»   » 'ಬಿಗ್ ಬಾಸ್' ಮನೆಗೆ ತೆರಳಿದ ನಟಿ ಅನುಪಮಾ ಗೌಡ ಕಣ್ಣೀರಿನ ಕಥೆ ಇದು!

'ಬಿಗ್ ಬಾಸ್' ಮನೆಗೆ ತೆರಳಿದ ನಟಿ ಅನುಪಮಾ ಗೌಡ ಕಣ್ಣೀರಿನ ಕಥೆ ಇದು!

Posted By:
Subscribe to Filmibeat Kannada

ಬಿಗ್ ಬಾಸ್ ಮನೆಗೆ ಕಾಲಿಟ್ಟ ಸೆಲೆಬ್ರಿಟಿಗಳ ಪೈಕಿ ನಟಿ ಅನುಪಮಾ ಗೌಡ ಕೂಡ ಒಬ್ಬರು. ಅನುಪಮಾ 'ಬಿಗ್ ಬಾಸ್ ಕನ್ನಡ ಸೀಸನ್ 5' ಕಾರ್ಯಕ್ರಮದ ಆರನೇ ಸ್ಪರ್ಧಿ.

'ಕಲರ್ಸ್ ಕನ್ನಡ' ವಾಹಿನಿಯ 'ಅಕ್ಕ' ಧಾರಾವಾಹಿಯ ಮೂಲಕ ಅನುಪಮಾ ಗೌಡ ಜನಪ್ರಿಯತೆ ಗಳಿಸಿದ್ದಾರೆ. ಹೀಗಿದ್ದರೂ ಅನುಪಮಾ ಈ ಬಾರಿ 'ಬಿಗ್ ಬಾಸ್' ಮನೆಗೆ ಹೋಗುತ್ತಾರೆ ಎನ್ನುವ ಸುಳಿವು ಯಾರಿಗೂ ಇರಲಿಲ್ಲ.

ವೇದಿಕೆ ಮೇಲೆ ಬಂದು ಸುದೀಪ್ ಮುಂದೆ ನಿಂತ ಕೊನೆ ಕ್ಷಣದವರೆಗೂ ಅನುಪಮಾ 'ಬಿಗ್ ಬಾಸ್'ಗೆ ಹೋಗುತ್ತಾರಾ.. ಇಲ್ವಾ.. ಎನ್ನುವ ಅನುಮಾನ ಇತ್ತು.

ಅಂದಹಾಗೆ, 'ಬಿಗ್ ಬಾಸ್'ಗೆ ಎಂಟ್ರಿಯಾಗಿರುವ ಅನುಪಮಾ ಅವರ ಜೀವನದ ಬಗ್ಗೆ ಒಂದಷ್ಟು ವಿವರಗಳು ಇಲ್ಲಿದೆ ಓದಿ...

ಅನುಪಮಾ ಗೌಡ ಬಗ್ಗೆ

ಅನುಪಮಾ ಗೌಡ ಮೂಲತಃ ಬೆಂಗಳೂರಿನವರು. ತಂದೆ, ತಾಯಿಯ ಮುದ್ದಿನ ಮಗಳಾದ ಅನುಪಮಾ ಅವರಿಗೆ ತೇಜಸ್ಟಿನಿ ಎಂಬ ತಂಗಿ ಕೂಡ ಇದ್ದಾರೆ. ಸದ್ಯ 'ಅಕ್ಕ' ಧಾರಾವಾಹಿಯಲ್ಲಿ ಅನುಪಮಾ ನಟಿಸುತ್ತಿದ್ದಾರೆ.

ಬಡತನದಲ್ಲಿ ಬೆಳೆದ ಹುಡುಗಿ

ಅನುಪಮಾ ಅವರದ್ದು ಬಡ ಕುಟುಂಬ. ತಾಯಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರೆ, ತಂದೆ ಸಿನಿಮಾದಲ್ಲಿ ಅಸೋಸಿಯೇಟ್ ಆಗಿದ್ದರು. ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟ ಪಡುವ ಪರಿಸ್ಥಿತಿ ಅವರಿಗಿತ್ತು.

ಓದಿದ್ದು ಬರೀ 6 ನೇ ಕ್ಲಾಸ್

6ನೇ ಕ್ಲಾಸ್ ಮುಗಿಸಿದ ಅನುಪಮಾ 7ನೇ ಕ್ಲಾಸ್ ಸೇರಿಸುವುದಕ್ಕೆ ಅವರ ತಂದೆ ತಾಯಿಯ ಬಳಿ ದುಡ್ಡು ಇರಲಿಲ್ಲ. ಅದೇ ಕಾರಣಕ್ಕೆ ಅವರ ವಿದ್ಯಾಭ್ಯಾಸ ಕೂಡ ಅಲ್ಲಿಗೆ ಕೊನೆಯಾಯಿತು.

ಮನೆ ಕೆಲಸ

ಶಾಲೆ ಬಿಟ್ಟು ಅಮ್ಮನ ಜೊತೆ ಟೈಲರಿಂಗ್ ಕೆಲಸ ಮಾಡಿದ ಅನುಪಮಾ ನಂತರ ತಾಯಿಗೆ ತಿಳಿಯದಂತೆ ಬೇರೆಯವರ ಮನೆ ಕೆಲಸ ಮಾಡಿದ್ದರು. ಅದರಿಂದ ಬಂದ ದುಡ್ಡನ್ನ ಅಮ್ಮನಿಗೆ ನೀಡಿ ಸಹಾಯ ಮಾಡುತ್ತಿದ್ದರು.

ಮೊದಲು ಸಂಭಾವನೆ 100 ರೂಪಾಯಿ

ಅನುಪಮಾ ತಾಯಿಯ ಸ್ನೇಹಿತೆಯೊಬ್ಬರು ದರ್ಶನ್ ಅಭಿನಯದ 'ಲಂಕೇಶ್ ಪತ್ರಿಕೆ' ಸಿನಿಮಾದಲ್ಲಿ ಜೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡುವ ಅವಕಾಶ ಕೊಡಿಸಿದರು. ಮೂರು ದಿನ ಶೂಟಿಂಗ್ ನಲ್ಲಿ ಭಾಗಿಯಾಗಿದ್ದ ಅನುಪಮಾ ಅವರ ಮೊದಲ ಸಂಭಾವನೆ ಒಂದು ದಿನಕ್ಕೆ 100 ರೂಪಾಯಿ ಆಗಿತ್ತು.

ಸಿನಿಮಾದ ಸಹವಾಸ ಬೇಡ ಎಂದಿದ್ದರು.!

ಇದೇ ಸಂದರ್ಭದಲ್ಲಿ ಒಮ್ಮೆ ಅನುಪಮಾ ಅವರಿಗೆ ಸಿನಿಮಾದಲ್ಲಿ ಸಣ್ಣ ಪುಟ್ಟ ಅವಕಾಶಗಳನ್ನು ಕೊಡಿಸುತ್ತಿದ್ದ ವ್ಯಕ್ತಿಯೇ ಅವರ ಜೊತೆ ಅಸಭ್ಯವಾಗಿ ನಡೆದುಕೊಳ್ಳುವುದಕ್ಕೆ ಪ್ರಯತ್ನಿಸಿದರು. ನಂತರ ಸಿನಿಮಾದ ಸಹವಾಸ ಬೇಡ ಅಂತ ಅನುಪಮಾಅ ನಿರ್ಧರಿಸಿದ್ದರು.

ಚಿತ್ರಗಳು: ಸುದೀಪ್ ಪರಿಚಯಿಸಿದ 'ಬಿಗ್ ಬಾಸ್ 5' ಅರಮನೆಯ ಅಂದ-ಚೆಂದ

'ರಿಯಾಲಿಟಿ ಶೋ' ಒಂದರಲ್ಲಿ ಭಾಗಿ

ಕಸ್ತೂರಿ ವಾಹಿನಿಯ 'ಹಳ್ಳಿ ದುನಿಯಾ' ಎಂಬ ರಿಯಾಲಿಟಿ ಶೋ ಮೂಲಕ ಅನುಪಮಾ ರವರ ಕಿರುತೆರೆಯ ನಂಟು ಶುರುವಾಯಿತು.

ಮೊದಲ ದಿನವೇ ಟ್ರೋಲಿಗರಿಂದ 'TRP' ಗಳಿಸಿದ 'ಬಿಗ್ ಬಾಸ್' ನಿವೇದಿತಾ ಗೌಡ

'ಅಕ್ಕ' ಧಾರಾವಾಹಿ

ಇಷ್ಟೆಲ್ಲ ಕಷ್ಟಪಟ್ಟು ಬಂದ ಅನುಪಮಾ ಕಲರ್ಸ್ ಕನ್ನಡ ವಾಹಿನಿಯ 'ಅಕ್ಕ' ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದಾರೆ.

ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

ಸಿನಿಮಾದಲ್ಲಿ ನಟನೆ

'ನಗಾರಿ' ಎಂಬ ಸಿನಿಮಾದ ಮುಖ್ಯ ಭೂಮಿಕೆಯಲ್ಲಿ ಅನುಪಮಾ ಕಾಣಿಸಿಕೊಂಡಿದ್ದರು.

'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17 ಸ್ಪರ್ಧಿಗಳು.!

ಲೂಸ್ ಕನೆಕ್ಷನ್

'ಲೂಸ್ ಕನೆಕ್ಷನ್' ಎಂಬ ವೆಬ್ ಸೀರೀಸ್ ನಲ್ಲಿಯೂ ಅನುಪಮಾ ಅಭಿನಯಿಸಿದ್ದರು.

English summary
Who is Anupama Gowda.? Read the article to know more details about Bigg Boss Kannada 5 contestant Anupama Gowda and her background.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X