Just In
Don't Miss!
- News
ಜೋ ಬೈಡನ್, ಕಮಲಾ ಹ್ಯಾರಿಸ್ಗೆ ಪ್ರಧಾನಿ ಮೋದಿ ಅಭಿನಂದನೆ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೊದಲ ಪತಿ ಜೊತೆಗಿನ ಅಸಮಾಧಾನದ ಬಗ್ಗೆ ಹೇಳಿಕೊಂಡ ವಿನಯ ಪ್ರಸಾದ್
ಕನ್ನಡ ಚಿತ್ರರಂಗದ ಖ್ಯಾತ ನಟಿ, ಪಂಚಭಾಷ ತಾರೆ ವಿನಯ ಪ್ರಸಾದ್ ಕನ್ನಡದಲ್ಲಿ ಸುಮಾರು 125ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಚಂದನವನದ ಈ ಸುಂದರ ನಟಿ ಪರಭಾಷೆಯಲ್ಲು ಮಿಂಚುತ್ತಿದ್ದಾರೆ. ಸಿನಿ ಜೀವನದ ಉತ್ತುಂಗಕ್ಕೆ ಏರಿರುವ ವಿನಯ ಪ್ರಸಾದ್ ವೈಯಕ್ತಿಕ ಜೀನವದಲ್ಲಿ ಅಷ್ಟೆ ಕಹಿ ಘಟನೆಗಳನ್ನು ಎದುರಿಸಿದ್ದಾರೆ.
ಸುಂದರ ಸಾಂಸಾರಿಕ ಜೀವನವನ್ನು ಬಹುಬೇಗನೆ ಕಳೆದುಕೊಂಡ ವಿನಯ ಪ್ರಸಾದ್ ದಃಖವನ್ನು ಎಲ್ಲಿಯೂ ಹೇಳಿಕೊಳ್ಳದೆ ನಗುತ್ತಲೆ ಜೀವನ ನಡೆಯುತ್ತಿದ್ದಾರೆ. ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. 1988ರಲ್ಲಿ ವಿ ಆರ್ ಕೆ ಪ್ರಸಾದ್ ಅವರನ್ನು ಕೈ ಹಿಡಿಯುತ್ತಾರೆ ವಿನಯಾ. ಇಬ್ಬರು ಒಬ್ಬರಿಗೊಬ್ಬರು ಇಷ್ಟಪಟ್ಟು ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ.
ವಿಡಿಯೋ : ಮಾತಿನಲ್ಲಿ ನಯ, ಹೆಸರಿಗೆ ತಕ್ಕ ವಿನಯ
ಆದ್ರೆ ದುರಾದೃಷ್ಟ ಅಂದ್ರೆ ಈ ದಾಂಪತ್ಯ ಜೀವನ ಅನೇಕ ವರ್ಷಗಳ ಕಾಲ ನಡೆಯಲಿಲ್ಲ. ಮದುವೆಯಾಗಿ ಕೆಲವೆ ವರ್ಷಗಳಲ್ಲಿ ಮೊದಲ ಪತಿಯನ್ನು ಕಳೆದುಕೊಳ್ಳುತ್ತಾರೆ ವಿನಯಾ ಪ್ರಸಾದ್. ತನ್ನನ್ನು ಅರ್ಥಮಾಡಿಕೊಂಡು ಜೀವನ ನಡೆಸುವ ಪತಿಬೇಕೆಂದು ಇಷ್ಟಪಟ್ಟು ಮದುವೆಯಾದ ವಿನಯಾ ಅವರ ಬಾಳಲ್ಲಿ ಬಿರುಗಾಳಿ ಎದ್ದು ಮೊದಲ ಪತಿಯನ್ನು ಕಳೆದುಕೊಳ್ಳುತ್ತಾರೆ.

ಮಧ್ವಾಚಾರ್ಯ ಸಿನಿಮಾದಲ್ಲಿ ಪ್ರಸಾದ್ ಪರಿಚಯ
ಮಧ್ವಾಚಾರ್ಯ ನಟಿ ವಿನಯ ಪ್ರಸಾದ್ ಅಭಿನಯದ ಮೊದಲ ಸಿನಿಮಾ. ಈ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಪರಿಚಯವಾದವರೇ ಮೊದಲ ಪತಿ ವೈಲಾಯ ಕೃಷ್ಣ ಪ್ರಸಾದ್. ಪ್ರಸಾದ್ ಉತ್ತಮ ಸಂಕಲನಕಾರ, ಸಹ ನಿರ್ದೇಶಕ ಮತ್ತು ನಿರ್ದೇಶಕರಾಗಿದ್ದವರು. ಮಧ್ವಾಚಾರ್ಯ ಸಿನಿಮಾ ನಂತರ ಮತ್ತೆ ಕಾಲೇಜು ವ್ಯಾಸಂಗ ಮುಗಿಸಿ ಒಂದು ವರ್ಷದ ಬಳಿಕ ಮತ್ತೆ ಸಿನಿರಂಗಕ್ಕೆ ಬಂದ ವಿನಯ ಅವರಿಗೆ ಪ್ರಸಾದ್ ಅವರ ಮೇಲೆ ಪ್ರೀತಿಯಾಗಿ ನಂತರ ಮದುವೆಯಾಗುತ್ತಾರೆ.
ಶಶಿಕುಮಾರ್ ಬದುಕಿನಲ್ಲೇ ಬಿರುಗಾಳಿ ಎಬ್ಬಿಸಿತ್ತು ಆ ದುರ್ಘಟನೆ!

ಪತಿಯ ಸಹಾಯದ ಗುಣ ನೋಡಿ ಇಷ್ಟಪಟ್ಟಿದ್ದ ವಿನಯ
ವಿನಯ ಪ್ರಸಾದ್ ಅವರಿಗೆ ಇಷ್ಟವಾದ ಪ್ರಸಾದ್ ಅವರ ಮುಖ್ಯವಾದ ಗುಣ ಅಂದರೆ ಸಹಾಯದ ಮನೋಭಾವ. ಹಿಂದುಮುಂದೆ ಯೋಚಿಸದೆ ಯಾರಿಗಾದರು ಸಹಾಯಮಾಡುತ್ತಿದ್ದ ಪ್ರಸಾದ್, ವಿನಯಾ ಅವರ ಮನಕದ್ದಿದ್ದರು. ಚಿತ್ರೀಕರಣ ಸೆಟ್ ನಲ್ಲಿ ಯಾರು ಹಸಿವಿನಿಂದ ಇರಬಾರದು ಎನ್ನುವ ಉದ್ದೇಶದಿಂದ ಅವರ ಖರ್ಚಿನಲ್ಲೆ ಎಲ್ಲರಿಗೂ ಊಟ ಕೊಡಿಸುತ್ತಿದ್ದ ಉದಾರ ಮನೋಭಾವದ ಪ್ರಸಾದ್ ನಂತರ ವಿನಯಾ ಅವರ ಪತಿಯಾಗಿ ವಿನಯಾ ಪ್ರಸಾದ್ ಜೀವನಕ್ಕೆ ಎಂಟ್ರಿ ಕೊಟ್ಟಿದ್ದರು.

ಪತ್ನಿಯನ್ನು ಮನೆಯಲ್ಲಿ ಕೂರಿಸುವ ಗಂಡ ಬೇಡ
ವಿನಯಾ ಪ್ರಸಾದ್ ಅವರಿಗೆ ಅಂದು ಮದುವೆ ಸಂದರ್ಭದಲ್ಲಿ ಇದ್ದ ದೊಡ್ಡ ಆಸೆ ಎಂದರೆ ಮನೆಯಲ್ಲಿ ಕೂರಿಸುವಂತಹ ಗಂಡ ಬೇಡ ಎನ್ನುವುದು. ನಟಿಯಾಗಿ ಖ್ಯಾತಿಗಳಿಸಿದ್ದ ವಿನಯಾ ಪ್ರಸಾದ್ ಮದುವೆ ಎಂಬ ಬಂದನಕ್ಕೆ ಒಳಗಾಗಿ ಮನೆಯಲ್ಲಿ ಕೂಳಿತರೆ ಜೀವನ ಅಲ್ಲಿಗೆ ಕೊನೆಯಾಗುತ್ತೆ. ಅದು ವಿನಯಾ ಪ್ರಸಾದ್ ಅವರಿಗೆ ಇಷ್ಟವಿರಲಿಲ್ಲ. ಅದೆ ಸಮಯದಲ್ಲಿ ಸಿಕ್ಕವರು ಪ್ರಸಾದ್. ಹಾಗಾಗಿ ಮೊದಲ ಪತಿ ವಿನಯಾ ಅವರಿಗೆ ದೇವರಂತೆ ಕಂಡಿದ್ದರು. ಯಾಕೆಂದರೆ ವಿನಯಾ ಪ್ರಸಾದ್ ವೃತ್ತಿ ಜೀವನವನ್ನು ಅರ್ಥಮಾಡಿಕೊಂಡು, ಪ್ರೋತ್ಸಾಹ ನೀಡುವಂತಹ ಗಂಡ ಆಗಿದ್ದರು ಪ್ರಸಾದ್.
ಹಿಂದಿ ಬರದೆ ಇದ್ದ ಪ್ರಕಾಶ್ ಬೆಳವಾಡಿ ಬಾಲಿವುಡ್ ಚಿತ್ರಕ್ಕೆ ಆಯ್ಕೆ ಆಗಿದ್ದೆ ಇಂಟೆರೆಸ್ಟಿಂಗ್

ಸೆಲೆಬ್ರೆಟಿ ಹೆಣ್ಣುಮಗಳ ಗಂಡ ಆಗಿರುವುದು ಕಷ್ಟ
ವಿನಯಾ ಪ್ರಸಾದ್ ಖ್ಯಾತ ನಟಿ. ತಾನು ದೊಡ್ಡ ಸೆಲೆಬ್ರೆಟಿ ಎನ್ನುವ ಅಹಂ ಇಲ್ಲದಿದ್ದರು ಎಲ್ಲರು ಪತಿ ಪ್ರಸಾದ್ ಅವರನ್ನು ವಿನಯಾ ಪ್ರಸಾದ್ ಗಂಡ ಎಂದು ಪರಿಚಯ ಮಾಡಿಕೊಳ್ಳುತ್ತಿದ್ದರಂತೆ. ಇದು ಪ್ರಸಾದ್ ಅವರ ಬೇಸರಕ್ಕೆ ಕಾರಣವಾಗುತ್ತಿತ್ತಂತೆ. ಇಬ್ಬರ ಸುಂದರ ಸಂಸಾರದಲ್ಲಿ ಅಸಮಧಾನ, ಬೇಸರಕ್ಕೆ ಕಾರಣವಾದ ಬಹು ಮುಖ್ಯ ವಿಚಾರ ಅಂದ್ರೆ ಸೆಲೆಬ್ರೆಟಿಯ ಗಂಡ ಎಂದು ಹೇಳಿಕೊಳ್ಳುತ್ತಿದ್ದ ವಿಚಾರ ಎಂದು ನೋವಿನಲ್ಲೆ ಹೇಳುತ್ತಾರೆ ವಿನಯಾ ಪ್ರಸಾದ್. ಎಲ್ಲಿ ಹೋದರು ಸಹ ಎಲ್ಲರು ವಿನಯಾ ಪ್ರಸಾದ್ ಪತಿ ಎಂದೇ ಪರಿಚಯ ಮಾಡಿಕೊಡುತ್ತಿದ್ದರಂತೆ. ಇಂದು ಪ್ರಸದ್ ಅವರಿಗೆ ಕೋಪಕ್ಕೆ ಸಂಸಾರದ ಬಿರುಕಿಗೆ ಕಾರಣವಾಗುತ್ತಿತ್ತಂತೆ.

ಪ್ರಸಾದ್ ಜೊತೆ ಏಳು ವರ್ಷದ ತುಂಬು ಜೀವನ
ವಿನಯಾ ಪ್ರಸಾದ್ ಮತ್ತು ಪತಿ ಕೃಷ್ಣ ಪ್ರಸಾದ್ ಸಂಸಾರಿಕ ಜೀವನ ನಡೆದಿದ್ದು ಕೇವಲ ಏಳು ವರ್ಷ. ಆದ್ರೆ ಈ ಏಳು ವರ್ಷ ವಿನಯಾ ಅವರ ಪಾಲಿಗೆ 70 ವರ್ಷದ ಜೀವನ ಮಾಡಿದ ಅನುಭವವಾಗಿದೆಯಂತೆ. ಎಷ್ಟೆ ಅಸಮಧಾನಗಳು ಇದ್ದರು ಪ್ರಸಾದ್ ಜೊತೆ ಕಳೆದ ಸಮಯವನ್ನು ಸಂತೋಷದಿಂದ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮೊದಲ ಪತಿ ಜೊತೆ ಏಳು ವರ್ಷದ ತುಂಬು ಜೀವನ ನಡೆಸಿದ್ದೀನಿ ಎಂದು ಸಂತಸದಿಂದ ಹೇಳಿಕೊಳ್ಳುತ್ತಾರೆ ವಿನಯಾ ಪ್ರಸಾದ್.

ಪ್ರಥಮಾ ಪ್ರಸಾದ್ ಮಗಳು
ವಿನಯಾ ಮತ್ತು ಪ್ರಸಾದ್ ದಂಪತಿಗೆ ಪ್ರಥಮಾ ಎನ್ನುವ ಮುದ್ದು ಮಗಳು ಇದ್ದಾರೆ. ಅಪ್ಪನನ್ನು ಬಹಳ ಬೇಗನೆ ಕಳೆದುಕೊಂಡ ಪ್ರಥಮಾ ಅಪ್ಪನ ನೆನಪಿನ ಜೊತೆಗೆ ಅಮ್ಮನ ಆಸರೆಯಲ್ಲಿ ಬೆಳೆದವರು. ವಿನಯಾ ಪ್ರಸಾದ್ ಪತಿಯನ್ನು ಕಳೆದುಕೊಂಡು ದುಃಖದಲ್ಲಿ ಕುಗ್ಗದೆ ಧೈರ್ಯವಾಗಿಯೆ ಜೀವನವನ್ನು ಎದುರಿಸಿ ಮಗಳಿಗೂ ಧೈರ್ಯ ತುಂಬಿ ಸಿನಿ ಜೀವನದಲ್ಲಿ ಎತ್ತರಕ್ಕೆ ಬೆಳೆದು ನಿಂತಿದ್ದಾರೆ.