For Quick Alerts
  ALLOW NOTIFICATIONS  
  For Daily Alerts

  'ಅಗ್ನಿಸಾಕ್ಷಿ' ಮುಗಿಯಿತು: ಇನ್ನು ಗಂಡಸರ ಕೈಗೆ ರಿಮೋಟ್ ಸಿಗಬಹುದು.!

  |

  ಸತತ ಆರು ವರ್ಷಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ 'ಅಗ್ನಿಸಾಕ್ಷಿ' ಧಾರಾವಾಹಿ ಮುಕ್ತಾಯಗೊಂಡಿದೆ. 1588 ಸಂಚಿಕೆಗಳ ಪ್ರಸಾರ ಕಂಡ 'ಅಗ್ನಿಸಾಕ್ಷಿ' ಸೀರಿಯಲ್ ಗೆ ಫುಲ್ ಸ್ಟಾಪ್ ಬಿದ್ದಿದೆ.

  'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಪದೇ ಪದೇ ಕುತಂತ್ರಿ ಚಂದ್ರಿಕಾ ಮಾಡುವ ಪ್ಲಾನ್ ಗಳೇ ವರ್ಕ್ ಆಗುತ್ತಿದ್ದನ್ನು ನೋಡಿ ನೋಡಿ ಬೇಸೆತ್ತಿದ್ದ ಕೆಲ ವೀಕ್ಷಕರು ''ಈ ಮನೆಮುರುಕ ಧಾರಾವಾಹಿಯನ್ನು ನಿಲ್ಲಿಸಿ'' ಎಂದು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯಿಸುತ್ತಿದ್ದರು.

  ಕೊನೆಗೆ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕಾ 'ಬಿಗ್ ಬಾಸ್' ಮನೆ ಸೇರಿದರು. ಅಲ್ಲಿಗೆ, 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಚಂದ್ರಿಕಾ ಪಾತ್ರಕ್ಕೆ ಫುಲ್ ಸ್ಟಾಪ್ ಬಿತ್ತು. ಇನ್ನೂ ಇದೇ ಸೀರಿಯಲ್ ನಿಂದ ಸಿದ್ಧಾರ್ಥ್ ಪಾತ್ರಧಾರಿ ವಿಜಯ್ ಸೂರ್ಯ ಕೂಡ ಹೊರನಡೆದರು. ಆದರೂ 'ಅಗ್ನಿಸಾಕ್ಷಿ' ಕಥೆ ಎಲ್ಲೆಲ್ಲೋ ಸಾಗುತ್ತಿತ್ತು.

  ಹೊಸ ವರ್ಷ ಬರುತ್ತಿದ್ದ ಹಾಗೆ, 'ಅಗ್ನಿಸಾಕ್ಷಿ' ಧಾರಾವಾಹಿಗೆ ಶುಭಂ ಹಾಡಲಾಗಿದೆ. ವಿಚಿತ್ರ ಅಂದ್ರೆ, 'ಅಗ್ನಿಸಾಕ್ಷಿ' ಸೀರಿಯಲ್ ಮುಗಿದ ಮೇಲೂ ಟ್ರೋಲ್ ಆಗುತ್ತಿದೆ. ಬೇಕಾದ್ರೆ ನೀವೇ ನೋಡಿ...

  ಮುಗಿಲು ಮುಟ್ಟಿದ ಮಹಿಳೆಯರ ಆಕ್ರಂದನ

  ಮುಗಿಲು ಮುಟ್ಟಿದ ಮಹಿಳೆಯರ ಆಕ್ರಂದನ

  ಲೋಕವಿಖ್ಯಾತ 'ಅಗ್ನಿಸಾಕ್ಷಿ' ಧಾರಾವಾಹಿ ಮುಗಿಯುತ್ತಿದ್ದಂತೆಯೇ, ಲಕ್ಷಾಂತರ ಮಹಿಳೆಯರ ಆಕ್ರಂದನ ಮುಗಿಲು ಮುಟ್ಟಿದ್ಯಂತೆ. 'ಅಗ್ನಿಸಾಕ್ಷಿ' ಸೀರಿಯಲ್ ನ ಪ್ರತಿದಿನ ತಪ್ಪದೆ ವೀಕ್ಷಿಸುತ್ತಿದ್ದ ಮಹಿಳೆಯರು, ಧಾರಾವಾಹಿ ಮುಗಿದಿರುವುದಕ್ಕೆ ಸದ್ಯ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರಂತೆ.

  ಯಾವಾಗಪ್ಪಾ 'ಅಗ್ನಿಸಾಕ್ಷಿ' ಮುಗಿಯುತ್ತೆ ಅಂತ ತಲೆ ಚಚ್ಚಿಕೊಳ್ತಿದ್ದವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.!ಯಾವಾಗಪ್ಪಾ 'ಅಗ್ನಿಸಾಕ್ಷಿ' ಮುಗಿಯುತ್ತೆ ಅಂತ ತಲೆ ಚಚ್ಚಿಕೊಳ್ತಿದ್ದವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.!

  ಜನಸ್ತೋಮ ನೋಡಿ.!

  ಜನಸ್ತೋಮ ನೋಡಿ.!

  'ಅಗ್ನಿಸಾಕ್ಷಿ' ಧಾರಾವಾಹಿಯ ಕಟ್ಟ ಕಡೆಯ ಸಂಚಿಕೆಯನ್ನ ದೊಡ್ಡ ಪರದೆ ಮೇಲೆ ನೋಡಲು ಜನ ಸಾಗರವೇ ಹರಿದು ಬಂದಿತ್ತಂತೆ.

  ವೈಷ್ಣವಿ ಬಾಳಲ್ಲಿ ಬಿರುಗಾಳಿ: ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದೆ.!ವೈಷ್ಣವಿ ಬಾಳಲ್ಲಿ ಬಿರುಗಾಳಿ: ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದೆ.!

  ಗಂಡಸರ ಕೈಯಲ್ಲಿ ಟಿವಿ ರಿಮೋಟ್

  ಗಂಡಸರ ಕೈಯಲ್ಲಿ ಟಿವಿ ರಿಮೋಟ್

  'ಅಗ್ನಿಸಾಕ್ಷಿ' ಸೀರಿಯಲ್ ಪ್ರಸಾರ ಆಗುವಾಗ, ಹೆಂಗಸರ ಕೈಯಲ್ಲಿ ಟಿವಿ ರಿಮೋಟ್ ಮಿಸ್ ಇಲ್ಲದೆ ಇರುತ್ತಿತ್ತು. ಆರು ವರ್ಷಗಳಿಂದ ಮನೆಯ ಹೆಂಗಸರ ಕೈಯಲ್ಲಿದ್ದ ರಿಮೋಟ್ ಇನ್ಮೇಲಾದರೂ ಗಂಡಸರಿಗೆ ಸಿಗುವ ಸಾಧ್ಯತೆ ಇದ್ಯಂತೆ.

  'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಶಾಕ್ ನೀಡಿದ ನಟ ವಿಜಯ್ ಸೂರ್ಯ'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಶಾಕ್ ನೀಡಿದ ನಟ ವಿಜಯ್ ಸೂರ್ಯ

  ಭರ್ಜರಿ ಸ್ಟೆಪ್ ಹಾಕ್ತಾವ್ರೆ ಗಂಡಸರು.!

  ಭರ್ಜರಿ ಸ್ಟೆಪ್ ಹಾಕ್ತಾವ್ರೆ ಗಂಡಸರು.!

  'ಅಗ್ನಿಸಾಕ್ಷಿ' ಸೀರಿಯಲ್ ಮುಗಿದಿರುವುದಕ್ಕೆ ಹೆಂಗಸರು ಬೇಸರ ಮಾಡಿಕೊಂಡಿದ್ದರೆ, ಗಂಡಸರು ಮಾತ್ರ ಭರ್ಜರಿಯಾಗಿ ಟಪ್ಪಾಂಗುಚ್ಚಿ ಸ್ಟೆಪ್ ಹಾಕ್ತಾವ್ರೆ. ಇಷ್ಟು ದಿನ ತಲೆ ಚಚ್ಚಿಕೊಳ್ತಿದ್ದ ಗಂಡಸರ ಮುಖದಲ್ಲಿ ಇದೀಗ ಮಂದಹಾಸ ಮೂಡಿದ್ಯಂತೆ.

  English summary
  Agnisakshi serial ends: Trolls on Social Media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X