»   » 'ಅಗ್ನಿಸಾಕ್ಷಿ' ಸನ್ನಿಧಿ ಜೊತೆಗಿನ ಗಾಸಿಪ್ ಬಗ್ಗೆ ವಿಜಯ್ ಸೂರ್ಯ ಏನಂತಾರೆ.?

'ಅಗ್ನಿಸಾಕ್ಷಿ' ಸನ್ನಿಧಿ ಜೊತೆಗಿನ ಗಾಸಿಪ್ ಬಗ್ಗೆ ವಿಜಯ್ ಸೂರ್ಯ ಏನಂತಾರೆ.?

Posted By:
Subscribe to Filmibeat Kannada
Agnisakshi Siddharth ( Vijay Suriya ) reacts about his gossips with Sannidhi ( Vaishnavi )

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಸನ್ನಿಧಿ (ವೈಷ್ಣವಿ) ಹಾಗೂ ಸಿದ್ಧಾರ್ಥ್ (ವಿಜಯ್ ಸೂರ್ಯ) ಹೇಗಿದ್ದಾರೋ, ಹಾಗೆ ನಿಜ ಜೀವನದಲ್ಲೂ ವೈಷ್ಣವಿ ಹಾಗೂ ವಿಜಯ್ ಸೂರ್ಯ ಪ್ರಣಯ ಪಕ್ಷಿಗಳು. ಇಬ್ಬರೂ ಲವ್ ಮಾಡುತ್ತಿದ್ದಾರೆ. ಸದ್ಯದಲ್ಲೇ ಮದುವೆ ಆಗ್ತಾರೆ ಎಂಬ ಗುಸು ಗುಸು ಆಗಾಗ ಕೇಳಿಬಂದಿತ್ತು.

''ನಾವಿಬ್ಬರು ಜಸ್ಟ್ ಫ್ರೆಂಡ್ಸ್, ನಮ್ಮಿಬ್ಬರ ನಡುವೆ ಗೆಳೆತನ ಬಿಟ್ಟು ಬೇರೆ ಏನೂ ಇಲ್ಲ'' ಅಂತ ವೈಷ್ಣವಿ ಸ್ಪಷ್ಟನೆ ಕೊಟ್ಟಿದ್ದರು. ಈಗ ನಟ ವಿಜಯ್ ಸೂರ್ಯ ಕೂಡ ಅದನ್ನೇ ಹೇಳಿದ್ದಾರೆ.

'Agnisakshi' Vijay Suriya reacts about his gossips with Vaishnavi

''ವೈಷ್ಣವಿ ಹಾಗೂ ನನ್ನ ನಡುವೆ ಏನಿಲ್ಲ. ನಾನಿನ್ನೂ ಸಿಂಗಲ್. ಗಾಸಿಪ್ ಕೇಳಿ ಕೇಳಿ ಅಭ್ಯಾಸ ಆಗ್ಬಿಟ್ಟಿದೆ'' ಅಂತ ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ವಿಜಯ್ ಸೂರ್ಯ ಹೇಳಿದ್ದಾರೆ.

''ಸನ್ನಿಧಿ ಜೊತೆ ಎಲ್ಲ ತರಹ ಗಾಸಿಪ್ ಬಂದುಬಿಟ್ಟಿದೆ. ನಾವು ಮದುವೆ ಆಗಿದ್ದೇವೆ, ನಮಗೆ ಮಕ್ಕಳು ಇದ್ದಾರೆ ಅಂತ ಮಾತನಾಡಿಕೊಳ್ತಾರೆ. ಗಾಸಿಪ್ ಕೇಳಿ ಕೇಳಿ ಅಭ್ಯಾಸ ಆಗ್ಬಿಟ್ಟಿದೆ. ನನ್ನನ್ನ ಮದುವೆ ಆಗುವವಳು ಇದನ್ನೆಲ್ಲ ಅರ್ಥ ಮಾಡಿಕೊಳ್ಳಬೇಕು'' ಎಂದಿದ್ದಾರೆ ವಿಜಯ್ ಸೂರ್ಯ.

English summary
'Agnisakshi' Vijay Suriya reacts about his gossips with Vaishnavi in Colors Super Channel's popular show 'Super Talk Time'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada