For Quick Alerts
  ALLOW NOTIFICATIONS  
  For Daily Alerts

  ಯಾವಾಗಪ್ಪಾ 'ಅಗ್ನಿಸಾಕ್ಷಿ' ಮುಗಿಯುತ್ತೆ ಅಂತ ತಲೆ ಚಚ್ಚಿಕೊಳ್ತಿದ್ದವರಿಗೆ ಇದೋ ಇಲ್ಲಿದೆ ಗುಡ್ ನ್ಯೂಸ್.!

  |

  ''ನಮ್ಮ ಪಕ್ಕದ ಮನೆ ಮಗು ಹುಟ್ಟಿ, ಒಂದನೇ ಕ್ಲಾಸ್ ಸೇರಿದರೂ 'ಅಗ್ನಿಸಾಕ್ಷಿ' ಧಾರಾವಾಹಿಯ ಕಥೆ ಮಾತ್ರ ಅಲ್ಲೇ ಇದೆ'', ''ಈ ಧಾರಾವಾಹಿ ಯಾವಾಗ ಮುಗಿಯುತ್ತೋ..'', ''ಮೊದಲು ಈ ಮನೆ ಹಾಳು ಸೀರಿಯಲ್ ನ ನಿಲ್ಲಿಸಿ''... ಅಂತ ಎಷ್ಟೋ ವೀಕ್ಷಕರು ಆಗಾಗ ಕಲರ್ಸ್ ಕನ್ನಡ ವಾಹಿನಿಯ ಅಫೀಶಿಯಲ್ ಫೇಸ್ ಬುಕ್ ಪುಟದಲ್ಲಿ ಮಹಾ ಮಂಗಳಾರತಿ ಮಾಡುತ್ತಲೇ ಇರುತ್ತಾರೆ.

  ಅಂತಹ ವೀಕ್ಷಕರಿಗೆ ಇದೋ ಗುಡ್ ನ್ಯೂಸ್.! 'ಅಗ್ನಿಸಾಕ್ಷಿ' ಧಾರಾವಾಹಿ ಯಾವಾಗಪ್ಪಾ ಮುಗಿಯುತ್ತೆ ಅಂತ ತಲೆ ಚಚ್ಚಿಕೊಳ್ತಿದ್ದವರಿಗೆ ಒಂದು ಸಿಹಿ ಸುದ್ದಿ ಇಲ್ಲಿದೆ.

  2013 ರಲ್ಲಿ ಶುರುವಾಗಿದ್ದ 'ಅಗ್ನಿಸಾಕ್ಷಿ' ಧಾರಾವಾಹಿಗೆ ಶುಭಂ ಹಾಡುವ ಕಾಲ ಹತ್ತಿರ ಬಂದೇ ಬಿಟ್ಟಿದೆ. ಇನ್ನೂ ಕೆಲವೇ ದಿನಗಳಲ್ಲಿ 'ಅಗ್ನಿಸಾಕ್ಷಿ' ಸೀರಿಯಲ್ ಗೆ ಫುಲ್ ಸ್ಟಾಪ್ ಬೀಳಲಿದೆ. ಮುಂದೆ ಓದಿರಿ...

  ಮುಕ್ತಾಯವಾಗಲಿದೆ 'ಅಗ್ನಿಸಾಕ್ಷಿ'

  ಮುಕ್ತಾಯವಾಗಲಿದೆ 'ಅಗ್ನಿಸಾಕ್ಷಿ'

  ಕಲರ್ಸ್ ಕನ್ನಡ ವಾಹಿನಿಯ ಮೆಗಾ ಸೀರಿಯಲ್ 'ಅಗ್ನಿಸಾಕ್ಷಿ' ಮುಕ್ತಾಯವಾಗಲಿದೆ. ಡಿಸೆಂಬರ್ 30 ರಿಂದ ಜನವರಿ 4 ರವರೆಗೆ 'ಅಗ್ನಿಸಾಕ್ಷಿ' ಸೀರಿಯಲ್ ನ 'ಅಂತಿಮ ಸಂಚಿಕೆ' ಪ್ರಸಾರ ಆಗಲಿದೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಕನ್ಫರ್ಮ್ ಮಾಡಿಲ್ಲ.

  ಜಾಸ್ತಿ ಖುಷಿ ಪಡಬೇಡಿ: 'ಅಗ್ನಿಸಾಕ್ಷಿ' ಧಾರಾವಾಹಿ ಸದ್ಯಕ್ಕೆ ಮುಗಿಯಲ್ಲ.!ಜಾಸ್ತಿ ಖುಷಿ ಪಡಬೇಡಿ: 'ಅಗ್ನಿಸಾಕ್ಷಿ' ಧಾರಾವಾಹಿ ಸದ್ಯಕ್ಕೆ ಮುಗಿಯಲ್ಲ.!

  1500ಕ್ಕೂ ಹೆಚ್ಚು ಸಂಚಿಕೆಗಳು

  1500ಕ್ಕೂ ಹೆಚ್ಚು ಸಂಚಿಕೆಗಳು

  ಯಾರು ಎಷ್ಟೇ ಛೀಮಾರಿ ಹಾಕಿದ್ದರೂ, 'ಅಗ್ನಿಸಾಕ್ಷಿ' ಧಾರಾವಾಹಿಗೆ ಉತ್ತಮ ಟಿ.ಆರ್.ಪಿ ಇದ್ದದ್ದು ಮಾತ್ರ ಸುಳ್ಳಲ್ಲ. ಆರು ವರ್ಷಗಳ ಹಿಂದೆ ಶುರುವಾದ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಇಲ್ಲಿಯವರೆಗೂ 1500 ಕ್ಕೂ ಹೆಚ್ಚು ಸಂಚಿಕೆಗಳು ಪ್ರಸಾರ ಆಗಿವೆ. ಅಪಾರ ವೀಕ್ಷಕ ಬಳಗವನ್ನು ಸೆಳೆಯುವಲ್ಲಿ 'ಅಗ್ನಿಸಾಕ್ಷಿ' ತಂಡ ಯಶಸ್ವಿ ಆಗಿತ್ತು.

  ವೈಷ್ಣವಿ ಬಾಳಲ್ಲಿ ಬಿರುಗಾಳಿ: ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದೆ.!ವೈಷ್ಣವಿ ಬಾಳಲ್ಲಿ ಬಿರುಗಾಳಿ: ಸಿದ್ಧಾರ್ಥ್ ಗೆ ಇನ್ನೊಂದು ಮದುವೆ ಆಗಿದೆ.!

  ಹೊರ ನಡೆದ ಕಲಾವಿದರು

  ಹೊರ ನಡೆದ ಕಲಾವಿದರು

  'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಸಿದ್ಧಾರ್ಥ್ ಆಗಿ ಅಭಿನಯಿಸುತ್ತಿದ್ದವರು ವಿಜಯ ಸೂರ್ಯ. 'ಅಗ್ನಿಸಾಕ್ಷಿ' ಕುತೂಹಲ ಘಟ್ಟದಲ್ಲಿರುವಾಗಲೇ, ಸೀರಿಯಲ್ ನಿಂದ ನಟ ವಿಜಯ್ ಸೂರ್ಯ ಹೊರನಡೆದರು. ಇನ್ನೂ 'ಬಿಗ್ ಬಾಸ್' ಮನೆಯೊಳಗೆ ಬಲಗಾಲಿಟ್ಟು ಬಂದ ಪ್ರಿಯಾಂಕಾ, 'ಚಂದ್ರಿಕಾ' ಪಾತ್ರಕ್ಕೆ ಗುಡ್ ಬೈ ಹೇಳಿದರು.

  'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಶಾಕ್ ನೀಡಿದ ನಟ ವಿಜಯ್ ಸೂರ್ಯ'ಅಗ್ನಿಸಾಕ್ಷಿ' ಧಾರಾವಾಹಿಯಿಂದ ಹೊರ ಬಂದು ಶಾಕ್ ನೀಡಿದ ನಟ ವಿಜಯ್ ಸೂರ್ಯ

  ಕ್ಲೈಮ್ಯಾಕ್ಸ್ ಹಂತದಲ್ಲಿ 'ಅಗ್ನಿಸಾಕ್ಷಿ'.?

  ಕ್ಲೈಮ್ಯಾಕ್ಸ್ ಹಂತದಲ್ಲಿ 'ಅಗ್ನಿಸಾಕ್ಷಿ'.?

  ಚಂದ್ರಿಕಾ ಮತ್ತು ಸಿದ್ಧಾರ್ಥ್ ಪಾತ್ರಗಳು ಇಲ್ಲದೆ 'ಅಗ್ನಿಸಾಕ್ಷಿ' ಧಾರಾವಾಹಿಯ ಕಥೆ ಸದ್ಯ ಬೇರೆಯದ್ದೇ ಟ್ರ್ಯಾಕ್ ನಲ್ಲಿ ಸಾಗುತ್ತಿದೆ. ಹೀಗಿರುವಾಗಲೇ, 'ಅಗ್ನಿಸಾಕ್ಷಿ' ಕ್ಲೈಮ್ಯಾಕ್ಸ್ ಹಂತ ತಲುಪಿದೆ ಎಂಬ ಸುದ್ದಿ ಹೊರಬಿದ್ದಿದೆ.

  English summary
  According to the latest Grapevine, Colors Kannada Channel's popular serial Agnisakshi to end soon.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X