Just In
Don't Miss!
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Lifestyle
ಯಾವಾಗ ಸಂಗಾತಿಗೆ ಮೋಸ ಮಾಡಿ ಅನೈತಿಕ ಸಂಬಂಧ ಬೆಳೆಸುತ್ತಾರೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪ್ರಥಮ್ ತಂಗಿ' ಎಂದು ಟ್ರೋಲ್ ಆಗುತ್ತಿರುವ 'ಮಾಸ್' ಮೇಘ ಯಾರು.?
'ಬಿಗ್ ಬಾಸ್' ಮನೆಗೆ ಕೊಡಗಿನ ಕುವರಿ'' ಎಂಟ್ರಿ ಕೊಡ್ತಿದ್ದಾರೆ ಅಂತ ಕಿಚ್ಚ ಸುದೀಪ್ ಘೋಷಣೆ ಮಾಡಿದಾಗ, ''ಶುಭ್ರ ಅಯ್ಯಪ್ಪ ಒಳಗೆ ಹೋಗಬಹುದು'' ಎಂದು ಎಲ್ಲರೂ ಭಾವಿಸಿದ್ರು. ಆದ್ರೆ, ಶುಭ್ರ ಅಯ್ಯಪ್ಪ ಡ್ಯಾನ್ಸ್ ಮಾಡುತ್ತಿರುವಾಗಲೇ 'ಬಿಗ್ ಬಾಸ್' ವೇದಿಕೆ ಮೇಲೆ 'ನೋ ಪ್ರಾಬ್ಲಂ' ಎನ್ನುತ್ತ ಪ್ರತ್ಯಕ್ಷವಾಗಿದ್ದು ಕೊಡಗಿನ ಬೆಡಗಿ, ಶನಿವಾರಸಂತೆಯ ಸುಂದರಿ ಮೇಘ.!
'ಇವರು'ಗಳೇ ನೋಡಿ 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ 17 ಸ್ಪರ್ಧಿಗಳು.!
ಹೌದು, ಕೊಡಗಿನಿಂದ ಇದೀಗ 'ಬಿಗ್ ಬಾಸ್' ಮನೆಗೆ ಎಂಟ್ರಿ ಪಡೆದಿರುವ 'ಶ್ರೀಸಾಮಾನ್ಯ' ಸ್ಪರ್ಧಿ ಮೇಘ. 'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮದ ಮೂಲಕ ಸದ್ಯ ಕನ್ನಡಿಗರ ಮನೆ ಮನದಲ್ಲಿ ಸದ್ದು ಮಾಡುತ್ತಿರುವವರು ಚಿಟ-ಪಟ ಅಂತ ಮಾತನಾಡುವ ಚೆಲುವೆ ಮೇಘ.
ಇತರೆ ಸ್ಪರ್ಧಿಗಳ ಜೊತೆ 'ನಾನು ನಟಿ' ಅಂತ್ಹೇಳಿ 'ಟ್ರಿಕ್ಸ್' ಮಾಡುತ್ತಿರುವ.... ಟ್ರೋಲ್ ಪೇಜ್ ಗಳಲ್ಲಿ 'ಪ್ರಥಮ್ ತಂಗಿ' ಎಂದೇ ಟ್ರೋಲ್ ಆಗುತ್ತಿರುವ ಈ ಮೇಘ ಯಾರು.? ಆಕೆಯ ಹಿನ್ನಲೆ ಏನು ಎಂಬುದನ್ನ ತಿಳಿಯಲು ಈ ವರದಿ ಓದಿರಿ....

ಕೊಡಗಿನ ಕುವರಿ ಮೇಘ
''ಹಲೋ ಅಣ್ತಮ್ಮಾಸ್, ಅಕ್ತಂಗೀಸ್'' ಎನ್ನುತ್ತಾ 'ಬಿಗ್ ಬಾಸ್' ಮನೆಯಲ್ಲಿ 'ಮಾಸ್' ಫೀಲ್ ಕೊಡುತ್ತಿರುವ ಮೇಘ ಮೂಲತಃ ಕೊಡಗು ಜಿಲ್ಲೆಯ ಶನಿವಾರ ಸಂತೆಯ ಹಾರೆಹೊಸೂರು ಗ್ರಾಮದ ಹುಡುಗಿ.
ಯಾರೀ 'ಕಂಗ್ಲೀಷ್ ಕುವರಿ' ನಿವೇದಿತಾ ಗೌಡ.? ನಿಜ ಬದುಕಿನ ಅನಾವರಣ

ಪಕ್ಕಾ ಲೋಕಲ್ ಹುಡುಗಿ
''ಡೆವಿಲ್ ಈಸ್ ಹಿಯರ್'' ಅಂತ ಹೇಳ್ತಾ 'ಬಿಗ್ ಬಾಸ್' ಗೃಹಪ್ರವೇಶ ಮಾಡಿದ ಮೇಘ ಪಿಝಾ-ಬರ್ಗರ್ ತಿನ್ನುವ ಹುಡುಗಿ ಅಲ್ಲ. ಪಾರ್ಕ್ ನಲ್ಲಿ ಕೂತ್ಕೊಂಡು ಕಿಲಕಿಲ ಅಂತ ಮಾತನಾಡುವ ಹುಡುಗಿಯೂ ಅಲ್ಲ. ಪಕ್ಕಾ ಲೋಕಲ್ ಹುಡುಗಿ.!
'ಬಿಗ್ ಬಾಸ್' ಮನೆಗೆ ತೆರಳಿದ ನಟಿ ಅನುಪಮಾ ಗೌಡ ಕಣ್ಣೀರಿನ ಕಥೆ ಇದು!

ಡಿಗ್ರಿ ಓದುತ್ತಿರುವ ಮೇಘ
ಸದ್ಯ ಅಂತಿಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿದ್ದಾರೆ ಮೇಘ.

ಮದುವೆಯಿಂದ ತಪ್ಪಿಸಿಕೊಳ್ಳಲು....
ಮದುವೆ ಆಗುವುದರಿಂದ ತಪ್ಪಿಸಿಕೊಳ್ಳಲು ವಿವಿಧ ರೀತಿಯಲ್ಲಿ ಹುಡುಗರನ್ನು ಓಡಿಸಿರುವ ಮೇಘ ಇದೀಗ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿ

ತಂಟೆಗೆ ಬಂದ್ರೆ ಸುಮ್ಮನೆ ಇರಲ್ಲ.!
ಎಲ್ಲರ ಜೊತೆ ಹೊಂದಿಕೊಳ್ಳುವ ಸೌಜನ್ಯ ಇರುವ ಮೇಘ ರವರಿಗೆ ತಪ್ಪನ್ನ ಎತ್ತಿ ತೋರಿಸುವ ಧೈರ್ಯ ಕೂಡ ಇದೆ. ಹೀಗಾಗಿ, 'ಬಿಗ್ ಬಾಸ್' ಮನೆಯೊಳಗೆ ಯಾರಾದರೂ ತಂಟೆಗೆ ಬಂದರೆ ತರಾಟೆಗೆ ತೆಗೆದುಕೊಳ್ಳದೆ ಮೇಘ ಸುಮ್ಮನೆ ಅಂತೂ ಕೂರಲ್ಲ.

ಮೂರೇ ಬಾರಿ ಬೆಂಗಳೂರಿಗೆ ಬಂದಿರೋದು.!
ಇಲ್ಲಿಯವರೆಗೂ ಮೇಘ ಬೆಂಗಳೂರಿಗೆ ಬಂದಿರುವುದು ಮೂರೇ ಬಾರಿ. ಒಮ್ಮೆ ಒಬ್ಬರ ಮದುವೆಗೆ, ಇನ್ನೊಮ್ಮೆ 'ಬಿಗ್ ಬಾಸ್' ಆಡಿಷನ್ ಗೆ ಅಂತ ಬೆಂಗಳೂರಿಗೆ ಬಂದಿದ್ದ ಮೇಘ ಈಗ ನೇರವಾಗಿ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಇರುವ 'ದೊಡ್ಮನೆ'ಯೊಳಗೆ ಕಾಲಿಟ್ಟಿದ್ದಾರೆ.

'ಬಿಗ್ ಬಾಸ್' ಗೆದ್ದರೆ ಕಾರು ಗಿಫ್ಟ್
''ಬಿಗ್ ಬಾಸ್ ಗೆದ್ದರೆ, ಕಾರು ಕೊಡಿಸುವೆ'' ಅಂತ ಮೇಘ ರವರ ಟೀಚರ್ ಹೇಳಿದ್ದಾರಂತೆ. ಹೀಗಾಗಿ, 'ಬಿಗ್ ಬಾಸ್' ಗೆಲ್ಲಲೇಬೇಕು ಎಂಬ ಛಲ ಮೇಘ ರವರಿಗಿದೆ.

ಪ್ಲಾನ್ ಮಾಡಿಕೊಂಡು ಬಂದಿಲ್ಲ
53 ಕೆ.ಜಿ ತೂಗುವ ಮೇಘ ಯಾವುದೇ ಪ್ಲಾನ್ನಿಂಗ್ ಇಲ್ಲದೆ, ಹೀಗೆ ಇರಬೇಕು ಅಂತ ಮೈಂಡ್ ನಲ್ಲಿ ಫಿಕ್ಸ್ ಮಾಡಿಕೊಳ್ಳದೇ 'ಬಿಗ್ ಬಾಸ್' ಮನೆಗೆ ಎಂಟ್ರಿಕೊಟ್ಟಿದ್ದಾರೆ. ವಾಪಸ್ ಬರುವ ಹೊತ್ತಿಗೆ ಸುದೀಪ್ ಕೈಯಲ್ಲಿ 'ಒಳ್ಳೆ ಹುಡುಗಿ' ಅಂತ ಎನಿಸಿಕೊಳ್ಳುವ ಇಚ್ಛೆ ಮೇಘ ರವರಿಗಿದೆ.

ಮೇಘ 'ಬಿಗ್ ಬಾಸ್' ಜರ್ನಿ ಹೇಗಿರುತ್ತೋ.?
ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ 'ಪ್ರಥಮ್ ತಂಗಿ' ಅಂತಲೇ ಮೇಘ ರವರನ್ನ ಟ್ರೋಲ್ ಮಾಡಲಾಗುತ್ತಿದೆ. ''ಪಕ್ಕಾ ಲೋಕಲ್ ನಾನು'' ಎಂದಿರುವ ಮೇಘ ರವರ 'ಬಿಗ್ ಬಾಸ್' ಜರ್ನಿ ಹೇಗಿರುತ್ತೋ, ನೋಡೋಣ.