»   » 'ಅಮೃತವರ್ಷಿಣಿ' ಮತ್ತು 'ಅವನು ಮತ್ತೆ ಶ್ರಾವಣಿ' ಮಹಾಸಂಚಿಕೆ

'ಅಮೃತವರ್ಷಿಣಿ' ಮತ್ತು 'ಅವನು ಮತ್ತೆ ಶ್ರಾವಣಿ' ಮಹಾಸಂಚಿಕೆ

Posted By:
Subscribe to Filmibeat Kannada

ಜನವರಿ 16 ರಿಂದ ಕರುನಾಡ ವೀಕ್ಷಕರ ಪ್ರೀತಿಗೆ ಪಾತ್ರವಾಗಿರುವ 'ಅಮೃತವರ್ಷಿಣಿ' ಮತ್ತು 'ಅವನು ಮತ್ತೆ ಶ್ರಾವಣಿ' ಧಾರಾವಾಹಿಗಳ ಮಹಾ ಸಂಗಮವಾಗಲಿದೆ.

ಈಗಾಗಲೇ ಈ ಎರಡು ಧಾರಾವಾಹಿಗಳ ನಾಯಕಿಯರು ಕಷ್ಟದಲ್ಲಿ ಸಿಲುಕಿಗೊಂಡಿದ್ದಾರೆ. ಹೀಗಾಗಿ ಈ ಎರಡು ಕುಟುಂಬದವರು ಪುಣ್ಯಕ್ಷೇತ್ರಕ್ಕೆ ಒಟ್ಟಿಗೆ ಹೋಗುವುದು, ಅಲ್ಲಿ ಇವರುಗಳ ನಡುವೆ ಇರುವ ಆಂತರಿಕ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಪಡುತ್ತಾರೆ. ಈ ಪಯಣದಲ್ಲಿ ಸಾಕಷ್ಟು ಕುತೂಹಲಕಾರಿ ಘಟನೆಗಳು, ಒಂದಿಷ್ಟು ಮುಚ್ಚಿಟ್ಟ ಸಂಗತಿಗಳನ್ನು ಚಿತ್ರಿಸಲಾಗುವುದು.[ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಜೀವನ ಚೈತ್ರ']

'Amruthavarshini' and 'Avanu Mattu Shravani' Mahasanchike

ಈ 'ಮಹಾಸಂಚಿಕೆ'ಗೆ ಪ್ರಣಯ ರಾಜ ಶ್ರೀನಾಥ್ ಮತ್ತು ಪದ್ಮ ವಾಸಂತಿ ಸಾಥ್ ನೀಡಿದ್ದಾರೆ. ಈ ಸೆಲೆಬ್ರಿಟಿಗಳ ಆಗಮನದಿಂದ ಈ ಎರಡೂ ಧಾರಾವಾಹಿಗಳ ಸಮಸ್ಯೆಗೆ ಹೇಗೆ ಪರಿಹಾರ ಸಿಗುತ್ತದೆ ಎಂಬುದೇ ಕುತೂಹಲಕಾರಿ.

'Amruthavarshini' and 'Avanu Mattu Shravani' Mahasanchike

'ಅಮೃತವರ್ಷಿಣಿ' ಮತ್ತು 'ಅವನು ಮತ್ತೆ ಶ್ರಾವಣಿ' ಮಹಾಸಂಚಿಕೆ ಇದೇ ಸೋಮವಾರದಿಂದ 'ಸ್ಟಾರ್ ಸುವರ್ಣ' ವಾಹಿನಿಯಲ್ಲಿ ಪ್ರಸಾರವಾಗಲಿದೆ.

English summary
Kannada Entertainment Channel Star Suvarna's popular serials 'Amruthavarshini' and 'Avanu Mattu Shravani' Mahasanchike episodes will be aired from January 16th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada