For Quick Alerts
  ALLOW NOTIFICATIONS  
  For Daily Alerts

  ಪತಿ ಕಳೆದುಕೊಂಡಿದ್ದ ವಿನಯ ಪ್ರಸಾದ್ ಬಾಳಿಗೆ ಬೆಳಕಾಗಿ ಬಂದ ಪ್ರಕಾಶ್

  |
  Weekend With Ramesh Season 4: ಕವಿ ಜ್ಯೋತಿಪ್ರಕಾಶ್ ಮದುವೆಯಾಗಿದ್ದರು ವಿನಯಾ ಪ್ರಸಾದ್

  ಕನ್ನಡ ಚಿತ್ರರಂಗ ಕಂಡ ಖ್ಯಾತ ನಟಿ ವಿನಯ ಪ್ರಸಾದ್. ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು ಚಿತ್ರರಂಗದಲ್ಲಿ ಮಿಂಚಿರುವ ವಿನಯ ಪ್ರಸಾದ್ ಪಂಚ ಭಾಷೆ ತಾರೆ. ಮಾತಿನಲ್ಲಿ ನಯ, ಹೆಸರಿಗೆ ತಕ್ಕ ವಿನಯ, ಅಭಿನಯ ಚತುರೆ ವಿನಯ ಪ್ರಸಾದ್.

  ಕಿರುತೆರೆಯ ಖ್ಯಾತ ಕಾರ್ಯಕ್ರಮ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ಸಾಧಕರ ಸೀಟ್ ನಲ್ಲಿ ದಕ್ಷಿಣ ಭಾರತದ ಸುಂದರ ನಟಿ ವಿನಯಾ ಪ್ರಸಾದ್ ಕುಳಿತಿದ್ದರು. ತನ್ನ ಸಾಧನೆಯ ಜೊತೆಗೆ ವೈಯಕ್ತಿಕ ಜೀವನದ ಸಿಹಿ-ಕಹಿ ಘಟನೆಗಳನ್ನು ಮೆಲಕುಹಾಕಿದ್ದಾರೆ.

  ಮೊದಲ ಪತಿ ಜೊತೆಗಿನ ಅಸಮಾಧಾನದ ಬಗ್ಗೆ ಹೇಳಿಕೊಂಡ ವಿನಯ ಪ್ರಸಾದ್

  ಮೊದಲ ಪತಿ ಕೃಷ್ಣ ಪ್ರಸಾದ್ ನಿಧನದ ನಂತರ ನಟಿ ವಿನಯಾ ಪ್ರಸಾದ್ ಎರಡನೆ ಮದುವೆಯಾಗಿದ್ದಾರೆ. ಸಿನಿ ಜೀವನ ಮತ್ತು ವೈಯಕ್ತಿಕ ಜೀವನ ಎರಡನ್ನು ನಿಭಾಯಿಸಿಕೊಂಡು ಸಂತಸ ಜೀವನ ನಡೆಸುತ್ತಿರುವ ವಿನಯಾ ಪ್ರಸಾದ್ ಅವರ ಎರಡನೆ ಪತಿ ಯಾರು? ಮುಂದೆ ಓದಿ..

  2002ರಲ್ಲಿ ಎರಡನೆ ವಿವಾಹವಾದ ವಿನಯಾ

  2002ರಲ್ಲಿ ಎರಡನೆ ವಿವಾಹವಾದ ವಿನಯಾ

  ಮೊದಲ ಪತಿ ಕೃಷ್ಣ ಪ್ರಸಾದ್ ನಿಧನದ ನಂತರ ವಿನಯಾ ಪ್ರಸಾದ್ ಎರಡನೆ ವಿವಾಹ ಆಗಿದ್ದಾರೆ. 1995ರಲ್ಲಿ ಮೊದಲ ಪತಿ ಪ್ರಸಾದ್ ಇಹಲೋಕ ತ್ಯಜಿಸಿದ್ದಾರೆ. ಆ ನಂತರ ಏಳು ವರ್ಷಗಳ ಬಳಿಕ ಜ್ಯೋತಿ ಪ್ರಕಾಶ್ ಜೊತೆ ಮತ್ತೆ ಎರಡನೆ ಮದುವೆ ಆಗಿದ್ದಾರೆ. ಮೊದಲ ಪತಿ ಪ್ರಸಾದ್ ಜೊತೆ ಏಳು ವರ್ಷದ ಸಂಸಾರ ನಡೆಸಿದ್ದಾರೆ ನಟಿ ವಿನಯಾ. ಮೊದಲ ಪತಿಯಿಂದ ಒಬ್ಬಳು ಮಗಳು ಕೂಡ ಇದ್ದಾರೆ.

  ಇದ್ದಿದ್ದನ್ನು ಇದ್ದಹಾಗೆ ಹೇಳುತ್ತಿದ್ದ ಪ್ರಚಂಡ

  ಇದ್ದಿದ್ದನ್ನು ಇದ್ದಹಾಗೆ ಹೇಳುತ್ತಿದ್ದ ಪ್ರಚಂಡ

  ನಟಿ ವಿನಯಾ ಮತ್ತು ಪ್ರಕಾಶ್ ಇಬ್ಬರು ಒಬ್ಬರಿಗೊಬ್ಬರು ಪರಿಚಿತರಾಗಿದ್ದು ಒಂದು ಸಿನಿಮಾ ಪ್ರಾಜೆಕ್ಟ್ ಕೆಲಸ ಮಾಡುತ್ತಿರುವಾಗ. ಇದ್ದಿದ್ದನ್ನು ಇದ್ದಹಾಗೆ ಹೇಳುತ್ತಿದ್ದ ಪ್ರಚಂಡ ಸತ್ಯವಂತರಂತೆ ಕಂಡಿದ್ದ ಪ್ರಕಾಶ್ ವಿನಯಾ ಪ್ರಸಾದ್ ಅವರ ಮನ ಕದ್ದಿದ್ದರು. ಅಲ್ಲದೆ ಇಬ್ಬರು ಬಣ್ಣದ ಲೋಕದಲ್ಲೆ ಇದ್ದಿದ್ದರಿಂದ ಇಬ್ಬರಿಗು ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು. ಇಬ್ಬರ ನಡುವೆ ಪ್ರಾರಂಭವಾದ ಈ ಪ್ರೀತಿ ನಂತರ ಪತಿ-ಪತ್ನಿಯರನ್ನಾಗಿ ಮಾಡಿದೆ.

  ಮೊದಲ ಪತಿ ಜೊತೆಗಿನ ಅಸಮಾಧಾನದ ಬಗ್ಗೆ ಹೇಳಿಕೊಂಡ ವಿನಯ ಪ್ರಸಾದ್

  ಜ್ಯೋತಿಪ್ರಕಾಶ್ ಅವರಿಗೆ ಎರಡನೆ ಮದುವೆ

  ಜ್ಯೋತಿಪ್ರಕಾಶ್ ಅವರಿಗೆ ಎರಡನೆ ಮದುವೆ

  ವಿನಯಾ ಪ್ರಸಾದ್ ಎರಡನೆ ಪತಿ ಪ್ರಕಾಶ್ ಅವರಿಗೂ ಇದು ಎರಡನೆ ಮದುವೆ. ಮೊದಲ ಪತ್ನಿಗೆ ವಿಚ್ಛೇಧನ ನೀಡಿದ್ದ ಪ್ರಕಾಶ್ ನಂತರ ವಿನಯಾ ಪ್ರಸಾದ್ ಕೈ ಹಿಡಿದ್ದಾರೆ. ಪ್ರಕಾಶ್ ಅವರಿಗೆ ಮೊದಲೆ ಜಯ್ ಅತ್ರಿ ಎನ್ನುವ ಒಬ್ಬ ಮಗ ಕೂಡ ಇದ್ದಾರೆ. ಜಯ್ ಅತ್ರಿ ಸದ್ಯ ಮುಂಬೈನಲ್ಲಿ ನೆಲೆಸಿದ್ದು ನಿರ್ದೇಶನ ಮತ್ತು ಸ್ಕ್ರೀನ್ ಪ್ಲೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ.

  ಶಶಿಕುಮಾರ್ ಬದುಕಿನಲ್ಲೇ ಬಿರುಗಾಳಿ ಎಬ್ಬಿಸಿತ್ತು ಆ ದುರ್ಘಟನೆ!

  1995ರಲ್ಲಿ ಮೊದಲ ಪತಿ ಪ್ರಸಾದ್ ನಿಧನ

  1995ರಲ್ಲಿ ಮೊದಲ ಪತಿ ಪ್ರಸಾದ್ ನಿಧನ

  1988ರಲ್ಲಿ ಕೃಷ್ಣ ಪ್ರಸಾದ್ ಜೊತೆ ವಿನಯಾ ಅವರು ವಿವಾಹ ಆಗಿದ್ದರು. ಏಳು ವರ್ಷಗಳ ಕಾಲ ಪ್ರಸಾದ್ ಜೊತೆ ಸಂಸಾರ ನಡೆಸಿದ್ದಾರೆ. ವಿನಯಾ ಮತ್ತು ಪ್ರಸಾದ್ ದಂಪತಿಗೆ ಪ್ರಥಮಾ ಎನ್ನುವ ಒಬ್ಬಳು ಮಗಳು ಕೂಡ ಇದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲೆ ಪತಿ ಕೃಷ್ಣ ಪ್ರಸಾದ್ ನಿಧನರಾಗುತ್ತಾರೆ. ಆ ನಂತರ ಏಳು ವರ್ಷ ಮಗಳ ಜವಬ್ದಾರಿಯನ್ನು ತಾಯಿಯೊಬ್ಬಳೆ ಹೊತ್ತುಕೊಂಡು ಮಗಳನ್ನು ಬೆಳೆಸುತ್ತಾರೆ. ನಂತರ ಜ್ಯೋತಿ ಪ್ರಕಾಶ್ ಜೊತೆ ಮದುವೆ ಆಗುತ್ತಾರೆ.

  English summary
  Kannada famous actress Vinaya Prasad spoke about her second husband in weekend with Ramesh season 4. Vinaya Prasad first husband died in 1995.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X