶ್ಮಿಕಾ ಮಂದಣ್ಣ ಅವರ 'ಮಿಸ್ಟರ್ ಶೋ ಆಫ್ ವಿವಾದ' ಮತ್ತು 'ಬಿಗ್ ಬಾಸ್' ಸಂಜನಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಕಾಮೆಂಟ್ ನಿಂದ ಆದ ಸಂಘರ್ಷದ ಬಗ್ಗೆ ಗೊತ್ತಿದ್ದರೂ ತೇಜಸ್ವಿನಿ ಈ ರೀತಿ ಕಾಮೆಂಟ್ ಮಾಡಿರುವುದು ರಮ್ಯಾ ಅಭಿಮಾನಿಗಳನ್ನ ಪೂರ್ತಿಯಾಗಿ ಕೆರಳಿಸಿದೆ. ಸಂಪೂರ್ಣ ವರದಿ ಫೋಟೋ ಸ್ಲೈಡ್ ಗಳಲ್ಲಿ....

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ತೇಜಸ್ವಿನಿ

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ನಟಿ ತೇಜಸ್ವಿನಿ ಭಾಗವಹಿಸಿದ್ದರು. ಅವರೊಂದಿಗೆ 'ಅಗ್ನಿಸಾಕ್ಷಿ' ಖ್ಯಾತಿಯ ವೈಷ್ಣವಿ ಮತ್ತು 'ನಾಗಿಣಿ' ಖ್ಯಾತಿ ದಿಪೀಕಾ ದಾಸ್ ಕೂಡ ಪಾಲ್ಗೊಂಡಿದ್ದರು.

Rapid Fireನಲ್ಲಿ ಅಕುಲ್ ಪ್ರಶ್ನೆ

ಕಾರ್ಯಕ್ರಮದ ಕೊನೆಯಲ್ಲಿ ನಿರೂಪಕ ಅಕುಲ್ ಬಾಲಾಜಿ Rapid Fire ರೌಂಡ್ ಗೆ ಚಾಲನೆ ನೀಡಿದರು. ಈ ವೇಳೆ ''ಒಂದು ದಿನ ಬೆಳಿಗ್ಗೆ ಎದ್ದಾಗ ನೀವು ಇವರಾಗಿದ್ದರೇ ಏನ್ಮಾಡ್ತೀರಾ? ರಮ್ಯಾ...ನೆನಪಿರಲಿ ಪ್ರೇಮ್...ದರ್ಶನ್....ಸುದೀಪ್.....ಪುನೀತ್ ರಾಜ್ ಕುಮಾರ್....ಎಂದು ಕೇಳಿದರು.

ತೇಜಸ್ವಿನಿ ಉತ್ತರ

ಮೊದಲ ಹೆಸರು ರಮ್ಯಾ ಎಂದಾಕ್ಷಣ....''ಸ್ವಲ್ಪ ಗಾಂಚಲಿ ಕಡಿಮೆ ಮಾಡ್ಕೊಳ್ತಿನಿ'' ಎಂದು ಉತ್ತರಿಸಿದ್ದಾರೆ. ಇದು ರಮ್ಯಾ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ರಮ್ಯಾ ಅಭಿಮಾನಿಗಳನ್ನ ಕೆರಳಿಸಿದ ಹೇಳಿಕೆ

ಒಂದು ದಿನ ರಮ್ಯಾ ಅವರಾದರೇ ''ಗಾಂಚಲಿ ಕಡಿಮೆ ಮಾಡಿಕೊಳ್ಳುತ್ತೇನೆ'' ಎಂದು ಹೇಳುವ ಮೂಲಕ ರಮ್ಯಾ ಅವರಿಗೆ ಗಾಂಚಲಿ ಇದೆ ಎಂದು ಅರ್ಥೈಸಿದ್ದಾರೆ. ಹೀಗಾಗಿ, ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಫ್ಯಾನ್ಸ್ ತೇಜಸ್ವಿನಿ ವಿರುದ್ಧ ಸಮರ ಸಾರಿದ್ದಾರೆ.

ತೇಜಸ್ವಿನಿ ವಿರುದ್ಧ ಟೀಕಾಪ್ರಹಾರ

ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರೂ, ಒಂದೊಳ್ಳೆ ಅವಕಾಶಗಳಿಲ್ಲದಿರುವ ನಟಿ ತೇಜಸ್ವಿನಿ ವಿರುದ್ಧ ರಮ್ಯಾ ಅವರ ಫ್ಯಾನ್ಸ್, ಫೇಸ್ ಬುಕ್ ಹಾಗೂ ಟ್ವಿಟ್ಟರ್ ಟೀಕಾಪ್ರಹಾರ ನಡೆಸುತ್ತಿದ್ದಾರೆ. ತೇಜಸ್ವಿನಿ ಅವರ ಫೋಟೋ ಹಾಕಿ ಟ್ರೀಲ್ ಮಾಡ್ತಿದ್ದಾರೆ.

ಚಿತ್ರಕೃಪೆ: ಡ್ರೋಲ್ ಹೈದ

ಅಭಿಮಾನಿಗಳ ನಡೆಗೆ ತೇಜಸ್ವಿನಿ ಪ್ರತಿಕ್ರಿಯೆ

ನನ್ನ ಮನಸ್ಸಿನಲ್ಲಿ ಏನೂ ಇಲ್ಲವಾದರೂ ನೀವುಗಳೇ ಎಲ್ಲವನ್ನ ಬೆಳಸಿಬೀಡುತ್ತೀರಾ. ರಮ್ಯಾ ಅವರ ಬಗ್ಗೆ ನನಗೆ ಎಷ್ಟು ಗೌರವ, ಅಭಿಮಾನವಿದೆ ಎಂಬುದು ನಿಮಗೆ ಗೊತ್ತಾ....? ಎಂದು ಪ್ರತಿಕ್ರಿಯಿಸಿದ್ದಾರೆ.

ಕ್ಷಮೆ ಕೇಳಿದ ತೇಜಸ್ವಿನಿ

ಐ ಯಾಮ್ ಸಾರಿ ರಮ್ಯಾ. ನನಗೆ ಈ ರೀತಿ ಫೇಮಸ್ ಆಗ್ಬೇಕು ಎಂಬ ಆಸೆ ಇಲ್ಲ. ಶೋನಲ್ಲಿ ಹೇಳಿದ್ದು ನಿಮಗೆ ಇಷ್ಟೊಂದು ನೋವು ಉಂಟುಮಾಡುತ್ತೆ ಎಂಬುದು ಗೊತ್ತಿರಲಿಲ್ಲ.

ವಿವಾದಕ್ಕೆ ಅಂತ್ಯವಾಡಿದ ರಮ್ಯಾ ಫ್ಯಾನ್ಸ್

ನಟಿ ತೇಜಸ್ವಿನಿ ಅವರು ರಮ್ಯಾ ಅವರಿಗೆ ಕ್ಷಮೆ ಕೇಳಿದ ನಂತರ ರಮ್ಯಾ ಅಭಿಮಾನಿಗಳು ಸಮಾಧಾನಗೊಂಡಿದ್ದಾರೆ. ತೇಜಸ್ವಿನಿ ವಿರುದ್ಧ ಸಮರ ಸಾರಿದ್ದ ಫ್ಯಾನ್ಸ್ ತಣ್ಣಗಾಗಿದ್ದಾರೆ.

English summary
Actress Tejaswini said to Ramya is have Ganchali in Colors Super Channel Popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada