twitter
    For Quick Alerts
    ALLOW NOTIFICATIONS  
    For Daily Alerts

    ಎಲ್ಲಾ ಪಾತ್ರಕ್ಕೂ ಸೈ ಎನ್ನುವ ಹಿರಿಯ ನಟಿ ವಿನಯಪ್ರಸಾದ್ ಜನ್ಮ ದಿನ; ಇಲ್ಲಿದೆ ಅವರ ನಟನಾ ಜರ್ನಿ

    By ಪ್ರಿಯಾ ದೊರೆ
    |

    ಕಳೆದ ಮೂವತ್ತಕ್ಕೂ ಹೆಚ್ಚು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಹಿರಿಯ ನಟಿ ವಿನಯಾಪ್ರಸಾದ್ ಅವರು, ಇಂದಿಗೂ ಅಂದಿನಂತೆಯೇ ಚಾರ್ಮಿಂಗ್ ಆಗಿದ್ದಾರೆ. ಸಿನಿಮಾ ರಂಗದಲ್ಲಿ ಮೂರು ದಶಕಗಳ ಕಾಲ ನಟಿಸಿ ಸೈ ಎನಿಸಿಕೊಂಡ ವಿನಯಾ ಪ್ರಸಾದ್ ಅವರು ಈಗ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ.

    ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಛಾಪನ್ನು ಮೂಡಿಸಿದ್ದಾರೆ. ವಿನಯಾ ಪ್ರಸಾದ್ ಅವರು ದಕ್ಷಿಣ ಭಾರತ ಚಿತ್ರರಂಗದ ಪ್ರತಿಭಾನ್ವಿತ ನಟಿ. ಧಾರಾವಾಹಿಗಳಲ್ಲೂ ಅಭಿನಯಿಸುವ ಮೂಲಕ ಪರಭಾಷೆಯಲ್ಲೂ ವಿನಯಾ ಪ್ರಸಾದ್ ತಮ್ಮ ನಟನಾ ಕಂಪನ್ನು ಪಸರಿಸಿದ್ದಾರೆ.

    ಕಿರುತೆರೆಯಲ್ಲಿ ಪ್ರೀತಿಯ ಅಖಿಲಾಂಡೇಶ್ವರಿ ಆಗಿರುವ ವಿನಯಾ ಪ್ರಸಾದ್ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ನಟನೆ ಜೊತೆಗೆ ಕಾರ್ಯಕ್ರಮಗಳ ನಿರೂಪಣೆಯನ್ನು ಕೂಡಾ ಮಾಡಿದ್ದಾರೆ. ಅಷ್ಟೇ ಅಲ್ಲದೇ, ಹಾಡನ್ನು ಕೂಡ ಹಾಡುತ್ತಾರೆ.

    ಹಿಂದಿರುಗಿ ನೋಡದ ನಟಿ

    ಹಿಂದಿರುಗಿ ನೋಡದ ನಟಿ

    ಜಿ ವಿ ಅಯ್ಯರ್ ನಿರ್ದೇಶನದ ಮಧ್ವಾಚಾರ್ಯ ಸಿನಿಮಾ ಮೂಲಕ ನಟಿ ವಿನಯಾ ಪ್ರಸಾದ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮತ್ತೆ ಹಿಂತಿರುಗಿ ನೋಡದ ವಿನಯಾ ಪ್ರಸಾದ್ ಅವರು ಒಂದಾದ ಮೇಲೆ ಒಂದು ಸಿನಿಮಾಗಳಲ್ಲಿ ನಟಿಸಿದರು. ನೀನು ನಕ್ಕರೆ ಹಾಲು ಸಕ್ಕರೆ, ಕಾಲೇಜ್ ಹೀರೋ, ಗಣೇಶನ ಮದುವೆ, ಪೊಲೀಸನ ಹೆಂಡ್ತಿ, ಗೌರಿ ಗಣೇಶ, ಯಾರಿಗೂ ಹೇಳ್ಬೇಡಿ, ಮೈಸೂರು ಜಾಣ, ಸೂರ್ಯೋದಯ, ಮುತ್ತಿನಂಥ ಹೆಂಡತಿ, ಕಲ್ಯಾಣೋತ್ಸವ, ಶ್ವೇತಾಗ್ನಿ, ಕಿಲಾಡಿ ಗಂಡು, ಮೈಸೂರ್ ಜಾಣ, ಪೊಲೀಸ್ ಲಾಕಪ್, ಮಿಡಿದ ಶೃತಿ, ಗುಂಡನ ಮದುವೆ, ಮಹಾ ಎಡಬಿಡಂಗಿ, ದಾಕ್ಷಾಯಿಣಿ, ಭವ್ಯ ಭಾರತ, ಯಾರಿಗೂ ಹೇಳಬೇಡಿ, ಕರುಳಿನ ಕೂಗು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗಲೂ ಸಿನಿಮಾ ಹಾಗೂ ಧಾರಾವಾಹಿಗಳಿಗೆ ಬಣ್ಣ ಹಚ್ಚುತ್ತಿದ್ದಾರೆ.

    ಪಾರು ಧಾರಾವಾಹಿಯಲ್ಲಿ ನಟನೆ

    ಪಾರು ಧಾರಾವಾಹಿಯಲ್ಲಿ ನಟನೆ

    ಬೆಳ್ಳಿತೆರೆಗೆ ಕಾಲಿಟ್ಟ ವಿನಯಾ ಪ್ರಸಾದ್ ಅವರು ಕನ್ನಡದ ಖ್ಯಾತ ಹಿರಿಯ ನಟಿಯರಲ್ಲಿ ಒಬ್ಬರು. ಸಾವಿತ್ರಿ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ವಿನಯಾ ಪ್ರಸಾದ್ ಅವರು ಮುಂದೆ ಶಕ್ತಿ, ಅನುಪಮಾ, ಬಂಗಾರ, ಸ್ತ್ರೀ, ನಂದ ಗೋಕುಲ, ನಿತ್ಯೋತ್ಸವ, ಸುಂದರಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೆ ಮಲಯಾಳಂನಲ್ಲೂ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಪಾರು ಧಾರಾವಾಹಿಯಲ್ಲಿ ಅಖಿಲಾಂಡೇಶ್ವರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ನಟಿಸುತ್ತಲೇ ಸಿನಿಮಾಗಳಲ್ಲೂ ಕಾಣಿಸಿಕೊಳ್ಳುತ್ತಿರುವ ವಿನಯಾ ಪ್ರಸಾದ್ ಅವರು 50 ವರ್ಷ ವಯಸ್ಸು ದಾಟಿದರೂ ಆಕ್ಟೀವ್ ಆಗಿದ್ದಾರೆ.

    ವಿಜಯಾನಂದ ಚಿತ್ರದಲ್ಲೂ ಅಭಿನಯ

    ವಿಜಯಾನಂದ ಚಿತ್ರದಲ್ಲೂ ಅಭಿನಯ

    ವಿನಯಾ ಪ್ರಸಾದ್ ಅವರು ಅತ್ತ್ಯುತ್ತಮ ನಟಿ ಹಾಗೂ ಅತ್ತ್ಯುತ್ತಮ ಪೋಷಕ ನಟಿ ಎಂದು ಕರ್ನಾಟಕ ಚಲನಚಿತ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆತಂಕ ಹಾಗೂ ಬಣ್ಣದ ಹೆಜ್ಜೆಗಳು ಚಿತ್ರದಲ್ಲಿನ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೆಲ ದಿನಗಳ ಹಿಂದಷ್ಟೇ ವಿನಯಾ ಪ್ರಸಾದ್ ಅವರು ನಟಿಸಿದ್ದ ಎರಡು ಮಲಯಾಳಂ ಚಿತ್ರಗಳು ರಿಲೀಸ್ ಆಗಿದ್ದವು. ಇನ್ನು ವಿನಯಾಪ್ರಸಾದ್ ನಟಿಸಿರುವ ವಿಜಯಾನಂದ ಚಿತ್ರ ತೆರೆ ಮೇಲೆ ಅಪ್ಪಳಿಸಲು ಸಜ್ಜಾಗಿದೆ. ಅಷ್ಟರಲ್ಲಾಗಲೇ ಪ್ರೊಫೆಸರ್ ಪಾತ್ರದಲ್ಲಿ ಮೊತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ.

    ಪಾಸಿಟಿವಿಟಿಗೆ ಒತ್ತು ಕೊಡುವ ವಿನಯಾಪ್ರಸಾದ್

    ಪಾಸಿಟಿವಿಟಿಗೆ ಒತ್ತು ಕೊಡುವ ವಿನಯಾಪ್ರಸಾದ್

    50 ದಾಟಿದರೂ ಸಿನಿಮಾ, ಕಿರುತೆರೆ ಅಂತ ಬ್ಯುಸಿಯಾಗಿರುವ ವಿನಯಾಪ್ರಸಾದ್ ಅವರು ಒಂದಾದ ಮೇಲೆ ಒಂದು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 100ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ವಿನಯಾ ಪ್ರಸಾದ್ ಅವರು ಕಿರಿಯ ನಟರಿಗೆ ಸ್ಪೂರ್ತಿ ತುಂಬುತ್ತಾರೆ. ಎಲ್ಲರಿಗೂ ಸದಾ ಪಾಸಿಟಿವ್ ಆಗಿರುವಂತೆ ಸಲಹೆ ನೀಡುತ್ತಾರೆ. ಇನ್ನು ಇಂದು ವಿನಯಾಪ್ರಸಾದ್ ಅವರ ಹುಟ್ಟುಹಬ್ಬ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ವಿನಯಾಪ್ರಸಾದ್ ಅವರಿಗೆ ವಿಶ್ ಮಾಡಿ ಸಂಭ್ರಮಿಸಿದ್ದಾರೆ.

    English summary
    Actress Vinaya Prasad serial journey and her films. Know more
    Tuesday, November 22, 2022, 18:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X