For Quick Alerts
  ALLOW NOTIFICATIONS  
  For Daily Alerts

  ಏಳು ವರ್ಷಕ್ಕೆ 15 ಕೋಟಿ ಗಳಿಸಿದ್ದ ನಟಿ ತುನಿಶಾ ಕಂಡಳು ದುರಂತ ಅಂತ್ಯ!'

  By ಫಿಲ್ಮಿಬೀಟ್ ಡೆಸ್ಕ್
  |

  ಚಿತ್ರೀಕರಣ ನಡೆಯುತ್ತಿದ್ದ ಸೆಟ್‌ನಲ್ಲಿಯೇ ಆತ್ಮಹತ್ಯೆಗೆ ಶರಣಾದ ನಟಿ ತುನಿಶಾ ಶರ್ಮಾ ಬಗ್ಗೆ ಹಲವು ವಿಷಯಗಳು ತನಿಖೆಯ ಹಂತದಲ್ಲಿ ಬೆಳಕಿಗೆ ಬರುತ್ತಿವೆ.

  ಕೇವಲ 20 ವರ್ಷದ ನಟಿ ತುನಿಶಾ ಶರ್ಮಾ, ಡಿಸೆಂಬರ್ 24 ರಂದು ಮುಂಬೈನಲ್ಲಿ ನಡೆಯುತ್ತಿದ್ದ ತಮ್ಮದೆ ಧಾರಾವಾಹಿಯ ಶೂಟಿಂಗ್‌ ಸೆಟ್‌ನ ಮೇಕಪ್‌ ರೂಂನ ಶೌಚಾಲಯದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.

  ತುನಿಶಾಳ ತಾಯಿ, ಮಗಳ ಸಾವಿಗೆ ಆಕೆಯ ಬಾಯ್‌ಫ್ರೆಂಡ್ ಶೀಜಾನ್ ಮೊಹಮ್ಮದ್ ಕಾರಣ ಎಂದು ಆರೋಪಿಸಿ ದೂರು ನೀಡಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ತುನಿಶಾ ಹಾಗೂ ಶೀಜಾನ್ ಪ್ರೀತಿಯಲ್ಲಿದ್ದು, ಇತ್ತೀಚೆಗಷ್ಟೆ ಇಬ್ಬರೂ ಬ್ರೇಕಪ್‌ ಮಾಡಿಕೊಂಡಿದ್ದರು ಎನ್ನಲಾಗುತ್ತಿದೆ.

  ಆದರೆ ಇದೀಗ ತುನಿಶಾ ಬಗ್ಗೆ ಇನ್ನೊಂದು ಆಸಕ್ತಿಕರ ವಿಷಯ ಬಹಿರಂಗವಾಗಿದ್ದು, ತುನಿಶಾ ಕೇವಲ ಏಳು ವರ್ಷಗಳಲ್ಲಿ ಸುಮಾರು ಹದಿನೈದು ಕೋಟಿ ಆಸ್ತಿ ಸಂಪಾದನೆ ಮಾಡಿದ್ದರಂತೆ!

  ತಮ್ಮ ಹದಿಮೂರನೇ ವಯಸ್ಸಿಗೆ ನಟನೆ ಆರಂಭಿಸಿದ ನಟಿ ತುನಿಶಾ ಶರ್ಮಾ, ಕೇವಲ ಏಳು ವರ್ಷಗಳಲ್ಲಿ ಸುಮಾರು ಹದಿನೈದು ಕೋಟಿ ಆಸ್ತಿಯನ್ನು ಸಂಪಾದಿಸಿದ್ದರು. ಆ ಎಲ್ಲ ಆಸ್ತಿ ಈಗ ತುನಿಶಾರ ತಾಯಿಯ ಪಾಲಾಗಲಿದೆ.

  ನಟನೆ ಆರಂಭಿಸಿದಾಗಿನಿಂದಲೂ ತುನಿಶಾ ಬಹಳ ಬ್ಯುಸಿಯಾಗಿಯೇ ಇದ್ದರು. ಆರಂಭದಲ್ಲಿಯೇ ಹಲವು ಸಿನಿಮಾಗಳು, ಮ್ಯೂಸಿಲ್ ಆಲ್ಬಂ, ಟಿವಿ ಶೋಗಳು, ರಿಯಾಲಿಟಿ ಶೋಗಳು ಹಾಗೂ ಧಾರಾವಾಹಿಗಳು ನಟಿಗೆ ದೊರೆತಿದ್ದವು. ಕಳೆದ ಏಳು ವರ್ಷಗಳಲ್ಲಿ ಬಿಡುವಿಲ್ಲದೆ ನಟಿ ದುಡಿದಿದ್ದರು. ಹಾಗೂ ದುಡಿದ ಹಣವನ್ನು ಮ್ಯಾನೇಜರ್ ಸಹಾಯದಿಂದ ಕೆಲವು ಕಡೆಗಳಲ್ಲಿ ಹೂಡಿಕೆ ಸಹ ಮಾಡಿದ್ದರು ಹಾಗಾಗಿ ಅವರು ಕಡಿಮೆ ವಯಸ್ಸಿಗೆ ದೊಡ್ಡ ಮೊತ್ತದ ಹಣ ಉಳಿಸಲು ಸಾಧ್ಯವಾಗಿದೆ ಎನ್ನಲಾಗುತ್ತಿದೆ.

  ಪ್ರೀತಿಯಲ್ಲಿದ್ದ ತುನಿಶಾ ಹಾಗೂ ಶೀಜಾನ್ ಮೊಹಮ್ಮದ್ ಇತ್ತೀಚೆಗಷ್ಟೆ ಬ್ರೇಕ್‌ಅಪ್ ಮಾಡಿಕೊಂಡಿದ್ದರು. ಇದರಿಂದ ತೀವ್ರ ಘಾಸಿಗೊಳಗಾಗಿದ್ದ ತುನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

  ಪೊಲೀಸರು ಶೀಜಾನ್ ಅನ್ನು ಬಂಧಿಸಿ ವಿಚಾರಣೆ ನಡೆಸಿದ್ದು, ತುನಿಶಾಗೂ ತಮಗೆ ವಯಸ್ಸಿನ ಅಂತರ ಹಾಗೂ ಇನ್ನಿತರೆ ಕಾರಣಗಳಿಗೆ ಭಿನ್ನಾಭಿಪ್ರಾಯವಿತ್ತೆಂದು ಹಾಗಾಗಿಯೇ ಬ್ರೇಕ್‌ ಅಪ್ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಅಲ್ಲದೆ, ಈ ಹಿಂದೆಯೂ ಒಮ್ಮೆ ತುನಿಶಾ ಆತ್ಮಹತ್ಯೆಗೆ ಯತ್ನಿಸಿದ್ದರು ಆಗ ನಾನೇ ಆಕೆಯನ್ನು ರಕ್ಷಿಸಿದ್ದೆ, ಮಾಹಿತಿಯನ್ನು ಆಕೆಯ ತಾಯಿಗೂ ನೀಡಿದ್ದೆ ಎಂದಿದ್ದಾರೆ.

  ಆದರೆ ತುನಿಶಾರ ತಾಯಿ ಹಾಗೂ ಆಕೆಯ ಸಹೋದರ ಶೀಜಾನ್‌ ವಿರುದ್ಧ ಆರೋಪಗಳನ್ನು ಮಾಡಿದ್ದು, ಧರ್ಮದ ಕಾರಣಕ್ಕೆ ಶೀಜಾನ್‌ ಹಾಗೂ ತುನಿಶಾಗೆ ಜಗಳವಾಗಿತ್ತೆಂದು, ಶೀಜಾನ್ ಅನ್ನು ಪ್ರೀತಿಸಿದ ಬಳಿಕ ತುನಿಶಾ ಬುರ್ಖಾ ಧರಿಸಿ ಓಡಾಡುತ್ತಿದ್ದಳೆಂದು ಆರೋಪಿಸಿದ್ದಾರೆ. ಪ್ರಸ್ತುತ ಶೀಜಾನ್, ಪೊಲೀಸರ ವಶದಲ್ಲಿದ್ದು ತನಿಖೆ ಜಾರಿಯಲ್ಲಿದೆ.

  English summary
  Actress Tunisha Sharma earned nearly 15 crore rs in just few years. She ended her life on December 24.
  Friday, December 30, 2022, 15:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X