For Quick Alerts
ALLOW NOTIFICATIONS  
For Daily Alerts

'ಕಾಮಿಡಿ ಕಂಪನಿ'ಯ ಮಹಾರಾಜ ಈ ಶಿವರಾಜ

|

ಕಲೆಗೆ, ಕಲಾವಿದರಿಗೆ ಬೆಲೆಯಿಲ್ಲ. ಕಲೆಯನ್ನು ನಂಬಿಕೊಂಡು ಬದುಕಲು ಸಾಧ್ಯವಿಲ್ಲ ಎನ್ನುವ ಮಾತುಗಳ ಆಗಾಗ ಕೇಳುತ್ತೇವೆ. ಆದರೆ, ಇಲ್ಲೊಬ್ಬ ಕಲಾವಿದ ಕಲೆಗೆ ಬೆಲೆಯಿದೆ ಎಂದು ಗಟ್ಟಿಯಾಗಿ ಹೇಳುತ್ತಾರೆ. ಅವರೇ ಶಿವರಾಜ್ ಡಿ.ಎನ್.ಎಸ್.

ಶಿವರಾಜ್ ಸದ್ಯ, ಕಲರ್ಸ್ ಕನ್ನಡ ವಾಹಿನಿ ಪ್ರಸಾರ ಆಗುತ್ತಿರುವ 'ಕಾಮಿಡಿ ಕಂಪನಿ' ಕಾರ್ಯಕ್ರಮದ ಸ್ಪರ್ಧಿಯಾಗಿದ್ದಾರೆ. ಮೂಲತಃ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ದಾಸನಹುಂಡಿಯಲ್ಲಿ ಹುಟ್ಟಿ ಬೆಳೆದು, ಈಗ ಬೆಂಗಳೂರಿನಲ್ಲಿ ತನ್ನ ಕನಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.

ನಿರೂಪಕಿಯಾದ ಡಿಂಪಲ್ ಕ್ವೀನ್ ರಚಿತಾ ರಾಮ್

ತಮ್ಮನ್ನ ತಾವು ಗುರುತಿಸಿಕೊಳ್ಳುವಂತೆ ಗೆಳೆಯರ ಜೊತೆಗೂಡಿ ಎರಡ್ಮೂರು ಕಿರುಚಿತ್ರ ನಿರ್ಮಿಸಿದ್ದರು. ಈಗ 'ಕಾಮಿಡಿ ಕಂಪನಿ'ಯಲ್ಲಿ ಚಿಕ್ಕದು, ದೊಡ್ಡದು ಎನ್ನದೆ ಸಿಕ್ಕಂತ ಎಲ್ಲಾ ಪಾತ್ರಗಳನ್ನ ನಿರ್ವಹಿಸಿ ವರ್ಸ್ ಟೈಲ್ ಆಕ್ಟರ್ ಅಂತ ಗುರುತಿಸಿಕೊಳ್ಳುತ್ತಿದ್ದಾರೆ. ಮುಂದೆ ದೊಡ್ಡ ಹೆಸರು ಮಾಡುವ ಭರವಸೆಯನ್ನು ಈ ಸಣ್ಣ ಕಲಾವಿದ ಮೂಡಿಸಿದ್ದಾರೆ. ತಮ್ಮ ನಟನೆಯ ಮೂಲಕ ಗಮನ ಸೆಳೆದಿದ್ದಾರೆ. ನಟನೆಯ ಜೊತೆಗೆ ಬರವಣಿಗೆ, ಓದು, ಫೋಟೋಗ್ರಪಿಯಲ್ಲಿ ಕೂಡ ಆಸಕ್ತಿ ಹೊಂದಿದ್ದಾರೆ.

ರಂಗಭೂಮಿಯ ಎನ್ನುವುದು ಬೇರೆಯದ್ದೇ ಪ್ರಪಂಚ

ರಂಗಭೂಮಿಯ ಎನ್ನುವುದು ಬೇರೆಯದ್ದೇ ಪ್ರಪಂಚ

''ರಂಗಭೂಮಿ ಅದೊಂತರ ಬೇರೆಯದ್ದೆ ಪ್ರಪಂಚ, ಕಲ್ಪನಾಲೋಕದಂತೆ. ಬೇಕು, ಬೇಡ, ಆಸೆ, ಕನಸು ಎಲ್ಲವನ್ನೂ ತುಂಬಿಕೊಂಡ ಕಣಜ. ನನಗೆ ಜೀವನದಲ್ಲಿ ಅನೇಕ ವಿಚಾರಗಳ ಬಗ್ಗೆ ಅರಿವು ಮೂಡಿಸಿವುದರ ಜೊತೆಗೆ ಮಾತನಾಡುವುದು ಜೀವಿಸುವುದು ಬದುಕಲು ಮತ್ತು ನಟಿಸಲು ಬೇಕಾದ ಕ್ರಿಯಾಶೀಲತೆ. ಕಲ್ಪನಾ ಶಕ್ತಿಯನ್ನು ಕಲಿಸಿಕೊಟ್ಟತಂದ್ದು. ನನ್ನ ಅಭಿವ್ಯಕ್ತಿಗೆ ಜೀವಂತ ಮಾಧ್ಯಮದಂತೆ ಕಂಡಿದ್ದು ರಂಗಭೂಮಿಯೊಂದೆ. ರಂಗಭೂಮಿ ಬಗ್ಗೆ ಆಸಕ್ತಿ ಹೊಂದಿದ್ದ ನಾನು ಅಭಿನಯ ತರಂಗ ಮೂಲಕ ಕಲಿಕೆ ಆರಂಭಿಸಿದೆ.''

ಅಭಿನಯಿಸಿದ ಪ್ರಮುಖ ನಾಟಕಗಳು

ಅಭಿನಯಿಸಿದ ಪ್ರಮುಖ ನಾಟಕಗಳು

''ರಂಗಭೂಮಿಯಲ್ಲಿ ನನ್ನ ನ್ಯೂನತೆಗಳನ್ನು ಕಂಡುಕೊಂಡು ಸರಿಮಾಡಿಕೊಳ್ಳುವುದರೊಂದಿಗೆ, 'ಟ್ರೈನ್ ಟೂ ಪಾಕಿಸ್ತಾನ್', 'ಸಿಜೂವಾನ್ ನಗರ ಸಾದ್ವಿ' (the good woman of szechwan), ಈ ಕೆಳಗಿನವರು ( The Lower Depths) 'ತಲೆದಂಡ' ನಾಟಕಗಳಲ್ಲಿ ಮತ್ತು ಹತ್ತು ಹಲವು ಬೀದಿ ನಾಟಗಳಲ್ಲಿ ಅಭಿನಯಿಸಿದ್ದೇನೆ. ಮಂಜುನಾಥ್ ಬಡಿಗೇರ್, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಪ್ರಸಾಂತ್ ಕೆ.ಎಸ್. ಈ ಮೂವರು ನಿರ್ದೇಶಕರು ಗಳಿಂದ ಬಹಳ ಕಲಿತಿದ್ದೇನೆ. ನಾನು ಮೊದಲ ಪಾಳಿ ಕೆಲಸ ಮುಗಿಸಿಕೊಂಡು ಪ್ರತಿನಿತ್ಯ ತಪ್ಪದೆ ತರಗತಿಗೆ ಹಾಜರಾಗುತ್ತಿದ್ದೆ.''

ಬಿಗ್ ಬಾಸ್ ನಿರ್ಧಾರಕ್ಕೆ ವೀಕ್ಷಕರು ಬೇಸರ: ಬೇಡಿಕೆಯಿಟ್ಟ ಸಾಮಾನ್ಯ ಜನರು

ಬಹಳ ಕಾಡಿದ ಪಾತ್ರ

ಬಹಳ ಕಾಡಿದ ಪಾತ್ರ

''ಟ್ರೈನ್ ಟು ಪಾಕಿಸ್ಥಾನ್' ನಾಟಕದಲ್ಲಿ ಬರುವ ಮನೋಮಾಜ್ರಾ ಗುರುದ್ವಾರದ ಭಾಯಿ ಮೀಥ್ ಸಿಂಗ್ ಪಾತ್ರ ನನಗೆ ತುಂಬಾ ಕಾಡಿದಂತ ಹಾಗೂ ಖುಷಿಕೊಟ್ಟಂತ ಪಾತ್ರ. ಪ್ರತಿನಿತ್ಯ ಒತ್ತಡವಿರುವ ಮಾಧ್ಯಮದ ಛಾಯಗ್ರಾಹಕನ ಕೆಲಸ ಮಾಡಿಕೊಂಡು ಬಂದು, ಪಾತ್ರ ಮಾಡಬೇಕಿತ್ತು, ಆ ಒತ್ತಡದ ಕೆಲಸದ ನಡುವೆಯೂ ದೊಡ್ಡ ಪಾತ್ರ ನಿಭಾಯಿಸಬಲ್ಲೇ ಎಂದು ನಂಬಿ ಆಗ ನನಗೆ ಪಾತ್ರ ನೀಡಿದ್ದ ನಿರ್ದೇಶಕರು ಮತ್ತು ಪ್ರಾಂಶುಪಾಲರಾದ ಗೌರಿ ಮೇಡಂ ರವರಿಗೆ ಇಂದಿಗೂ ಕೃತಜ್ಞ.''

ಸಿನಿಮಾ, ನಾಟಕ, ಓದು ಮತ್ತು ಫೋಟೋಗ್ರಫಿ

ಸಿನಿಮಾ, ನಾಟಕ, ಓದು ಮತ್ತು ಫೋಟೋಗ್ರಫಿ

''ಹಳ್ಳಿಯಲಿದ್ದಾಗ ಮನೆಯ ಆರ್ಥಿಕ ಪರಿಸ್ಥಿತಿಯ ಇನ್ನೆಡೆಯಿಂದಾಗಿ ತಂದೆ ನಟರಾಜು, ತಾಯಿ ವಿನೋದಮ್ಮರವರೊಂದಿಗೆ ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಬಂದು ನಾಲ್ಕೈದು ವರ್ಷ ಹಲವಾರು ಕೆಲಸಗಳನ್ನು ಮಾಡಿ ಚೆನ್ನಾಗಿ ದುಡಿದು ಆರ್ಥಿಕ ಪರಿಸ್ಥಿತಿ ತಕ್ಕಮಟ್ಟಿಗೆ ಸಮನಾದ ನಂತರ ನನ್ನ ಕನಸಿನ ಹಾದಿಯ ಹೊಸ ಪಯಣ ಆರಂಬಿಸಿದೆ. ಇವರು 2012 ರಿಂದ ಕನ್ನಡದ ಸುದ್ದಿ ವಾಹಿನಿಗಳಲ್ಲಿ ಛಾಯಾಗ್ರಾಹಕನಾಗಿ ಕಾರ್ಯ ನಿರ್ವಹಿಸುತ್ತ ಜೊತೆ ಜೊತೆಗೆ ಥಿಯೇಟರ್ ಬಗೆಗಿನ ಡಿಪ್ಲೋಮಾ ಕೋರ್ಸ್ ಮುಗಿಸಿಕೊಂಡು, ಅಭಿನಯಿಸಲು ಮುಂದಾದೆ. ಬಿಳಿಗಿರಿ ರಂಗನ ಬೆಟ್ಟದ ಕಾಡಂಚಲ್ಲೆ ಹುಟ್ಟಿ ಬೆಳೆದ ಇವರಿಗೆ ಶಾಲಾ ದಿನಗಳಿಂದಲೂ ನಾಟಕ, ಕುಣಿತ, ದೇವರ ಭಜನೆ, ಎಂದರೆ ವಿಶೇಷ ಪ್ರೀತಿಯಂತೆ. ಸಿನಿಮಾ, ನಾಟಕ, ಓದು ಮತ್ತು ಫೋಟೋಗ್ರಫಿ ನನ್ನ ನಿರಂತ ಹವ್ಯಾಸ ಹಾಗೂ ಅಭ್ಯಾಸ ಎನ್ನುತ್ತಾರೆ ಶಿವರಾಜ್.

'ಬಿಗ್ ಬಾಸ್ ಕನ್ನಡ 7'ನಲ್ಲಿ ಕಾಮನ್ ಮ್ಯಾನ್ ಗಳಿಗೆ ಅವಕಾಶ ನೀಡಿಲ್ಲ, ಏಕೆ?

ಕಲರ್ಸ್ ಕನ್ನಡಕ್ಕೆ ಧನ್ಯವಾದ

ಕಲರ್ಸ್ ಕನ್ನಡಕ್ಕೆ ಧನ್ಯವಾದ

ಥಿಯೇಟರ್ ಕೋರ್ಸ್ ಮುಗಿಸಿ ಆಡಿಷನ್, ನಾಟಕ, ಶಾರ್ಟ್ ಫಿಲ್ಮ್ ಅಂತ ಅಲೆದಾಡುತ್ತಿದ್ದ ಇಂತಹ ಹತ್ತು ಹಲವು ಪ್ರತಿಭೆಗಳಿಗೆ ಇಂದು ವೇದಿಕೆ ಕಲ್ಪಿಸಿದ್ದು, ಕಲರ್ಸ್ ಕನ್ನಡ ವಾಹಿನಿಯ. ‘ಕಾಮಿಡಿ ಕಂಪನಿಯಲ್ಲಿ ಅವಕಾಶ ನೀಡಿದ ಕಲರ್ ಕನ್ನಡ ಹಾಗೂ ಪಿಕ್ಸೆಲ್ ಪಿಕ್ಚರ್ ವಿಕ್ಕಿ ಸರ್, ಶ್ರದ್ದಾ ಮೇಡಂ, ವಿಕ್ಕಿ ಚಿಕ್ಕಮಗಳೂರು, ಕೀರ್ತಿ ನಾರಾಯಣ್ ಸರ್, ಪುನೀತ್ ಗೌಡ, ಪ್ರಸನ್ನ, ಅರುಣ್ ಮೂರ್ತಿ, ಗಿರೀಶ್ ಗಿರ್ಗಿ, ಚಂದ್ರಶೇಖರ, ಅಭಿನಯ್ ಹಾಗು ಚಂದ್ರಹಾಸ ಬಳಂಜ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಕರ್ನಾಟಕದ ಜನತೆ ಆಶೀರ್ವಾದ ಇರಲಿ.

English summary
All about 'Comedy Company' contestant Shivaraj Dns.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more